ಮಂಗಳೂರು : ನ್ಯಾಯಾಧೀಶರು ಯುವ ವಕೀಲೆಯೊಬ್ಬರನ್ನು ಬೈದರೆಂದು ಆರೋಪಿಸಿ, ಗುರುವಾರ ಮಂಗಳೂರು ನ್ಯಾಯಾಲಯದ ಆವರಣದಲ್ಲಿ ಕಿರಿಯರು ವಕೀಲರು ಬಾಯಿಗೆ ಕಪ್ಪು ಪಟ್ಟಿ ಧರಿಸಿ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.
ಮಂಗಳೂರಿನ ಒಂದನೇ ಸಿಜೆಎಂ ಕೋರ್ಟ್‌ನಲ್ಲಿ ಬುಧವಾರ ಪ್ರಕರಣವೊಂದರ ವಿಚಾರಣೆ ವೇಳೆ ಯುವ ವಕೀಲೆಗೆ ನ್ಯಾಯಾಧೀಶರು ಬೈದಿದ್ದಾರೆ.
ಜಡ್ಜ್ ಅವರ ಮಾತಿನಿಂದ ವಕೀಲೆ ತೀವ್ರ ನೊಂದಿದ್ದರು. ಆದ್ದರಿಂದ ನ್ಯಾಯಾಧೀಶರ ಗಮನ ಸೆಳೆಯಬೇಕು ಎನ್ನುವ ಕಾರಣಕ್ಕೆ ವಕೀಲರು ಪ್ರತಿಭಟಿಸಿದರು. ಕೆಲವು ಹಿರಿಯ ವಕೀಲರೂ ಯುವ ವಕೀಲರಿಗೆ ಸಾಥ್ ನೀಡಿದ್ದರು.
