ಪಡುಬಿದ್ರಿ : ನಂಬಿಕೆ ದ್ರೋಹವೆಸಗಿ 35 ಮಂದಿಯಿಂದ ಒಟ್ಟು 4.32ಲಕ್ಷ ರೂ. ಹಣ ಪಡೆದು ಸರಕಾರದಿಂದ ತಲಾ 1ಲಕ್ಷ ರೂ. ಬಡ್ಡಿ ರಹಿತ ಸಾಲವನ್ನು ಎಲ್ಲಾ 35 ಮಂದಿಗೆ ತೆಗೆಸಿಕೊಡುತ್ತೇವೆಂದು ಹೇಳಿ ಮೋಸಮಾಡಿರುವುದಾಗಿ ಪಡುಬಿದ್ರಿ ಠಾಣೆಯಲ್ಲಿ ಪಣಿಯೂರು ನಿವಾಸಿ ಮಮ್ತಾಜ್ ಎಂಬವರು ಲಕ್ಷ್ಮೀ, ಶಿವರಾಜ್ ಹಾಗೂ ಇನ್ನೊಬ್ಬ ಆರೋಪಿಯ ಮೇಲೆ ದೂರು ಸಲ್ಲಿಸಿದ್ದಾರೆ.
ಮುಮ್ತಾಜ್ ತನ್ನ ನೆರೆಹೊರೆಯವರಿಗೆ ಬ್ಯಾಂಕಿನಿಂದ ಸಾಲ ಪಡೆಯಲು, ಮರು ಪಾವತಿಸಲು ಸಹಕರಿಸುತ್ತಿದ್ದರು. ಇದನ್ನು ತಿಳಿದ ಆರೋಪಿಗಳು ಮೋಸ ಮಾಡುವುದಕ್ಕಾಗಿ ಫೆಬ್ರವರಿ 11ರಂದು ಮಮ್ತಾಜ್ ಮನೆಯಲ್ಲೇ ಸಭೆ ಸೇರಿಸಿ ಮೊದಲಿಗೆ ತಲಾ 2000ರೂ. ನಂತೆ 72000ರೂ. ಗಳನ್ನು ಪಡೆದಿದ್ದರು. ಮತ್ತೆ ಆರೋಪಿಗಳು 1ಲಕ್ಷ ರೂ. ಸಾಲ ಪಾಸ್ ಆಗಿದೆ. ಪಡೆಯಲು ಶೂರಿಟಿ ಅಥವಾ ತಲಾ 10000ರೂ. ನಂತೆ ಪಾವತಿಸಬೇಕೆಂದಿದ್ದರು. ಅದರಂತೆ ಮುಮ್ತಾಜ್ ತಂಗಿ ಜುಬೇದಾ ಮೊಬೈಲ್ ಮೂಲಕ ಹಾಗೂ ನಗದಾಗಿ ಆರೋಪಿಗಳಿಗೆ ಹಣ ಪಾವತಿಸಲಾಗಿದೆ. ಈಗ ಸಾಲವನ್ನೂ ನೀಡದೇ, ಕೊಟ್ಟ ಹಣವನ್ನೂ ವಾಪಾಸು ಮಾಡದೇ ಮೋಸ ಮಾಡಿರುವುದಾಗಿ ಪಡುಬಿದ್ರಿ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.