137
ಮಂಗಳೂರು : ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಹೊಸವರ್ಷದ ಆಚರಣೆಯ ಪ್ರಯುಕ್ತ ಸಾರ್ವಜನಿಕ ಹಿತಾಸಕ್ತಿಯಿಂದ ಪೊಲೀಸ್ ಇಲಾಖೆ ಮಾರ್ಗಸೂಚಿಯನ್ನು ಸೂಚಿಸಿದೆ. ಎಲ್ಲರೂ ಈ ಮಾರ್ಗಸೂಚಿಗಳನ್ನು ಅನುಸರಿಸಿ ಹೊಸವರ್ಷ ಆಚರಣೆ ಮಾಡಬಹುದು ಎಂದು ತಿಳಿಸಿದೆ.
- ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್ ಮತ್ತು ಇತರ ಸಂಸ್ಥೆಗಳು ಹೊಸ ವರ್ಷಾಚರಣೆ ಆಯೋಜಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಪೂರ್ವ ಅನುಮತಿ ಪಡೆಯಬೇಕು. ಅರ್ಜಿಗಳನ್ನು ಡಿಸೆಂಬರ್ 23ರ ಸಂಜೆ 5ಗಂಟೆಯೊಳಗೆ ಸಲ್ಲಿಸಬೇಕು.
- ಹೊಸ ವರ್ಷಾಚರಣೆ ಕಾರ್ಯಕ್ರಮ ರಾತ್ರಿ 12ರೊಳಗೆ ಪೂರ್ಣಗೊಳ್ಳಬೇಕು. ಅದರ ಬಳಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಅನುಮತಿ ನೀಡಲಾಗುವುದಿಲ್ಲ.
- ಪೂರ್ವಾನುಮತಿ ಇಲ್ಲದ ಹೊಸವರ್ಷಾಚರಣೆ ಆಯೋಜಿಸಲು ಅನುಮತಿಯಿಲ್ಲ. ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
- ಆಯೋಜಕರು ಲೈಸೆನ್ಸ್ ಮತ್ತು ಅನುಮತಿ ಪ್ರಕಾರ ನಿರ್ಧರಿತ ಷರತ್ತುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
- COVID-19 ಅಥವಾ ಇತರ ಆರೋಗ್ಯ ಸಂಬಂಧಿ ಸರಕಾರದ ಸೂಚನೆಗಳು ಜಾರಿಯಾದಲ್ಲಿ ಆಯೋಜಕರು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
- ಮದ್ಯದ ಮಾರಾಟ ಮತ್ತು ವಿತರಣೆಗೆ ಆಬಕಾರಿ ಇಲಾಖೆಯಿಂದ ಪೂರ್ವ ಲಿಖಿತ ಅನುಮತಿ ಅಗತ್ಯ.
- ಸಾರ್ವಜನಿಕ ಸ್ಥಳಗಳಲ್ಲಿ (ಬಸ್ ನಿಲ್ದಾಣ, ಉದ್ಯಾನ, ಕ್ರೀಡಾಂಗಣ, ರೈಲು ನಿಲ್ದಾಣ) ಧೂಮಪಾನ ಮತ್ತು ಮದ್ಯಪಾನ ನಿಷೇಧಿಸಗಿದೆ.
- ವಿದ್ಯಾರ್ಥಿಗಳು ಅಥವಾ ಯುವಕರು ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ಅಥವಾ ಗಲಾಟೆಯ ವರ್ತನೆ ಮಾಡಿದ್ದಲ್ಲಿ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುತ್ತದೆ.
- ಧ್ವನಿಮುದ್ರಣ ವ್ಯವಸ್ಥೆಗಳಿಗೆ ಪೂರ್ವ ಅನುಮತಿ ಅಗತ್ಯವಿದೆ. ಶಬ್ದ ಮಟ್ಟವು Noise Pollution Rules, 2000 ಮತ್ತು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ಪಾಲಿಸಬೇಕು. ಡಿಜೆ ನಿಷೇಧಿಸಲಾಗಿದೆ.
- ಆಯೋಜಕರು ಅನಾಹುತ ತಡೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
- ಹದಿನೆಂಟು ವರ್ಷದ ಕೆಳಗಿನವರಿಗೆ ಮದ್ಯ ವಿತರಿಸಕೂಡದು. ಪೋಷಕರಿಲ್ಲದ ಅಪ್ರಾಪ್ತರಿಗೆ ಕಾರ್ಯಕ್ರಮಗಳಿಗೆ ಪ್ರವೇಶ ನಿರ್ಬಂಧಿತ.
- ಅಶ್ಲೀಲ ನೃತ್ಯಗಳು, ಅರೆನಗ್ನ ಪ್ರದರ್ಶನಗಳು, ಜೂಜು ಮತ್ತು ಇತರ ಅಸಭ್ಯ ಚಟುವಟಿಕೆಗಳು ನಿಷೇಧಿಸಲಾಗಿದೆ.
- ಮಹಿಳೆಯರಿಗೆ ಕಿರುಕುಳ ನೀಡುವ ಅಥವಾ ಅಸಭ್ಯ ರೀತಿಯಲ್ಲಿ ವರ್ತಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ವಿಶೇಷ ಕಾರ್ಯಪಡೆಯನ್ನು ನಿಯೋಜಿಸಲಾಗುತ್ತದೆ.
- ಹೊಸ ವರ್ಷದ ಹೆಸರಿನಲ್ಲಿ ಮನೆಗಳಿಗೆ ಅಥವಾ ಹಾಸ್ಟೆಲ್‌ಗಳಿಗೆ ಹೋಗಿ ಶಾಂತಿ ಭಂಗ ಮಾಡುವುದು ನಿಷೇಧಿಸಲಾಗಿದೆ.
- ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ, ಶಬ್ದ ಮಾಡುವುದು ಅಥವಾ ಬಾಟಲಿಗಳನ್ನು ಬೀಸುವುದು ನಿಷೇಧ.
- ಮದ್ಯಪಾನ ಮಾಡಿ ವಾಹನ ಚಲಾಯಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ sober driver ಅನ್ನು ನಿಯೋಜಿಸಬೇಕು.
- ವಾಹನಗಳೊಂದಿಗೆ ಚಟುವಟಿಕೆಗಳು(wheeling, drag racing, loud noises) ನಿಷೇಧ. ವಿಶೇಷ ತಂಡಗಳು ಪಹರೆಯಲ್ಲಿರುತ್ತವೆ.
- ಸಮುದ್ರ ತೀರಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಅಥವಾ ಮದ್ಯಪಾನ ನಿಷೇಧ.
- ಪಟಾಕಿ ಸಿಡಿಸುವುದು ಅಥವಾ ಸಾರ್ವಜನಿಕ ಶಾಂತಿಗೆ ಭಂಗ ಮಾಡುವ ಚಟುವಟಿಕೆ ನಿಷೇಧ.
- ಆಯೋಜಕರು ಅಗತ್ಯ ಅಗ್ನಿಶಾಮಕ ಸಾಧನಗಳು, ತುರ್ತು ವೈದ್ಯಕೀಯ ವಾಹನಗಳು ಮತ್ತು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು.