ಬೆಂಗಳೂರು : ಕರ್ನಾಟಕ ಸರಕಾರದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ. ತಲ್ಲೂರು ಶಿವರಾಮ ಶೆಟ್ಟಿ ಅವರು ಗುರುವಾರ ಬೆಂಗಳೂರಿನ ಕಚೇರಿಯಲ್ಲಿ ಅಧಿಕಾರವನ್ನು ಸ್ವೀಕರಿಸಿದರು. ವಿವಿಧ ಅಕಾಡೆಮಿಗಳ ಅಧ್ಯಕ್ಷರ ನೇಮಕಾತಿ ಹಿಂದೆಯೇ ಆಗಿದ್ದರು ಚುನಾವಣೆ ನೀತಿ ಸಂಹಿತೆ ದೀರ್ಘ ಅವಧಿ ಜಾರಿಯಲ್ಲಿದ್ದ ಕಾರಣ ಅಧಿಕಾರ ಸ್ವೀಕಾರ ವಿಳಂಬವಾಗಿದೆ.
ಅಧಿಕಾರ ಸ್ವೀಕರಿಸಿದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ ಯಕ್ಷಗಾನ ಉಳಿದರೆ ಕನ್ನಡ ಉಳಿಯುತ್ತದೆ, ಅಕಾಡೆಮಿ ಉಳಿಯುತ್ತದೆ. ಯಕ್ಷಗಾನ ರಾಜ್ಯದ ದೇಶದ ಕಲೆ ಆಗಬೇಕು ಎಲ್ಲರೂ ಸೇರಿ ಯಕ್ಷಗಾನದ ಏಳಿಗೆಗೆ ಪರಿಪೂರ್ಣವಾಗಿ ಕೆಲಸ ಮಾಡಬೇಕು ಕಲೆಯನ್ನು ಸರಕಾರ ಮತ್ತು ಜನರು ಉಳಿಸಿ ಬೆಳೆಸಬೇಕು ಯಕ್ಷಗಾನದ ಪರಿಚಾರಕನಾದ ನನಗೆ ಇಂತಹದೊಂದು ಸೇವೆ ಸಲ್ಲಿಸಲು ಸರಕಾರ ಅವಕಾಶ ಮಾಡಿಕೊಟ್ಟಿದೆ ಈ ಜವಾಬ್ದಾರಿ ನಿರ್ವಹಿಸಲು ಅವಕಾಶಕೊಟ್ಟವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಅಕಾಡೆಮಿ ರಿಜಿಸ್ಟಾರ್ ನಮ್ರತಾ ಎನ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ್, ಸದಸ್ಯ ಮೋಹನ್ ಕೊಪ್ಪಳ, ಜಿ. ವಿ. ಎಸ್ ಉಲ್ಲಾಳ್, ಸಿಬ್ಬಂದಿಗಳು ಉಪಸ್ಥಿತರಿದ್ದರು.