74
ಮಣಿಪಾಲ : ಕರ್ನಾಟಕ ಲೇಖಕಿಯರ ಸಂಘವು ಡಾ| ಅನುಪಮಾ ನಿರಂಜನ ಅವರ ಹೆಸರಿನಲ್ಲಿ ನೀಡುವ ಅನುಪಮಾ ದತ್ತಿ ಪ್ರಶಸ್ತಿ ಪುರಸ್ಕೃತ ಲೇಖಕಿಯರ ಹೆಸರನ್ನು ಪ್ರಕಟಿಸಿದೆ.
2020ನೇ ಸಾಲಿನ ಪ್ರಶಸ್ತಿ ಡಾ| ವಿಜಯಾ ಸುಬ್ಬರಾಜ್, 2021ನೇ ಸಾಲಿಗೆ ಡಾ| ವಸುಂಧರಾ ಭೂಪತಿ, 2022ನೇ ಸಾಲಿಗೆ ಡಾ| ಸಬೀಹಾ ಭೂಮಿಗೌಡ, 2023ನೇ ಸಾಲಿಗೆ ಡಾ| ಕೆ.ಆರ್. ಸಂಧ್ಯಾ ರೆಡ್ಡಿ ಹಾಗೂ 2024ನೇ ಸಾಲಿನ ಅನುಪಮಾ ಪ್ರಶಸ್ತಿಗೆ ಡಾ| ಲತಾಗುತ್ತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷೆ ತಿಳಿಸಿದ್ದಾರೆ.