2 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಡಾ. ಭರತ್ ಶೆಟ್ಟಿ ಗುದ್ದಲಿಪೂಜೆ

ಗುರುಪುರ : ಗುರುಪುರ ಪಂಚಾಯತ್ ವ್ಯಾಪ್ತಿಯ ಮೂಳೂರು ಗ್ರಾಮದ ಕೊಪ್ಪ ಪರಿಶಿಷ್ಟ ಜಾತಿ ಕಾಲೊನಿ ಮತ್ತು ಮೂಳೂರು ಮಠದ ಸೈಟ್‌ನ ಶಿವಗಿರಿ ಬಡಾವಣೆಯಲ್ಲಿ ತಲಾ 9 ಮತ್ತು 6 ಲಕ್ಷ ರೂ ವೆಚ್ಚದ 2 ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ನ. 18ರಂದು ಗುದ್ದಲಿ ಪೂಜೆ ನೆರವೇರಿಸಿದರು.

ಎರಡೂ ರಸ್ತೆ ಅಭಿವೃದ್ಧಿ ಕಾಮಗಾರಿ ಶಾಸಕರು ಒದಗಿಸಿರುವ ಒಟ್ಟು 15 ಲಕ್ಷ ರೂ ಅನುದಾನದಲ್ಲಿ ನಡೆಯಲಿದೆ. ಗುರುಪುರ ಪಂಚಾಯತ್ ಸದಸ್ಯರಾದ ಸುನಿಲ್ ಸುವರ್ಣ, ರಾಜೇಶ್ ಸುವರ್ಣ, ಹರೀಶ್ ಬಳ್ಳಿ, ನಳಿನಿ ಶೆಟ್ಟಿ, ಪಕ್ಷ ಪ್ರಮುಖರು ಹಾಗೂ ಸ್ಥಳೀಯರು ನಾಗರಿಕರು ಉಪಸ್ಥಿತರಿದ್ದರು.

Related posts

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ

ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಾಮುಕ ಅರೆಸ್ಟ್