ದೊರೆಕೆರೆ ಕೆರೆಯಲ್ಲಿ ಇರುವ ವಿವಿಧ ಗಿಡಮೂಲಿಕೆಗಳು, ಪೊದೆಗಳು ಮತ್ತು ಬಳ್ಳಿಗಳು, ಮರಗಳು, ಚಿಟ್ಟೆಗಳು ಮತ್ತು ಪಕ್ಷಿಗಳ ಬಗ್ಗೆ ಬೆಳಕು ಚೆಲ್ಲುವ ದೊರೆಕೆರೆ ಜೀವವೈವಿಧ್ಯತೆಯ ವರದಿಯನ್ನು ಮಾನ್ಯ ಗೌರವಾನ್ವಿತ ಸಚಿವರಾದ ಶ್ರೀ. ಈಶ್ವರ ಖಂಡ್ರೆ, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ, ಕರ್ನಾಟಕ ಸರ್ಕಾರ ಇವರ ಉಪಸ್ಥಿತಿಯಲ್ಲಿ ಹಾಗೂ ಪರಿಸರವಾದಿಗಳನ್ನೂ ಒಳಗೊಂಡಂತೆ ದಿನಾಂಕ 19 ಜುಲೈ 2024 ಗಾಂಧಿ ಭವನದಲ್ಲಿ ಬೆಳಿಗ್ಗೆ 11ಗಂಟೆಗೆ ಆಯೋಜಿಸಲಾಗಿದೆ.
ಕೆರೆ ಸರೋವರಗಳ ಜೀವ ವೈವಿಧ್ಯತೆ ಹಾಗೂ ಅದರ ಸಂರಕ್ಷಣೆ ಬಗ್ಗೆ ಕಾಳಜಿಯುಳ್ಳ ತಾವು ಈ ಸಮಾರಂಭದಲ್ಲಿ ಭಾಗವಹಿಸುವಂತೆ ಕೋರುತ್ತಿದ್ದೇವೆ.
