ಮಂಗಳೂರು : 102ನೇ ವರ್ಷದ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮ ಆಕ್ಟೋಬರ್ 8ರಿಂದ ಆರಂಭವಾಗಲಿದ್ದು ಈ ಬಾರಿ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾ ಯಾತ್ರೆಯಲ್ಲಿ D.J., ನಾಸಿಕ ಬ್ಯಾಂಡ್‌ಗಳಿಗೆ ನಿಷೇಧ ಹೇರಿ ಶ್ರೀ ಶಾರದಾ ಮಹೋತ್ಸವ ಸಮಿತಿ ನಿರ್ಣಯ ಕೈಗೊಂಡಿದೆ.
ಶ್ರೀ ಶಾರದಾ ಮಾತೆಯ ವಿಸರ್ಜನಾ ಮಹೋತ್ಸವದ ಶೋಭಾ ಯಾತ್ರೆಯಲ್ಲಿ ಯಾವುದೇ ಡಿ.ಜೆ. ಹಾಗೂ ನಾಸಿಕ ಬ್ಯಾಂಡ್‌ಗಳಿಗೆ ಭಾಗವಹಿಸಲು ಅವಕಾಶವಿಲ್ಲವೆಂದು ಸಮಿತಿಯು ನಿರ್ಧರಿಸಿದೆ. ಇದರ ಬಗ್ಗೆ ಸಂಭಂದಪಟ್ಟ ಉತ್ಸವದಲ್ಲಿ ಭಾಗವಹಿಸುವ ವೇಷಧಾರಿಗಳ ಯಾ ಇತರ ಕಲಾ ತಂಡಗಳಿಗೆ ಮೊದಲೇ ತಿಳಿಸಲಾಗುವುದು. ಶೋಭಾ ಯಾತ್ರೆಯಲ್ಲಿ ಭಾಗವಹಿಸುವ ವೇಷಧಾರಿ ಹಾಗೂ ಕಲಾ ತಂಡಗಳ ಟ್ಯಾಬ್ಲೋಗಳು ಖಡ್ಡಾಯವಾಗಿ ಭವಂತಿ ರಸ್ತೆ ಮತ್ತು ರಥ ಬೀದಿಯ ಒಂದು ಬದಿಯಲ್ಲಿ ಗಂಟೆ 7.45ರ ಒಳಗೆ ತಮಗೆ ಕೊಟ್ಟ ಅನುಕ್ರಮಣಿಕೆಯಂತೆ ನಿಂತು ಉತ್ಸವದ ಸ್ಠಾನದಿಂದಲೇ ಹೊರಡಬೇಕು ಎಂದು ಶ್ರೀ ಶಾರದಾ ಮಹೋತ್ಸವ ಸಮಿತಿ (ರಿ) ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.