ಮಣಿಪಾಲ : ಶ್ರೀ ಉಮಾಮಹೇಶ್ವರ ಸಿದ್ದೇಶ್ವರಿ ದೇವಿಯ ಸನ್ನಿಧಿಯಲ್ಲಿ ನವರಾತ್ರಿಯ 9 ದಿನಗಳಲ್ಲಿ ಪ್ರತಿ ದಿನ ಚಂಡಿಕಾ ಹೋಮ ಮತ್ತು ಅನ್ನ ಸಂತರ್ಪಣೆ ಕಾರ್ಯಕ್ರಮವಿರುವುದು.
ದಿನಾಂಕ 3.10.2024ರಂದು ಪ್ರಥಮ ದಿನ ದೇವಿಯ ಸನ್ನಿಧಿಯಲ್ಲಿ ಚಂಡಿಕಾ ಹೋಮ ಸೇವೆ ಸಂಪನ್ನಗೊಂಡ ನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ದಾನಿಗಳಿಂದ ರಚಿಸಲ್ಪಟ್ಟ ರಜತ ಪ್ರಭಾವಳಿಯನ್ನು ಮಣಿಪಾಲ ಮಾಹೆಯ ಸಹಕುಲಾಧಿಪತಿ ಶ್ರೀ ಎಚ್ಎಸ್ ಬಲ್ಲಾಳ್ ರವರು ದೀಪ ಬೆಳಗಿಸುವುದರ ಮೂಲಕ ಶ್ರೀ ಸಿದ್ದೇಶ್ವರಿ ದೇವಿಗೆ ಸಮರ್ಪಿಸಿದರು. ತಗಡಿನ ಚಪ್ಪರ ನಿರ್ಮಿಸಿ ಕೊಡುಗೆಯಾಗಿ ನೀಡಿದ ಶ್ರೀ ಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ದಿನೇಶ್ ಪ್ರಭು ದಂಪತಿಯನ್ನು ಗೌರವಿಸಲಾಯಿತು.
ಉಡುಪಿ ಕ್ಷೇತ್ರದ ಮಾಜಿ ಶಾಸಕ ಶ್ರೀ ಕೆ ರಘುಪತಿ ಭಟ್, ಗೋವಾದ ಉದ್ಯಮಿ ಶ್ರೀ ಮುಕುಂದ ಗಣಪತಿ ಪ್ರಭು, ಆಡಳಿತ ಮೊಕ್ತೆಸರ ಸುಭಾಕರ ಸಾಮಂತ್, ಶಾಶ್ವತ ಟ್ರಸ್ಟಿ ದಿನೇಶ್ ಸಾಮಂತ್, ಕೆ ಕೆ ಡಿ ಜಿ ಬಿ ವಿದ್ಯಾ ಪ್ರಸಾರಕ ಮಂಡಲದ ಅಧ್ಯಕ್ಷ ಸತೀಶ್ ಪಾಟೀಲ್, ಸಂಘದ ಅಧ್ಯಕ್ಷ ರಾಧಾಕೃಷ್ಣ ಸಾಮಂತ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದೇವಸ್ಥಾನದ ಆಡಳಿತ ಮೊಕ್ತೇಸರ ಮಹೇಶ್ ಠಾಕೂರ್ ಸ್ವಾಗತ ಕೋರಿ, ದಿನೇಶ್ ಪ್ರಭು ವಂದಿಸಿದರು. ಕಾರ್ಯದರ್ಶಿ ಗೋಪಾಲಕೃಷ್ಣ ಪ್ರಭು ಕಾರ್ಯಕ್ರಮ ನಿರೂಪಿಸಿದರು.