Sunday, January 19, 2025
Banner
Banner
Banner
Home » ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ “ವಿಶ್ವ ರಕ್ತದಾನಿಗಳ ದಿನ 2024” ಆಚರಣೆ

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ “ವಿಶ್ವ ರಕ್ತದಾನಿಗಳ ದಿನ 2024” ಆಚರಣೆ

by NewsDesk

ಮಣಿಪಾಲ : “ಸುರಕ್ಷಿತ ರಕ್ತ ಮತ್ತು ರಕ್ತ ವರ್ಗಾವಣೆಗಾಗಿ ಉತ್ಪನ್ನಗಳ” ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲು ಜೂನ್ 14 ರಂದು ವಿಶ್ವ ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರಕ್ತ ಸಂಬಂಧಿತ ಉತ್ಪನ್ನಗಳು ಜಗತ್ತಿನಾದ್ಯಂತ ಸಾರ್ವಜನಿಕ ಆರೋಗ್ಯಕ್ಕೆ ನಿರ್ಣಾಯಕವಾಗಿವೆ. ಈ ದಿನವು ಸ್ವಯಂಸೇವಕರು ಮತ್ತು ರಕ್ತದಾನಿಗಳಿಗೆ ಅವರ ಕೊಡುಗೆಗಳಿಗಾಗಿ ಧನ್ಯವಾದ ಹೇಳುವ ಅವಕಾಶವನ್ನು ಸೂಚಿಸುತ್ತದೆ. 2024‌ರ ಧ್ಯೇಯ ವಾಕ್ಯ‌ “20 ವರ್ಷಗಳ ಕೂಡುಗೆಯನ್ನು ಆಚರಿಸುತ್ತಿದೆ : ರಕ್ತದಾನಿಗಳಿಗೆ ಧನ್ಯವಾದಗಳು!”

ಈ ಥೀಮ್ ಎರಡು ಪ್ರಮುಖ ಅಂಶಗಳನ್ನು ಎತ್ತಿ ತೋರಿಸುತ್ತದೆ :
ರಕ್ತದಾನಿಗಳಿಗೆ ಮೆಚ್ಚುಗೆ : ಕಳೆದ ಎರಡು ದಶಕಗಳಿಂದ, ವಿಶ್ವ ರಕ್ತದಾನಿಗಳ ದಿನವು ಸ್ವಯಂಪ್ರೇರಿತ ರಕ್ತದಾನಿಗಳಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತಿದೆ. ರಕ್ತ ನೀಡುವ ಅವರ ನಿಸ್ವಾರ್ಥ ಕಾರ್ಯವು ಅಸಂಖ್ಯಾತ ಜೀವಗಳನ್ನು ಉಳಿಸಿದೆ ಮತ್ತು ಸುರಕ್ಷಿತ ಮತ್ತು ಸುರಕ್ಷಿತ ರಕ್ತ ಪೂರೈಕೆಯ ಬೆನ್ನೆಲುಬಾಗಿ ಮುಂದುವರಿಯುತ್ತದೆ.

ಒಂದು ಮೈಲಿಗಲ್ಲು ವರ್ಷ : 2024 ಜಾಗೃತಿ ಮೂಡಿಸುವ ಮತ್ತು ರಕ್ತದಾನವನ್ನು ಉತ್ತೇಜಿಸುವ 20 ವರ್ಷಗಳನ್ನು ಸೂಚಿಸುತ್ತದೆ. ಈ ವಾರ್ಷಿಕೋತ್ಸವವು ಸಾಧಿಸಿದ ಪ್ರಗತಿಯನ್ನು ಪ್ರತಿಬಿಂಬಿಸಲು, ನಡೆಯುತ್ತಿರುವ ಸವಾಲುಗಳನ್ನು ಅಂಗೀಕರಿಸಲು ಮತ್ತು ಈ ಕ್ಷೇತ್ರದಲ್ಲಿ ದಣಿವರಿಯಿಲ್ಲದೆ ದುಡಿಯುತ್ತಿರುವ ರಕ್ತದಾನಿಗಳು, ರಕ್ತ ಕೇಂದ್ರಗಳು ಮತ್ತು ಸಂಸ್ಥೆಗಳ ಸಮರ್ಪಣೆಯನ್ನು ಆಚರಿಸಲು ಅವಕಾಶವನ್ನು ಒದಗಿಸುತ್ತದೆ.

ಶ್ರೀಮತಿ ರಶ್ಮಿ ಎಸ್‌ಆರ್ ಕೆಎಎಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೆಎಂಸಿ ಮಣಿಪಾಲದ ಡೀನ್ ಡಾ ಪದ್ಮರಾಜ್ ಹೆಗ್ಡೆ, ಮಾಹೆ ಮಣಿಪಾಲದ ಬೋಧನಾ ಆಸ್ಪತ್ರೆಯ ಸಿಒಒ ಡಾ ಆನಂದ್ ವೇಣುಗೋಪಾಲ್ ಕಾರ್ಯಕ್ರಮದ ಗೌರವ ಅತಿಥಿಗಳಾಗಿದ್ದರು. ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ರಕ್ತ ಕೇಂದ್ರದ ಮುಖ್ಯಸ್ಥ ಡಾ. ಶಮೀ ಶಾಸ್ತ್ರಿ, ರಕ್ತ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ಗಣೇಶ್ ಮೋಹನ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀಮತಿ ರಶ್ಮಿ ಎಸ್.ಆರ್. ಮಾತನಾಡಿ,”ಒಂದು ಯುನಿಟ್ ರಕ್ತವು 3 ಜೀವಗಳನ್ನು ಉಳಿಸುತ್ತದೆ, ಭಾರತದಲ್ಲಿ ಯಾವಾಗಲೂ 1 ಮಿಲಿಯನ್ ಯುನಿಟ್ ರಕ್ತದ ಕೊರತೆಯಿದೆ. ರಕ್ತಕ್ಕೆ ಜಾತಿ, ಧರ್ಮ ಅಂತ ಇಲ್ಲ ಮತ್ತು ರಕ್ತಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲ. ಅದನ್ನು ದಾನದ ಮೂಲಕವೇ ಅವಶ್ಯವಿದ್ದವರಿಗೆ ಪೂರೈಸಬೇಕಾಗಿದೆ. ಆದ್ದರಿಂದ ಎಲ್ಲಾ ಅರ್ಹ ದಾನಿಗಳು ರಕ್ತ ದಾನ ಮಾಡುವುದರ ಮೂಲಕ ಇತರರ ಜೀವ ಉಳಿಸಲು ಸಹಕರಿಸಬೇಕು” ಎಂದು ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಡಾ ಪದ್ಮರಾಜ್ ಹೆಗ್ಡೆ ಅವರು, “ಪ್ರತೀ ಎರಡು ಸೆಕೆಂಡ್‌ಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇದೆ. ಒಬ್ಬ ಆರೋಗ್ಯವಂತ 18ನೇ ವರ್ಷಕ್ಕೆ ರಕ್ತ ದಾನ ಮಾಡಲು ಆರಂಭಿಸಿ ವರ್ಷಕ್ಕೆ 3 ಬಾರಿ ದಾನ ಮಾಡಿದರೆ, ಅವನಿಗೆ 60 ವರ್ಷ ಆಗುವಾಗ 30 ಗ್ಯಾಲನ್‌ನಷ್ಟು ರಕ್ತ ದಾನ ಮಾಡಿರುತ್ತಾರೆ. ಇದರಿಂದ ಕಡಿಮೆ ಪಕ್ಷ 500 ಜನರ ಜೀವ ಉಳಿಸಬಹುದು. ಆದ್ದರಿಂದ ತಾವೂ ರಕ್ತ ದಾನ ಮಾಡುವುದರೊಂದಿಗೆ ಇತರರಿಗೂ ದಾನ ಮಾಡುವಂತೆ ಪ್ರೇರೇಪಿಸಬೇಕು” ಎಂದರು.

ರಕ್ತದಾನಿಗಳ ಪ್ರೇರಕರನ್ನು, ಕಸ್ತೂರಬಾ ಆಸ್ಪತ್ರೆ ರಕ್ತ ಕೇಂದ್ರದ ಅತ್ಯುತ್ತಮ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಚಿತ್ರಕಲಾ ಸ್ಪರ್ಧೆ ಹಾಗೂ ಕೆಎಂಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ಲೋಗನ್ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ ಅವಿನಾಶ್ ಶೆಟ್ಟಿ ಅವರು ಸಭೆಯನ್ನು ಸ್ವಾಗತಿಸಿ, ವಿಶ್ವ ರಕ್ತದಾನಿಗಳ ದಿನಾಚರಣೆಯ ಮಹತ್ವವನ್ನು ಒತ್ತಿ ಹೇಳಿದರು. ಡಾ. ಶಮೀ ಶಾಸ್ತ್ರಿ ಕಾರ್ಯಕ್ರಮದ ಅವಲೋಕನ ನೀಡಿದರು. ಡಾ.ಗಣೇಶ್ ಮೋಹನ್ ವಂದಿಸಿದರು. ಶ್ರೀ ವಿಶ್ವೇಶ ಎನ್ ಅವರು ರಕ್ತದಾನಿಗಳ ಪ್ರೇರಕರನ್ನು ಗೌರವಿಸಿದ ಪಟ್ಟಿಯನ್ನು ಓದಿದರು. ಡಾ. ಚೆನ್ನ ದೀಪಿಕಾ ಕಾರ್ಯಕ್ರಮ ನಿರೂಪಿಸಿದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb