ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ಮಶಾನದಲ್ಲಿದ್ದ ಹೆಣ ಸುಡುವ ಪರಿಕರಕ್ಕೆ ಬಹಳ ವರ್ಷಗಳಾಗಿದ್ದು ತುಕ್ಕು ಹಿಡಿದು ಹಾಳಾಗಿರುವ ಸಂದರ್ಭದಲ್ಲಿ ಸ್ಮಶಾನಕ್ಕೆ ರವಿ ಪಡ್ಡಂರವರು ಸುಮಾರು ರೂ. 2,30,000 ವೆಚ್ಚದ ನೂತನ ಹೆಣ ಸುಡುವ ಸಿಲಿಕಾನ್ ಚೇಂಬರ್ ಪರಿಕರವನ್ನು ದಾನವಾಗಿ ನೀಡಿರುತ್ತಾರೆ.


ಉಡುಪಿ : ಬನ್ನಂಜೆ ಗರಡಿ ರಸ್ತೆ ಶ್ರೀ ಶನಿ ಕ್ಷೇತ್ರ ಬನ್ನಂಜೆ ಮಠದ ಕರ್ನಾಟಕದ ಅತೀ ದೊಡ್ಡ ಶ್ರೀ ಶನಿ ದೇವರ 23 ಅಡಿ ಎತ್ತರದ ಏಕಶಿಲಾ ಮೂರ್ತಿ ಸನ್ನಿಧಾನದಲ್ಲಿ ಗುರುವಾರ ಶನೈಶ್ಚರ ಜಯಂತಿ ಹಾಗೂ ವಾರ್ಷಿಕ ಶನೈಶ್ವರ ಉತ್ಸವವು ಶ್ರೀ ಬನ್ನಂಜೆ ರಾಘವೇಂದ್ರ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ನಡೆಯಿತು.
ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ ಶ್ರೀ ರಾಮ ವಿಠ್ಠಲ್ ಹಾಗು ಶನೈಶ್ಚರ ಸ್ವಾಮಿಯ ಸನ್ನಿದಿಯಲ್ಲಿ ಸಗ್ರಹ ಮಖ ಶನಿಶಾಂತಿ ಪುರಸ್ಪರ ಯಕ್ಷ್ಮನಾಶನ ಸೂಕ್ತ ಯಾಗದ ಧಾರ್ಮಿಕ ಪೂಜಾ ವಿದಾನಗಳನ್ನೂ ಕೊರಂಗ್ರಪಾಡಿ ಕುಮಾರ ಗುರುತಂತ್ರಿ ನೇತೃತ್ವದಲ್ಲಿ ಅರ್ಚಕರ ತಂಡ ನೆರವೇರಿಸಿದರು.
ಶ್ರೀ ದೇವರ ಸನ್ನಿದಿಯಲ್ಲಿ ಪಂಚಾಮೃತ ಅಭಿಷೇಕ, ಯಾಗದ ಪೂರ್ಣಾಹುತಿ, ಪಲ್ಲಪೂಜೆ, ಮಂಡಲಪೂಜೆ, ಉತ್ಸವ ಬಲಿ ಪೂಜೆ ನಡೆಯಿತು. ಶ್ರೀ ದೇವರಿಗೆ ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ ಜರಗಿತು. ಮದ್ಯಾಹ್ನ ಮಹಾ ಪೂಜೆಯ ಬಳಿಕ ಸಾರ್ವಜನಿಕ ಮಹಾ ಅನ್ನಸಂತರ್ಪಣೆಯಲ್ಲಿ ಸಾವಿರಾರು ಭಕ್ತರೂ ಭೋಜನ ಪ್ರಸಾದ ಸ್ವೀಕರಿಸಿದರು. ಸರತಿ ಸಾಲಿನಲ್ಲಿ ಸಾವಿರಾರು ಭಕ್ತದಿಗಳಿಂದ ಶನಿ ದೇವರಿಗೆ ತೈಲಾಭಿಷೇಕ, ಎಳ್ಳು ದೀಪಾ ಬೆಳಗಿಸಿ ಶನೇಶ್ವರಣ ಕೃಪೆಗೆ ಪಾತ್ರರಾದರು.
ಸಮಾರಂಭದಲ್ಲಿ ಪ್ರಧಾನ ಅರ್ಚಕರಾದ ಸತ್ಯನಾರಾಯಣ ಆಚಾರ್ಯ, ಶ್ರೀಮತಿ ಜಯಲಕ್ಷ್ಮೀ ಆಚಾರ್ಯ, ಪ್ರಹ್ಲಾದ ಆಚಾರ್ಯ, ಯತೀಶ್ ಆಚಾರ್ಯ, ಶ್ರೀಪಾದ ಆಚಾರ್ಯ, ಪೂಜಾ ಆಚಾರ್ಯ, ಪ್ರತೀಕ ಆಚಾರ್ಯ, ಸಾವಿರಾರು ಭಕ್ತರು ಉಪಸ್ಥರಿದ್ದರು.
ಮೈಸೂರು : ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ವಿಧಾನ ಪರಿಷತ್ ನೈಋತ್ಯ ಪದವೀಧರರ ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಗುರುವಾರ ತಡರಾತ್ರಿ ಪೂರ್ಣಗೊಂಡಿದ್ದು, ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಅವರು 24,111 ಮತಗಳ ಭಾರಿ ಅಂತರದಲ್ಲಿ ಜಯ ಸಾಧಿಸಿದ್ದಾರೆ. ಅವರಿಗೆ ಪ್ರಾದೇಶಿಕ ಆಯುಕ್ತ ಡಾ.ಜಿ.ಸಿ. ಪ್ರಕಾಶ್ ಗೆಲುವಿನ ಪ್ರಮಾಣ ಪತ್ರ ನೀಡಿದರು.
ಅಂತಿಮ ಸುತ್ತಿನ ವೇಳೆಗೆ 37,627 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅವರನ್ನು 24,111 ಮತಗಳ ಅಂತರದಿಂದ ಸೋಲಿಸಿದರು. ಮಂಜುನಾಥ್ 13,516 ಮತ ಪಡೆದರು.
ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಕೆ.ರಘುಪತಿ ಭಟ್ 7039 ಮತಗಳನ್ನು ಮಾತ್ರ ಗಳಿಸಿದರು. 66,497 ಸಾವಿರ ಮತಗಳ ಎಣಿಕೆ ಮಾಡಿದ್ದು. 5115 ಮತಗಳು ತಿರಸ್ಕೃತಗೊಂಡವು.
ನಾಲ್ಕನೇ ಸುತ್ತಿನಲ್ಲೇ ನಿಗದಿತ ಕೋಟಾ 30692 ತಲುಪಿದ್ದ ಮೈತ್ರಿ ಅಭ್ಯರ್ಥಿ ಸರ್ಜಿ ಐದನೇ ಸುತ್ತಿನಲ್ಲಿ 37627 ಮತಗಳಿಸಿ ಭರ್ಜರಿ ಗೆಲುವು ಸಾಧಿಸಿದರು. ಎಸ್.ಪಿ.ದಿನೇಶ್ 2518 ಮತಗಳನ್ನು ಗಳಿಸಿದರು.
ಕುಂದಾಪುರ : ಉತ್ತರಾಖಂಡ ರಾಜ್ಯಕ್ಕೆ ಟ್ರಕ್ಕಿಂಗ್ಗೆ ಹೋಗಿ ದುರ್ಮರಣಕ್ಕೀಡಾದ 9 ಜನರ ಪೈಕಿ ಪದ್ಮನಾಭ ಭಟ್ ಮೂಲತಃ ಕುಂದಾಪುರ ತಾಲೂಕು ಕುಂಭಾಶಿಯವರು. ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮನೆಯಲ್ಲಿ ದುಃಖದ ವಾತಾವರಣ ಸೃಷ್ಟಿಯಾಗಿದೆ.
ಕುಂಭಾಶಿಯ ಕೊರವಡಿ ರಸ್ತೆಯಲ್ಲಿರುವ ಶ್ರೀ ಹರಿಹರ ನಿಲಯವು ಮೃತ ಪದ್ಮನಾಭ ಭಟ್ಟರ ಹಿರಿಯರ ಮೂಲ ಮನೆ. ಪ್ರಸ್ತುತ ಇಲ್ಲಿ ಚಿಕ್ಕಪ್ಪನ ಕುಟುಂಬದವರು ವಾಸ್ತವಿಸಿದ್ದಾರೆ.
ಕೃಷ್ಣಮೂರ್ತಿ ಭಟ್-ಸತ್ಯವತಿ ದಂಪತಿಯ ಪುತ್ರ ಪದ್ಮನಾಭ ಭಟ್. ಇವರಿಗೆ ಇಬ್ಬರು ಅಕ್ಕಂದಿರು, ಇಬ್ಬರು ತಂಗಿಯರಿದ್ದಾರೆ. ಕೃಷ್ಣಮೂರ್ತಿ ಭಟ್ಟರು ಬೆಂಗಳೂರಿನಲ್ಲೇ ವ್ಯವಹಾರ ನಡೆಸಿಕೊಂಡು ಅಲ್ಲೇ ನೆಲೆಸಿದ್ದರು. ಅಂತೆಯೇ ಪದ್ಮನಾಭ ಭಟ್ಟರ ಹುಟ್ಟು, ಬಾಲ್ಯ ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲೇ ನಡೆಯಿತು. ವಿವಾಹಿತರಾಗಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿರುವ ಪದ್ಮನಾಭರಿಗೆ ಪ್ರವಾಸ, ಟ್ರಕ್ಕಿಂಗ್ ಇತ್ಯಾದಿಗಳಲ್ಲಿ ಆಸಕ್ತಿ ಜಾಸ್ತಿ. ಆಗಾಗ ಸಹೋದ್ಯೋಗಿಗಳು, ಸ್ನೇಹಿತರೊಡನೆ ದೂರದ ರಮಣೀಯ ಸ್ಥಳಗಳಿಗೆ ಪ್ರವಾಸ ಹೋಗುತ್ತಿರುತ್ತಾರೆ.
ಹಾಗೆಯೇ, ಮೇ 29ರಂದು 22 ಜನರ ತಂಡದೊಂದಿಗೆ ಉತ್ತರಾಖಂಡ ರಾಜ್ಯದ ಉತ್ತರ ಕಾಶಿ ಎಂದು ಕರೆಯಲಾಗುವ ಬೆಟ್ಟ ಪ್ರದೇಶಕ್ಕೆ ಟ್ರಕ್ಕಿಂಗ್ ಹೋಗಿದ್ದರು. ಪ್ರವಾಸ ಮುಗಿಸಿ ಹುಲ್ಲುಗಾವಲಿನಂತ ಬೆಟ್ಟ ಪ್ರದೇಶದಿಂದ ಜೂನ್ 4 ರಂದು ಎಲ್ಲರೂ ಕೆಳಗಿಳಿಯುತ್ತಿದ್ದರು. 22 ಜನರ ತಂಡದಲ್ಲಿ ಒಂದಷ್ಟು ಜನ ಚಿಕ್ಕ ತಂಡವಾಗಿ ಕೆಳಗೆ ಇಳಿಯುತ್ತಿದ್ದರು. ಪದ್ಮನಾಭ ಸೇರಿದಂತೆ ಒಂಭತ್ತು ಜನರ ತಂಡ ಸುಮಾರು 15 ಸಾವಿರ ಅಡಿ ಎತ್ತರದಿಂದ ಕೆಳಗೆ ಇಳಿಯುತ್ತಿರುವಾಗ ಈ ದುರ್ಘಟನೆ ನಡೆದಿದೆ.
ಉಡುಪಿ : ನೈರುತ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಡಾ. ಧನಂಜಯ ಸರ್ಜಿಯವರ ಪ್ರಚಂಡ ಗೆಲುವು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮಕ್ಕೆ ಸಂದ ಗೆಲುವಾಗಿದ್ದು, ಈ ಮೂಲಕ ಪಕ್ಷಕ್ಕೆ ನಿಷ್ಠಾವಂತ ಕಾರ್ಯಕರ್ತರೇ ದೊಡ್ಡ ಆಸ್ತಿ ಎಂಬುದು ಮತ್ತೊಮ್ಮೆ ಸಾಬೀತಾಗಿದೆ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.
ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮುಖ್ಯ ಎಂಬ ಸಿದ್ಧಾಂತದೊಂದಿಗೆ ಬೆಳೆದು ಬಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಲವು ಗೊಂದಲಗಳ ನಡುವೆಯೂ ಧೃತಿಗೆಡದೆ ಹಗಲಿರುಳು ಶ್ರಮಿಸಿ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಧನಂಜಯ ಸರ್ಜಿ ಹಾಗೂ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಭೋಜೇಗೌಡರನ್ನು ಗೆಲ್ಲಿಸುವ ಮೂಲಕ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿರುವ ನರೇಂದ್ರ ಮೋದಿಯವರಿಗೆ ಗೆಲುವಿನ ಉಡುಗೊರೆ ನೀಡಿದ್ದಾರೆ.
ಪದವೀಧರ ಹಾಗೂ ಶಿಕ್ಷಕ ಕ್ಷೇತ್ರದ ಪ್ರಬುದ್ಧ ಮತದಾರರು ಓರ್ವ ಸಜ್ಜನ ವ್ಯಕ್ತಿತ್ವದ ಡಾ. ಧನಂಜಯ ಸರ್ಜಿ ಹಾಗೂ ಕ್ರಿಯಾಶೀಲ ಅಭ್ಯರ್ಥಿ ಭೋಜೇಗೌಡರನ್ನು ತಮ್ಮ ಪ್ರತಿನಿಧಿಯಾಗಿ ಗೆಲ್ಲಿಸುವ ಮೂಲಕ ನರೇಂದ್ರ ಮೋದಿಯವರ ವಿಕಸಿತ ಭಾರತ ಸಂಕಲ್ಪಕ್ಕೆ ಮುನ್ನುಡಿ ಬರೆದಿದ್ದಾರೆ.
ಪದವೀಧರ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ವಿಧಾನ ಪರಿಷತ್ತಿನಲ್ಲಿ ಧ್ವನಿಯಾಗಿ ನೂತನ ಶಾಸಕರುಗಳು ಸೇವೆ ನೀಡಲಿದ್ದು, ಗೆಲುವಿಗೆ ಸಹಕರಿಸಿದ ಪ್ರಬುದ್ಧ ಮತದಾರರಿಗೆ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೈರುತ್ಯ ಪದವೀಧರರ ಕ್ಷೇತ್ರದ ಮತ ಎಣಿಕೆ ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಡಾ. ಧನಂಜಯ್ ಸರ್ಜಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. 37627 ಮತಗಳನ್ನು ಪಡೆದ ಡಾ. ಧನಂಜಯ್ ಸರ್ಜಿ, 6935 ಮತಗಳ ಅಂತರದಿಂದ ಭರ್ಜರಿ ಗೆಲುವನ್ನು ತನ್ನದಾಗಿಸಿಕೊಂಡಿದ್ದಾರೆ.
ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಅವರು ಮೂರನೇ ಸ್ಥಾನದಲ್ಲಿದ್ದು, 7039 ಮತಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ 13516 ಮತಗಳನ್ನು ಪಡೆದಿದ್ದಾರೆ, ಇದರಿಂದಾಗಿ ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿದೆ.
30692+1 ಕೋಟಾ ನಿಗದಿಯಾಗಿದ್ದರೂ, ಡಾ. ಧನಂಜಯ್ ಸರ್ಜಿ ನಿಗದಿತ ಕೋಟಾಕಿಂತ 6935 ಹೆಚ್ಚುವರಿ ಮತಗಳನ್ನು ಪಡೆದಿದ್ದಾರೆ. ಮೊದಲ ಪ್ರಾಶಸ್ತ್ಯದ ಮತಗಳಲ್ಲಿಯೇ ಗೆಲುವು ಸಾಧಿಸಿರುವ ಡಾ. ಧನಂಜಯ್ ಸರ್ಜಿಯ ಭರ್ಜರಿ ಗೆಲುವು ಬಿಜೆಪಿಗೆ ಮತ್ತೊಂದು ಬಲವರ್ಧನೆ ಆಗಿದೆ.
ಈ ಚುನಾವಣೆಯಲ್ಲಿ 5115 ಕುಲಗೆಟ್ಟ ಮತಗಳು ದಾಖಲಾಗಿವೆ.
ಉಡುಪಿ : ಉಡುಪಿ ನಗರಸಭೆ ವ್ಯಾಪ್ತಿಯ ಕೊರಂಗ್ರಪಾಡಿ ಚರ್ಚ್ ಬಳಿ ಅಕ್ರಮವಾಗಿ ಮನೆಯನ್ನು ಉಡುಪಿ ನಗರಸಭೆಯಿಂದ ತೆರವುಗೊಳಿಸುವ ಕಾರ್ಯ ಇಂದು ನಡೆಯಿತು.
2012ರಲ್ಲಿ ಸುಮಾರು ನಾಲ್ಕೂವರೆ ಸೆಂಟ್ಸ್ ಜಾಗದಲ್ಲಿ ವಕೀಲ ಗಿರೀಶ್ ಐತಾಳ್ ಮನೆಯನ್ನು ನಿರ್ಮಿಸಿದ್ದರು. ಸೆಟ್ಬ್ಯಾಕ್ ಸೇರಿದಂತೆ ಯಾವುದೇ ಅನುಮತಿ ಇಲ್ಲದೆ ಕಾನೂನು ಬಾಹಿರವಾಗಿ ಈ ಮನೆಯನ್ನು ನಿರ್ಮಿಸಲಾಗಿದೆ ಎಂದು ದೂರಿ ಆರ್ಟಿಐ ಕಾರ್ಯಕರ್ತ ಗುಂಡಿಬೈಲು ಶ್ರೀಪತಿ ರಾವ್ ಉಡುಪಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಗಿರೀಶ್ ಐತಾಳ್ ತಡೆಯಾಜ್ಞೆ ತಂದಿದ್ದರು.
ಈ ಮಧ್ಯೆ 2014ರಲ್ಲಿ ಶ್ರೀಪತಿ ರಾವ್ ಹೈಕೋರ್ಟ್ಗೂ ಅರ್ಜಿಯನ್ನು ಸಲ್ಲಿಸಿದ್ದರು. ಬಳಿಕ ಉಡುಪಿ ಕೋರ್ಟ್ನಲ್ಲಿ ವಿಧಿಸಲಾದ ತಡೆಯಾಜ್ಞೆ ಕೂಡ ತೆರವಾಯಿತು. ಸುಧೀರ್ಘ ಕಾಲದ ವಿಚಾರಣೆಯ ಬಳಿಕ ಹೈಕೋರ್ಟ್ ಅಕ್ರಮವಾಗಿ ನಿರ್ಮಿಸಲಾದ ಗಿರೀಶ್ ಐತಾಳ್ ಅವರ ಮನೆಯನ್ನು ತೆರವುಗೊಳಿಸುವಂತೆ ಉಡುಪಿ ನಗರಸಭೆಗೆ ಆದೇಶ ನೀಡಿತು.
ಅದರಂತೆ ಇಂದು ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ ಅವರ ನೇತೃತ್ವದಲ್ಲಿ ಎರಡು ಮಹಡಿಯ ಮನೆಯನ್ನು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು ನಾಳೆಯೂ ಮುಂದುವರೆಯಲಿದೆ.
ಉಡುಪಿ : ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅವ್ಯವಹಾರ ಸಂಬಂಧ ಸಚಿವ ಬಿ.ನಾಗೇಂದ್ರ ರಾಜೀನಾಮೆ ನೀಡಿದರೆ ಸಾಲದು, ಇದರ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪದ ತ್ಯಾಗ ಮಾಡಬೇಕು. ಇಷ್ಟು ದಿನಗಳ ಕಾಲ ಸಚಿವರ ರಕ್ಷಣೆ ಮಾಡಿದ್ದ ಸಿದ್ದರಾಮಯ್ಯ ಈಗ ಸಿಬಿಐ ಪ್ರವೇಶವಾಗುತ್ತಿದ್ದಂತೆ ನಾಗೇಂದ್ರ ರಾಜೀನಾಮೆ ಪಡೆದುಕೊಂಡಿದ್ದಾರೆ. ಹಾಗಾದರೆ ಇಷ್ಟು ದಿನಗಳ ಕಾಲ ಈ ರಕ್ಷಣೆಯ ನಾಟಕ ಮಾಡಿದ್ದು ಪರಿಶಿಷ್ಟ ವರ್ಗಕ್ಕೆ ಮಾಡಿದ ಅನ್ಯಾಯವಲ್ಲವೇ?
ಸಿಎಂ ಸಿದ್ದರಾಮಯ್ಯ ಅವರ ಈ ವರ್ತನೆ ಖಂಡಿಸಿ ಸದನದ ಒಳ ಹೊರಗೆ ಬಿಜೆಪಿ ಉಗ್ರ ಹೋರಾಟ ನಡೆಸಲಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಕಚೇರಿಯ ನೇರ ಪಾಲ್ಗೊಳ್ಳುವಿಕೆ ಇದೆ ಎಂಬುದು ನಮ್ಮ ನೇರ ಆರೋಪ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ ಸುನಿಲ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಡುಪಿ : ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಉಡುಪಿ ಸಿಟಿ ಬಸ್ ಮಾಲಕರು ಮತ್ತು ಸರ್ವಿಸ್ ಬಸ್ ಮಾಲಕರ ಸಭೆ ಉಡುಪಿ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆಯಿತು. ಸಂಚಾರ ಪೊಲೀಸ್ ಠಾಣೆ ಉಪ ನಿರೀಕ್ಷಕ ಸುದರ್ಶನ್ ದೊಡ್ಡಮನಿ ಅವರು ಬಸ್ ಮಾಲಕರನ್ನು ಉದ್ದೇಶಿಸಿ ಕಾನೂನು ನಿಯಮಗಳನ್ನು ಪಾಲಿಸುವ ಬಗ್ಗೆ ಸೂಚನೆ ನೀಡಿದರು.
ಕರ್ಕಶ ಹಾರ್ನ್ಗಳನ್ನು ಜೂನ್ 15ರ ಒಳಗೆ ತೆರವುಗೊಳಿಸಬೇಕು. ಟೇಪ್ರೆಕಾರ್ಡ್, ಸ್ಪೀಕರ್ ತೆಗೆಯಬೇಕು, ಸಿ.ಸಿ. ಕೆಮರಾ ಅಳವಡಿಸುವುದು. ನಿಗದಿತ ವೇಳಾಪಟ್ಟಿಯಂತೆ ಸಮಯಕ್ಕೆ ಸರಿಯಾಗಿ ಬಸ್ಗಳನ್ನು ಚಲಾಯಿಸುವುದು. ಕರಾವಳಿ ಜಂಕ್ಷನ್ನಲ್ಲಿ ಬಸ್ ನಿಲ್ದಾಣಕ್ಕೆ ಹೋಗದೇ ದಾರಿಯಲ್ಲಿ ಪಿಕ್ಆಪ್ ಮಾಡುವುದರಿಂದ ಸಾರ್ವಜನಿಕರಿಗೆ ಮತ್ತು ಇತರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರಿಂದ ಚಾಲಕರು ಬಸ್ ನಿಲ್ದಾಣಕ್ಕೆ ಹೋಗಿ ಪಿಕ್ಅಪ್ ಮಾಡುವಂತೆ ಸೂಚಿಸಿದರು.
ಚಾಲಕರು ಮತ್ತು ನಿರ್ವಾಹಕರು ಕರ್ತವ್ಯದ ಸಮಯ ಕಡ್ಡಾಯ ಸಮವಸ್ತ್ರ ಧರಿಸಬೇಕು. ವೇಗವಾಗಿ ಚಲಾಯಿಸಬಾರದು. ಮೊಬೈಲ್ ಪೋನ್ ಉಪಯೋಗಿಸುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸದಿರಿ ಎಂದರು. ತಪ್ಪಿದ್ದಲ್ಲಿ ಮುಂದೆ ಸೂಕ್ತ ಕಾನೂನು ಕ್ರಮ ಜರಗಿಸಲಾಗುವುದು ಎಂದು ತಿಳಿಸಿದರು.
ಕಾಪು : ಪಾಂಗಾಳ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ವತಿಯಿಂದ ಕೊಡಮಾಡಿದ ಉಚಿತ ಬರವಣಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿಗಳಾದ ಗೋವಿಂದ ಶೆಟ್ಟಿ, ಮುಖ್ಯ ಶಿಕ್ಷಕರಾದ ಫ್ರಾನ್ಸಿಸ್ ಮೆನೇಜಸ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಭೋಜರಾಜ ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಯಶೋಧ ಹಾಗೂ ಸಹ ಶಿಕ್ಷಕರು, ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Maax News covers major news and events of Udupi district. This channel provides detailed reports on the political, social, economic, and cultural life of Udupi district.
Maax News, equipped with the most sophisticated studio in Udupi, assures people comprehensive news coverage.