ಉಡುಪಿ : ರೋಟರಿ ಉಡುಪಿಯಿಂದ ಮೊರಾರ್ಜಿ ದೇಸಾಯಿ ಶಾಲೆಯ ಹುಡುಗರ ಹಾಸ್ಟೆಲ್ಗೆ ನೀಡಿದ ನೀರು ಶುದ್ಧೀಕರಣ ಯಂತ್ರವನ್ನು ರೋಟರಿ ಮಾಜಿ ಅಸಿಸ್ಟೆಂಟ್ ಗವರ್ನರ್ ರಾಮಚಂದ್ರ ಉಪಾಧ್ಯಾಯ ಹಸ್ತಾಂತರಿಸಿದರು.
ಅದರ ಪ್ರಾಯೋಜಕರಾದ ಮುರಳೀಕೃಷ್ಣ ಉಪಾಧ್ಯಾಯ ಮತ್ತು ವನಿತಾ ಉಪಾಧ್ಯಾಯರನ್ನು ರೋಟರಿ ಅಧ್ಯಕ್ಷ ಗುರುರಾಜ ಭಟ್ ಅಭಿನಂದಿಸಿದರು.
ಶಾಲಾ ಪ್ರಾಂಶುಪಾಲ ಕೃಷ್ಣಮೂರ್ತಿ ಮಕ್ಕಳಿಗೆ ಉಪಯುಕ್ತವಾದ ಕೊಡುಗೆ ನೀಡಿದ ರೋಟರಿ ಸಂಸ್ಥೆಗೆ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ವಲಯ ಸೇನಾನಿ ಹೇಮಂತಕಾಂತ್, ರಘುಪತಿ ಉಪಾಧ್ಯಾಯ, ಸಾಧನಾ ಮುಂಡ್ಕೂರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.












