ಉಡುಪಿ : ಶ್ರೀ ಕೃಷ್ಣಮಠದ ರಥಬೀದಿಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆ ಮತ್ತು ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ರಕ್ಷಿಸಲಾಗಿದೆ.
ವೃದ್ಧೆಯು ಇಬ್ಬರು ಮೊಮ್ಮಕ್ಕಳೊಂದಿಗೆ ಅಳುತ್ತಿರುವ ಮಾಹಿತಿ ತಿಳಿದ ನಿತ್ಯಾನಂದ ಒಳಕಾಡು ಸ್ಥಳಕ್ಕಾಗಮಿಸಿ ವಿಚಾರಿಸಿದ್ದು, ಮೊಮ್ಮಕ್ಕಳ ತಂದೆ ಒಂದು ವರ್ಷದಿಂದ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಿಕೊಂಡು ಇಲ್ಲಿಗೆ ಬಂದಿರುವುದಾಗಿ ಗೊತ್ತಾಗಿದೆ. ವೃದ್ಧೆ ಪಕೀರವ್ವ (75)
ಬಾಗಲಕೋಟೆ ಮೂಲದವರಾಗಿದ್ದಾರೆ. ಸದ್ಯ ಅವರನ್ನು ಹೊಸ ಬದುಕು ಆಶ್ರಮದಲ್ಲಿ ಇರಿಸಲಾಗಿದೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಆದೇಶದಂತೆ ಮಕ್ಕಳ ಪೈಕಿ ಹನುಮಂತ (10)ನಿಗೆ ದೊಡ್ಡಣಗುಡ್ಡೆಯ ಬಾಲಕರ ಬಾಲಭವನದಲ್ಲಿ ಹಾಗೂ ಪ್ರೇಮಾ(16)ಳಿಗೆ ನಿಟ್ಟೂರು ಬಾಲಕಿಯರ ಬಾಲ ಭವನದಲ್ಲಿ ಆಶ್ರಯ ನೀಡಲಾಗಿದೆ.
 
			        


 
			         
                        
 
                        

 
                        
 
                        
 
                        

 
                         
                         
                         
                        
 
                        
