ಇಂದ್ರಾಣಿ ಕಾಲುವೆಗೆ ಜನರು ಮತ್ತೆ ಮತ್ತೆ ತ್ಯಾಜ್ಯ ಎಸೆಯುತ್ತಿದ್ದು, ಪ್ಲಾಸ್ಟಿಕ್ ಬಾಟಲಿ, ಬಟ್ಟೆ ವೈದ್ಯಕೀಯ ತ್ಯಾಜ್ಯ ಸಹಿತ ಮೊದಲಾದ ತ್ಯಾಜ್ಯಗಳು ಅಪಾರ `ಪ್ರಮಾಣದಲ್ಲಿ ಶೇಖರಣೆಗೊಂಡಿದೆ. ಕೊಡಂಕೂರಿನಲ್ಲಿ ಇಂದ್ರಾಣಿ ನದಿಗೆ ಅಳವಡಿಸಿದ ಟ್ರ್ಯಾಶ್ ಬ್ಯಾರಿಯಲ್ನಲ್ಲಿ ಸಾಕಷ್ಟು ಪ್ರಮಾಣದ ತ್ಯಾಜ್ಯ ಶೇಖರಣೆಗೊಂಡಿದೆ. ಎಲ್ಲ ತ್ಯಾಜ್ಯವನ್ನು ಸಂಸ್ಕರಣ ಘಟಕಕ್ಕೆ ಕಳುಹಿಸಲಾಗುವುದು ಎಂದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ
Health
ಸೊಳ್ಳೆ ಉತ್ಪತ್ತಿಗೆ ಕಾರಣರಾಗುವವರ ವಿರುದ್ಧ ಕ್ರಮಕ್ಕೆ ಸಿವಿಲ್ ಬೈಲಾ ಜಾರಿ : ಡಾ.ಪ್ರಶಾಂತ್ ಭಟ್
ಉಡುಪಿ : ಡೆಂಗು ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹರಡದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಈ ಜವಾಬ್ದಾರಿ ಮರೆಯುವ ನಾಗರಿಕರ ವಿರುದ್ಧ ಕಾನೂನು ಕ್ರಮ ಜರಗಿಸುವ ಸಿವಿಲ್ ಬೈಲಾವನ್ನು ಉಡುಪಿ ನಗರಸಭೆಗೆ ಕರಡು ಪ್ರತಿ ತಯಾರಿಸಿ ಸಲ್ಲಿಸಲಾಗಿದೆ. ಇದನ್ನು ಜಾರಿಗೆ ತರುವ ಬಗ್ಗೆ ರಾಜ್ಯ ಸರಕಾರದ ಮಟ್ಟದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮಲೇರಿಯಾ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಜನವರಿಯಿಂದ ಜೂನ್ 25ರವರೆಗೆ ಒಟ್ಟು 164 ಡೆಂಗು ಪ್ರಕರಣಗಳು ವರದಿಯಾಗಿವೆ. ಇದರಲ್ಲಿ ಉಡುಪಿ- 102, ಕುಂದಾಪುರ- 35, ಕಾರ್ಕಳ- 25 ಪ್ರಕರಣಗಳು ಕಂಡುಬಂದಿವೆ. ಅದೇ ರೀತಿ ಒಟ್ಟು 30 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ.
ಇದರಲ್ಲಿ 29 ವಲಸೆ ಕಾರ್ಮಿಕರು ಹಾಗೂ ಒಬ್ಬರು ಸ್ಥಳೀಯರು ಸೇರಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಅಂತಾರಾಷ್ಟ್ರೀಯ ಮಾದಕದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನ ಪ್ರಯುಕ್ತ ಕಾರ್ಯಾಗಾರ
ಉಡುಪಿ : ಅಂತಾರಾಷ್ಟ್ರೀಯ ಮಾದಕದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದ ಪ್ರಯುಕ್ತ ಮಾಹಿತಿ ಕಾರ್ಯಗಾರವು ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗ ಸಭಾಂಗಣದಲ್ಲಿ ನಡೆಯಿತು.

ಈ ವರ್ಷದ ಧ್ಯೇಯ ವಾಕ್ಯ The evidence is clear :invest in prevention ಈ ಮಾಹಿತಿ ಕಾರ್ಯಗಾರವನ್ನು ರೋಟರಿಯನ್ PHF ದೀಪ ಭಂಡಾರಿ ಅಧ್ಯಕ್ಷರು ರೋಟರಿ ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ರೋಟರಿಯನ್ PHF ಶುಭ ಬಾಶ್ರೀ ಕಾರ್ಯದರ್ಶಿ ರೋಟರಿ ಉಡುಪಿ ಮತ್ತು ಶ್ರೀಮತಿ ಶ್ರೀಲತಾ ಉಪನ್ಯಾಸಕರು ವಿದ್ಯಾರತ್ನ ನರ್ಸಿಂಗ್ ಕಾಲೇಜು ಇವರು ಆಗಮಿಸಿದ್ದರು. ಡಾ ಎ ವಿ ಬಾಳಿಗ ಸಮೂಹ ಸಂಸ್ಥೆಯ ವೈದ್ಯಕೀಯ ನಿರ್ದೇಶಕರಾದ ಡಾ ಪಿ ವಿ ಭಂಡಾರಿ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ದೀಪಕ್ ಮಲ್ಯ, ಡಾ. ಮಾನಸ್ ಆರ್ ಮತ್ತು ಆಸ್ಪತ್ರೆಯ ಆಡಳಿತ ಅಧಿಕಾರಿಯಾದ ಶ್ರೀಮತಿ ಸೌಜನ್ಯ ಶೆಟ್ಟಿ ಇವರು ಉಪಸ್ಥಿತರಿದ್ದರು. ಶ್ರೀ ಸ್ರವಣ್ ವಿದ್ಯಾರ್ಥಿ ಎಂ ವಿ ಶೆಟ್ಟಿ ಕಾಲೇಜ್ ಮಂಗಳೂರು ಇವರು ಕಾರ್ಯಕ್ರಮಕ್ಕೆ ಪ್ರಾರ್ಥಿಸಿದರು. ಕುಮಾರಿ ಫ್ಲಾವಿಯ ವಿದ್ಯಾರ್ಥಿನಿ ಕ್ರಿಸ್ತು ಜಯಂತಿ ಬೆಂಗಳೂರು ಇವರು ಸ್ವಾಗತಿಸಿದರು. ಸೈಂಟ್ ಆಗ್ನೆಸ್ ಪಿ ಜಿ ಕಾಲೇಜ್ ಮಂಗಳೂರು ಇಲ್ಲಿನ ವಿದ್ಯಾರ್ಥಿನಿಯಾರಾದ ಕುಮಾರಿ ನಿಸರ್ಗ ಇವರು ವಂದಿಸಿದರು. ಹಾಗೂ ಕುಮಾರಿ ರಚನ ರೂತ್ ಡಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ವಿದ್ಯಾರತ್ನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮಾದಕ ವ್ಯಸನ ಹಾಗೂ ಅದರ ಅಪಾಯದ ಕುರಿತಾಗಿ ಮೂಕಾಭಿನಯ ಮತ್ತು ಪ್ರಹಸನ ಪ್ರದರ್ಶಿಸಿದರು.
ನಂತರ ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ಪಿ.ವಿ. ಭಂಡಾರಿ ಮಾದಕ ವ್ಯಸನದ ದುಷ್ಪರಿಣಾಮಗಳ ಕುರಿತು ಮಾತನಾಡಿದರು. ಡಾ. ದೀಪಕ್ ಮಲ್ಯ ಮಾದಕ ವ್ಯಸನವನ್ನು ತಡೆಗಟ್ಟುವಲ್ಲಿ ಗೆಳೆಯರ ಪಾತ್ರ ಎಂಬ ವಿಷಯದ ಕುರಿತು ಮಾತನಾಡಿದರು.
120ಕ್ಕೂ ಹೆಚ್ಚಿನ ನರ್ಸಿಂಗ್ ವಿದ್ಯಾರ್ಥಿಗಳು, ಮನಶಾಸ್ತ್ರಜ್ಞ ವಿದ್ಯಾರ್ಥಿಗಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.
ಕಾರ್ಕಳ : ಯುವ ಸಂಗಮ(ರಿ.) ಕೌಡೂರು ಇವರ ಆಶ್ರಯದಲ್ಲಿ ಕಾರ್ಕಳ ತಾಲ್ಲೂಕಿನಲ್ಲಿಯೇ ವಿನೂತನ ಕಾರ್ಯಕ್ರಮ ಹೃದಯ ತಪಾಸಣೆ (ಇಸಿಜಿ), ಆರೋಗ್ಯ ತಪಾಸಣೆ, ಹೃದಯಾಘಾತದ ಬಗ್ಗೆ ಮಾಹಿತಿ ಕಾರ್ಯಗಾರ ಮತ್ತು ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಇಂದು ಕೌಡೂರು ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು.
ಕಾರ್ಯಕ್ರಮವನ್ನು ಜಯದೇವ ಆಸ್ಪತ್ರೆ ಬೆಂಗಳೂರು, ಮಿತ್ರ ಆಸ್ಪತ್ರೆ ಉಡುಪಿ, ಹೈಟೆಕ್ ಆಸ್ಪತ್ರೆ ಉಡುಪಿ ಇಲ್ಲಿಯ ತಜ್ಞ ವೈದ್ಯರಾದ ಡಾ. ಅನೂಪ್ ಕೆ ಶೆಟ್ಟಿಯವರು ಉದ್ಘಾಟಿಸಿ ಹೃದಯಾಘಾತ ಮತ್ತು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ಪ್ರಾಂಪಾಲರಾದ ಡಾ| ಮಂಜುನಾಥ್ ಎ ಕೋಟ್ಯಾನ್ರವರು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ಅರೋಗ್ಯ ತಪಾಸಣೆಯನ್ನು ಉಡುಪಿಯ ಖ್ಯಾತ ವೈದ್ಯರಾದ ಡಾ. ಪ್ರಭಾಕರ್ ಮಲ್ಯ, ಉದ್ಯಾವರ SDM ಆಸ್ಪತ್ರೆಯ ವೈದ್ಯೆ ಡಾ. ಅನ್ಲಾ ಕೆ ಶೆಟ್ಟಿ, ಬೈಲೂರು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿಯವರಾದ ಡಾ. ಮಹಾಂತ್ ಹೆಗ್ಡೆಯವರು ನಡೆಸಿಕೊಟ್ಟರು.
ಉಡುಪಿಯ ನ್ಯೂ ನೇಶನಲ್ ಡಯಾಗ್ನೋಸ್ಟಿಕ್ ಸೆಂಟರ್ನ ಪೂರ್ಣ ಕಾಮತ್ ಅವರ ತಂಡದಿಂದ ಸಾರ್ವಜನಿಕರಿಗೆ ECG, ಮಧುಮೇಹ ಪರೀಕ್ಷೆ ನಡೆಯಿತು.
ಈ ಸಂದರ್ಭದಲ್ಲಿ ಸಂಘದ ಗೌರವ ಸಲಹೆಗಾರಾರಾದ ಕೆ ಸುಧೀರ್ ಹೆಗ್ಡೆ ಹಾಗೂ ಪಧಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಮಾಹೆ ಮತ್ತು ಫಿಟ್ವಿಬ್ ಸಹಭಾಗಿತ್ವದಲ್ಲಿ ಮಲ್ಪೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ವಿದ್ಯಾರ್ಥಿ ವ್ಯವಹಾರಗಳ ವಿಭಾಗ [ಡಿಪಾರ್ಟ್ಮೆಂಟ್ ಆಫ್ ಸ್ಟೂಡೆಂಟ್ ಅಫೇರ್ಸ್] ಮತ್ತು ಕೆಎಂಸಿಯ ಫಿಟ್ನೆಸ್ ಕ್ಲಬ್ [ಫಿಟ್ವಿಬ್] ಜಂಟಿಯಾಗಿ ಮಲ್ಪೆಯ ಕದಿಕೆ ಬಳಿಯ ಸಮುದ್ರಕಿನಾರೆಯಲ್ಲಿ ಅಂತಾರಾಷ್ಟ್ರೀಯ ಯೋಗದಿನವನ್ನು ಆಚರಿಸಿತು. ಮಾದಕವ್ಯಸನದ ವಿರುದ್ಧ ಮಾನಸಿಕ ಜಾಗೃತಿಯನ್ನು ಮೂಡಿಸುವ ಕುರಿತು ಆಶಯವನ್ನು ಕೂಡ ಈ ಕಾರ್ಯಕ್ರಮವು ಹೊಂದಿತ್ತು.
ಮಾಹೆಯ ಯೋಜನೆ ಮತ್ತು ನಿಯಂತ್ರಣ ವಿಭಾಗದ ನಿರ್ದೇಶಕ [ಡೈರೆಕ್ಟರ್ ಆಫ್ ಪ್ಲ್ಯಾನಿಂಗ್ ಆ್ಯಂಡ್ ಮಾನಿಟರಿಂಗ್] ಡಾ. ರವಿರಾಜ್ ಎನ್. ಎಸ್. ಅವರು ಮುಖ್ಯ ಅತಿಥಿಗಳಾಗಿದ್ದು, ‘ಪ್ರತಿಯೊಬ್ಬನ ದಿನನಿತ್ಯದ ಜೀವನದಲ್ಲಿ ಯೋಗಾಭ್ಯಾಸಕ್ಕೆ ವಿಶೇಷ ಮಹತ್ತ್ವವಿದೆ. ಬೋಧಕರು ಮತ್ತು ವಿದ್ಯಾರ್ಥಿಗಳು ಏಕಾಗ್ರತೆಯನ್ನು ಸಾಧಿಸುವಲ್ಲಿಯೂ ಇದು ಪ್ರಯೋಜನಕಾರಿ. ಯೋಗ ಕೇವಲ ಶಾರೀರಿಕ ಚಕುವಟಿಕೆಯಾಗದೆ, ದೇಹ, ಮನಸ್ಸು ಮತ್ತು ಆತ್ಮದ ನಡುವಿನ ಸಮತೋಲಕ್ಕೆ ಕಾರಣವಾಗುತ್ತದೆ. ಶೈಕ್ಷಣಿಕ ವಾತಾವರಣವು ಸ್ಪರ್ಧಾತ್ಮಕವಾಗಿ ಬೆಳೆಯತ್ತಿರುವ ಈ ಸಂದರ್ಭದಲ್ಲಿ ಯೋಚನಾ ಸ್ಪಷ್ಟತೆ, ಭಾವನಾತ್ಮಕ ದೃಢತೆ, ಶಾರೀರಕ ಉಲ್ಲಾಸಗಳನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಲ್ಲಿ ಯೋಗಾಭ್ಯಾಸವು ಸಹಕಾರಿಯಾಗಲಿದೆ’ ಎಂದರು.
ಮಾಹೆಯ ವಿದ್ಯಾರ್ಥಿ ವ್ಯವಹಾರ ವಿಭಾಗದ ನಿರ್ದೇಶಕ [ಡೈರೆಕ್ಟರ್ ಆಫ್ ಸ್ಟೂಡೆಂಟ್ ಅಫೇರ್ಸ್] ರಾದ ಡಾ. ಗೀತಾ ಮಯ್ಯ ಅವರು ಮಾತನಾಡಿ, ‘ಯೋಗವು ದೇಶದ ಭವ್ಯ ಸಾಂಸ್ಕೃತಿಕ ಪರಂಪರೆಯ ಭಾಗವಾಗಿ ಬೆಳೆದು ಬಂದಿದೆ. ವ್ಯಕ್ತಿಯೊಬ್ಬನ ಸಮಗ್ರ ಬೆಳವಣಿಗೆಗೆ ಯೋಗಾಭ್ಯಾಸವು ತುಂಬ ಉಪಯಕ್ತವೆನಿಸುತ್ತದೆ. ಸಮುದ್ರಕಿನಾರೆಯಂಥ ನಿಸರ್ಗ ಸುಂದರ ವಾತಾವರಣದಲ್ಲಿ ಯೋಗಾಭ್ಯಾಸ ಮಾಡುವುದೇ ಒಂದು ವಿಶಿಷ್ಟ ಅನುಭವವಾಗಿದೆ’ ಎಂದರು.
ಮಾಹೆಯ ಯೋಗ ವಿಭಾಗದ ಮುಖ್ಯಸ್ಥರಾದ ಡಾ. ಅನ್ನಪೂರ್ಣಾ ಅವರು ಮಾತನಾಡಿ, ‘ಯೋಗಕ್ಕೆ ವಿಶೇಷ ಅರ್ಥವಿದೆ. ಅದು ಆತ್ಮದ ಯಾನ, ಅಂದರೆ ಆತ್ಮವು ಆತ್ಮದ ಮೂಲಕ ಆತ್ಮದತ್ತ ಪಯಣಿಸುವುದು! ಯೋಗಾಭ್ಯಾಸವು ನಮ್ಮ ಪರಂಪರೆಯಿಂದ ಬಂದ ಬಳುವಳಿಯಾಗಿದ್ದು ಇದು ನಮ್ಮ ಹಿರಿಯರ ಸಮರಸವಾದ ಮತ್ತು ಸ್ವಾಸ್ಥ್ಯಪೂರ್ಣವಾದ ಬದುಕಿನ ದ್ಯೋತಕವಾಗಿದೆ. ಪ್ರಸ್ತುತ ಯೋಗದಿನಾಚರಣೆಯು ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಲು ಪ್ರೇರೇಪಿಸುವ ಸಂದರ್ಭವಾಗಿದೆ’ ಎಂದರು.
ಫಿಟ್ವಿಬ್ನ ಅಧ್ಯಕ್ಷರಾದ ಅರ್ಜುನ್ ಆಹುಜಾ ಅವರು ಕಾರ್ಯಕ್ರಮ ಸಂಯೋಜಿಸಿದರು. ಮುಖ್ಯ ಯೋಗ ಕಲಾಪದ ಪೂರ್ವದಲ್ಲಿ ಫಿಟ್ವಿಬ್ನ ಸದಸ್ಯರು ಹದಿನೆದು ನಿಮಿಷಗಳ ಕಾಲ ಝುಂಬಾ ಮತ್ತು ಏರೋಬಿಕ್ ಕಲಾಪಗಳನ್ನು ನಡೆಸಿಕೊಟ್ಟರು. ಡಾ. ಅನ್ನಪೂರ್ಣಾ ಯೋಗಾಸನಗಳ ಮಹತ್ತ್ವವನ್ನು ವಿವರಿಸಿದರು. ಆರಂಭದಲ್ಲಿ ಚತ್ರಿಕ್ ಮಿತ್ತಲ್ ಪ್ರಾರ್ಥನಾಗೀತೆಯನ್ನು ಹಾಡಿದರು. ವಿದ್ಯಾರ್ಥಿ ವ್ಯವಹಾರ [ಸ್ಟೂಡೆಂಟ್ ಅಫೇರ್ಸ್] ವಿಭಾಗದ ಉಪನಿರ್ದೇಶಕರಾದ ಅರವಿಂದ ಪಾಂಡೆ ಧನ್ಯವಾದ ಸಮರ್ಪಿಸಿದರು.
ಕುಂದಾಪುರ : ತಲ್ಲೂರು ಫ್ಯಾಮಿಲಿ ಟ್ರಸ್ಟ್ ನಡೆಸುತ್ತಿರುವ ನಾರಾಯಣ ವಿಶೇಷ ಮಕ್ಕಳ ಶಾಲೆ ತಲ್ಲೂರು ಇಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಶಿಕ್ಷಕರಾದ ಶ್ರೀಯುತ ಮುಡೂರ್ ಮಾಸ್ಟರ್ ಅವರು ವಿದ್ಯಾರ್ಥಿಗಳಿಗೆ ಯೋಗವನ್ನು ಕಲಿಸುವುದರ ಜೊತೆಗೆ ದಿನನಿತ್ಯದ ಜೀವನದಲ್ಲಿ ಯೋಗದಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ವಿಶೇಷ ಮಕ್ಕಳಿಗೆ ಅನ್ವಯವಾಗುವ ಆಸನಗಳ ಬಗ್ಗೆ ತಿಳಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ “ಯೋಗ ಮ್ಯಾಟ್ ವಿತರಣೆ” ನಡೆಯಿತು. ಪಸ್ಟ್ ಸ್ಟೆಪ್ ಡ್ಯಾನ್ಸ್ ಸ್ಟುಡಿಯೋದ ಮಾಲಕರಾದ ಶ್ರೀಮತಿ ಅಕ್ಷತಾ ರಾವ್ ಯೋಗ ಮ್ಯಾಟ್ ವಿತರಿಸಿದರು. ನಂತರ ಅವರು ಮಾತನಾಡಿ, ಪ್ರತಿನಿತ್ಯ ಯೋಗ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯ. ಎಲ್ಲರೂ ಯೋಗ ಮಾಡಿ ಆರೋಗ್ಯವಂತರಾಗಿರಬೇಕು ಎಂದು ತಿಳಿಸಿದರು.
ಫಸ್ಟ್ ಸ್ಟೆಪ್ ಡ್ಯಾನ್ಸ್ ಸ್ಟುಡಿಯೋದ ಮಿಷೇಲ್, ಶಾರದ, ನಿಲೇಶ್ ಹಾಗೂ ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಮ್ಯಾನೇಜಿಂಗ್ ಶ್ರೀ ಸುರೇಶ್. ಟಿ ಉಪಸ್ಥಿತರಿದ್ದರು.
ಸಹಶಿಕ್ಷಕಿ ಶ್ರೀಮತಿ ಶ್ರುತಿ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಪ್ರತಿಮಾ ವಂದಿಸಿದರು. ಸಹ ಶಿಕ್ಷಕಿ ಶ್ರೀಮತಿ ದೀಪಾ ಕಾರ್ಯಕ್ರಮ ನಿರೂಪಿಸಿದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನಲ್ಲಿ 2024ರ ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆ
ಮಣಿಪಾಲ : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಜೂನ್ 21, 2024 ರಂದು “ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ” ಎಂಬ ವಿಷಯದೊಂದಿಗೆ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಿತು. ಇದನ್ನು ಯೋಗ ವಿಭಾಗ, ಇಂಟಿಗ್ರೇಟಿವ್ ಮೆಡಿಸಿನ್ ಮತ್ತು ರಿಸರ್ಚ್ ಸೆಂಟರ್ (CIMR) ಸಂಘಟಿಸಿತು ಮತ್ತು 350 ವಿದ್ಯಾರ್ಥಿಗಳು, ಸಿಬ್ಬಂದಿ, ಅಧ್ಯಾಪಕರು ಮತ್ತು ಸ್ಥಳೀಯ ಸಮುದಾಯದ ಸದಸ್ಯರು ಭಾಗವಹಿಸಿದ್ದರು.’
ಮಣಿಪಾಲದ ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್ನ ಒಳಾಂಗಣ ಫುಟ್ಬಾಲ್ಕೋರ್ಟ್ನಲ್ಲಿ ಬೆಳಿಗ್ಗೆ 8:00 ಗಂಟೆಗೆ ಯೋಗಾಭ್ಯಾಸದೊಂದಿಗೆ ಆಚರಣೆಯು ಪ್ರಾರಂಭವಾಯಿತು. ಸಿಐಎಂಆರ್ನ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಕೆ. ಅವರ ನೇತೃತ್ವದಲ್ಲಿ ವಿವಿಧ ಆಸನಗಳು, ಪ್ರಾಣಾಯಾಮ ಮತ್ತು ವಿಶ್ರಾಂತಿ ತಂತ್ರಗಳನ್ನು ಒಳಗೊಂಡಂತೆ ಯುಜಿಸಿ ಪ್ರೋಟೋಕಾಲ್ ಅನ್ನು ಅನುಸರಿಸಿ ಯೋಗಾಭ್ಯಾಸಗಳನ್ನು ನಡೆಸಲಾಯಿತು.
ಯೋಗಾಭ್ಯಾಸದ ನಂತರ, ಸಭಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕಿ ಡಾ.ಲಾವ್ಯಾ ಶೆಟ್ಟಿ, ಪಿಜಿ ವಿದ್ಯಾರ್ಥಿನಿ ಡಾ.ದಿವ್ಯಾ ಪೂಜಾರಿ ನಿರ್ವಹಿಸಿದರು. ಗೌರವಾನ್ವಿತ ಅತಿಥಿಗಳಾಗಿ ಮಾಹೆ ಮಣಿಪಾಲದ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್, ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ ಶರತ್ ಕುಮಾರ್ ರಾವ್, ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ನ ಕಾರ್ಯಾಧ್ಯಕ್ಷರು ಮತ್ತು ಅಕಾಡಮಿ ಆಫ್ ಜನರಲ್ ಎಜುಕೇಶನ್ ಅಧ್ಯಕ್ಷರಾದ ಶ್ರೀ ಟಿ.ಸತೀಶ್ ಯು. ಪೈ, ಮಾಹೆ ಕುಲಸಚಿವ ಡಾ.ಪಿ. ಗಿರಿಧರ್ ಕಿಣಿ, ಶ್ರೀಮತಿ ಇಂದಿರಾ ಬಲ್ಲಾಳ್, ಮತ್ತು ಡಾ. ಸತೀಶ್ ರಾವ್, ನಿರ್ದೇಶಕರು, ಸಂಶೋಧನೆ ಮತ್ತು ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸಸ್ ಅವರುಗಳು ಭಾಗವಹಿಸಿದ್ದರು.
ಕಾರ್ಯಕ್ರಮವು ಡಾ.ಆತ್ಮಿಕಾ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು, ನಂತರ ಡಾ.ಬಿ.ಎಸ್. ಸತೀಶ್ ರಾವ್ ಸ್ವಾಗತಿಸಿದರು. ಡಾ.ಅನ್ನಪೂರ್ಣ ಕೆ. ಅವರು ಕಳೆದ ಮೂರು ತಿಂಗಳಿನಿಂದ ನಡೆದ ಚಟುವಟಿಕೆಗಳು ಮತ್ತು ಸ್ಪರ್ಧೆಗಳ ಅವಲೋಕನವನ್ನು ನೀಡಿದರು, ಸಮಗ್ರ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಯೋಗದ ಮಹತ್ವವನ್ನು ಒತ್ತಿ ಹೇಳಿದರು. ಡಾ.ಶರತ್ ಕುಮಾರ್ ರಾವ್ ಅವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸಿ, ಪ್ರತಿನಿತ್ಯ ಯೋಗಾಭ್ಯಾಸ ಮಾಡುವಂತೆ ಒತ್ತಾಯಿಸಿದರು. ವಿವಿಧ ಯೋಗ ಸ್ಪರ್ಧೆಗಳಿಗೆ ಪ್ರಮಾಣ ಪತ್ರ ಹಾಗೂ ಬಹುಮಾನವನ್ನು ಡಾ.ಪಿ. ಗಿರಿಧರ್ ಕಿಣಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ಇಂದಿರಾ ಬಲ್ಲಾಳ್ರವರಿಂದ ಗಣ್ಯ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಯೋಗ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಯೋಗ ಚಿಕಿತ್ಸಕಿ ಧ್ಯಾನ ಮಂದಿರ ಉಡುಪಿಯ ಲಕ್ಷ್ಮೀ ದಿವಾಕರ್ ಮತ್ತು ಅಯ್ಯಂಗಾರ್ ಯೋಗ ತರಬೇತುದಾರರಾದ ವನಿತಾ ಪೈ ಅವರನ್ನು ಸನ್ಮಾನಿಸಲಾಯಿತು


ಡಾ.ಎಚ್.ಎಸ್.ಬಲ್ಲಾಳ್ ಅವರು ಅಧ್ಯಕ್ಷೀಯ ಭಾಷಣ ಮಾಡಿ, ಆಸನ ಮತ್ತು ಪ್ರಾಣಾಯಾಮದ ಪ್ರಯೋಜನಗಳನ್ನು ಒತ್ತಿ ಹೇಳಿದರು. ಎಂ.ಎಸ್ಸಿ ಯೋಗ ಥೆರಪಿ ವಿದ್ಯಾರ್ಥಿಗಳ ಯೋಗ ಪ್ರದರ್ಶನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು. ಡಾ.ಬಿ.ಎಸ್ ಅವರ ನೇತೃತ್ವದಲ್ಲಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗಿತ್ತು. ಸತೀಶ್ ರಾವ್ ಮತ್ತು ಡಾ. ಅನ್ನಪೂರ್ಣ ಕೆ., ಸಿಐಎಂಆರ್, ಮತ್ತು ಎಂ.ಎಸ್ಸಿ ಯೋಗ ಥೆರಪಿ ವಿದ್ಯಾರ್ಥಿಗಳು ಯೋಗ ವಿಭಾಗದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಸಹಕರಿಸಿದರು. ಮಾಹೆಯ ಸಿಐಎಂಆರ್ನ ಯೋಗ ವಿಭಾಗದ ಸಹ ಪ್ರಾಧ್ಯಾಪಕ ಡಾ. ನೀತಿನ ಕುಮಾರ್ ಜೆ ಪಾಟೀಲ್ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಉಡುಪಿ : ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿಮಿಟೆಡ್ ಇದರ ವತಿಯಿಂದ ಇಂದು ವಿಶ್ವ ಯೋಗ ದಿನಾಚರಣೆಯನ್ನು ಜಗನ್ನಾಥ ಸಭಾಭವನದಲ್ಲಿ ಆಚರಿಸಲಾಯಿತು.

ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಜಯಕರ ಶೆಟ್ಟಿ ಇಂದ್ರಾಳಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬ್ಲಿಸ್ ಯೋಗ ತರಬೇತಿ ಕೇಂದ್ರದ ತರಬೇತುದಾರರಾದ ಶ್ರೀಮತಿ ಸುಮನ ಶ್ರೀನಿವಾಸ್ ಯೋಗ ತರಬೇತಿಯನ್ನು ನಡೆಸಿಕೊಟ್ಟರು.
ಯೋಗದಿಂದ ಅರೋಗ್ಯ ರಕ್ಷಣೆ ಕುರಿತು ಮಾಹಿತಿ ನೀಡಿದರು. ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು. ಪ್ರತಿಮ ವಿ. ಎಸ್ ಇವರು ವಿವಿಧ ಬಗೆಯ ಯೋಗ ಪ್ರತ್ಯಕ್ಷತೆಯನ್ನು ನೀಡಿ ಸಹಕರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಶ್ರೀ ರಾಜೇಶ್ ವಿ. ಶೇರಿಗಾರ್, ನಿರ್ದೇಶಕರಾದ ಎಲ್ ಉಮಾನಾಥ್, ಶ್ರೀಮತಿ ಜಯ ಶೆಟ್ಟಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಪ್ರವೀಣ್ ಕುಮಾರ್, ಲೆಕ್ಕಿಗರಾದ ಶ್ರೀ ಅಶ್ವಿನಿ ಕುಮಾರ್ ಹಾಗೂ ಎಲ್ಲಾ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿಗಳು ಮತ್ತು ದೈನಿಕ ಠೇವಣಿ ಸಂಗ್ರಹಾಕರು, ಉಪಸ್ಥಿತರಿದ್ದರು. ಮಲ್ಪೆ ಶಾಖಾ ವ್ಯವಸ್ಥಾಪಕರಾದ ಶ್ರೀ ನವೀನ್ ಕೆ ಯವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಉಡುಪಿ : ‘ನಮಗಾಗಿ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ಘೋಷ ವಾಕ್ಯದೊಂದಿಗೆ ನಡೆಯುತ್ತಿರುವ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿರಲಿ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗಾಭ್ಯಾಸ ಅತ್ಯಗತ್ಯ ಎಂದು ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಅವರು ಉಡುಪಿ ಜಿಲ್ಲಾ ಬಿಜೆಪಿ ಆಶ್ರಯದಲ್ಲಿ ಬಿಜೆಪಿ ಉಡುಪಿ ನಗರ ಮತ್ತು ಗ್ರಾಮಾಂತರ ಮಂಡಲಗಳ ಸಹಯೋಗದೊಂದಿಗೆ ಉಡುಪಿಯ ಶೇಷಶಯನ ಸಭಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯಲ್ಲಿ ಯೋಗ ದಿನವನ್ನು ಪ್ರಸ್ತಾವಿಸಿದ ಫಲವಾಗಿ 177 ದೇಶಗಳ ಬೆಂಬಲದೊಂದಿಗೆ ಕಳೆದ 10 ವರ್ಷಗಳಿಂದ ಭಾರತದ ಸಹಿತ ನೂರಾರು ದೇಶಗಳು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಆಚರಿಸುತ್ತಿರುವುದು ಐತಿಹಾಸಿಕ ದಾಖಲೆಯಾಗಿದೆ.
ಬದುಕಿನ ಆಸೆ ಆಕಾಂಕ್ಷೆಗಳು ಈಡೇರಲು ಆರೋಗ್ಯ ಅತ್ಯವಶ್ಯಕ. ಈ ನಿಟ್ಟಿನಲ್ಲಿ ಶಿಸ್ತು ಬದ್ಧ ಜೀವನ ಕ್ರಮದ ಜೊತೆಗೆ ಯೋಗಾಭ್ಯಾಸದ ಕೊಡುಗೆ ಮಹತ್ವಪೂರ್ಣ ಎಂದು ಯಶ್ಪಾಲ್ ಸುವರ್ಣ ಹೇಳಿದರು.
ಪತಂಜಲಿ ಯೋಗ ಶಿಕ್ಷಣ ಕೇಂದ್ರದ ಉಡುಪಿ ಸಮಿತಿಯ ಯೋಗ ಶಿಕ್ಷಕ ನಾಗರಾಜ ಕಿಣಿ ಯೋಗದ ಕುರಿತು ಮಾಹಿತಿಯನ್ನು ನೀಡಿ ಯೋಗ ತರಗತಿಯನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ್ ಶೆಟ್ಟಿ, ಮಾಜಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ. ಸುವರ್ಣ, ಬಿಜೆಪಿ ರಾಜ್ಯ ಎಸ್.ಸಿ. ಮೋರ್ಚಾ ಉಪಾಧ್ಯಕ್ಷ ದಿನಕರ ಬಾಬು, ಬಿಜೆಪಿ ಉಡುಪಿ ನಗರಾಧ್ಯಕ್ಷ ದಿನೇಶ್ ಅಮೀನ್, ಯೋಗ ದಿನಾಚರಣೆಯ ಜಿಲ್ಲಾ ಸಂಚಾಲಕರಾದ ವಿಜಯಕುಮಾರ್ ಉದ್ಯಾವರ, ಶಿವಕುಮಾರ್ ಅಂಬಲಪಾಡಿ, ಗಿರೀಶ್ ಎಮ್. ಅಂಚನ್, ಜಿಲ್ಲಾ ಓಬಿಸಿ ಮೋರ್ಚಾ ಅಧ್ಯಕ್ಷ ವಿಜಯ ಕೊಡವೂರು, ಜಿಲ್ಲಾ ಎಸ್.ಸಿ. ಮೋರ್ಚಾ ಅಧ್ಯಕ್ಷ ಚಂದ್ರ ಪಂಚವಟಿ, ಬಿಜೆಪಿ ಉಡುಪಿ ನಗರ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಿ. ಶೆಟ್ಟಿ, ಉಡುಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಸಚಿನ್ ಪೂಜಾರಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಳಿನಿ ಪ್ರದೀಪ್ ರಾವ್, ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಕಾಮತ್, ಮಹಿಳಾ ಮೋರ್ಚಾ ಉಡುಪಿ ನಗರಾಧ್ಯಕ್ಷೆ ಅಶ್ವಿನಿ ಆರ್. ಶೆಟ್ಟಿ, ಉಡುಪಿ ಗ್ರಾಮಾಂತರ ಅಧ್ಯಕ್ಷೆ ರಮ್ಯಾ ರಾವ್, ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಆಸಿಫ್ ಕಟಪಾಡಿ, ಯೋಗ ಶಿಕ್ಷಕಿ ಶೋಭಾ ಶೆಟ್ಟಿ, ಅನಿತಾ ಸುವರ್ಣ, ಚೆನ್ನಮ್ಮ ಉಡುಪ ಸಹಿತ ಪಕ್ಷದ ಪ್ರಮುಖರು, ವಿವಿಧ ಸ್ತರದ ಪದಾಧಿಕಾರಿಗಳು, ನಗರಸಭಾ ಸದಸ್ಯರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವಿಶ್ವ ಯೋಗ ದಿನಾಚರಣೆ – “ಯೋಗೀಶ್ವರನೆಡೆಗೆ ಯೋಗ ನಡಿಗೆ” ಎಂಬ ವಿಶಿಷ್ಟ ಕಾರ್ಯಕ್ರಮ
ಉಡುಪಿ : ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ, ಶ್ರೀ ಕ್ಷೇತ್ರ ಧರ್ಮಸ್ಥಳದ ಸೌಖ್ಯವನ ವಿಶಿಷ್ಟವಾಗಿ ವಿಶ್ವ ಯೋಗ ದಿನವನ್ನು ಆಚರಿಸಿತು. ಉಡುಪಿ ಕ್ಲಾಕ್ಟವರ್ ನಿಂದ ಶ್ರೀ ಕೃಷ್ಣ ಮಠದವರೆಗೆ ನೂರಾರು ಜನ ಯೋಗ ನಡಿಗೆಯನ್ನು ಮಾಡಿದರು. ಯೋಗೀಶ್ವರನೆಡೆಗೆ ಯೋಗ ನಡಿಗೆ ಎಂಬ ಶೀರ್ಷಿಕೆ ಅಡಿ ಈ ಕಾರ್ಯಕ್ರಮ ನಡೆಯಿತು. ಯೋಗದ ಮಹತ್ವ ಸಾರಲು ಈ ಕಾರ್ಯಕ್ರಮ ನಡೆಸಲಾಯ್ತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು. ಶ್ರೀಕೃಷ್ಣನಿಗೆ ಇರುವ ಇನ್ನೊಂದು ಹೆಸರು ಯೋಗೇಶ್ವರ. ಯಾರು ಯೋಗ ಅನುಸರಿಸ್ತಾರೆ ಅವರಿಗೆ ಆರೋಗ್ಯ ಎಲ್ಲಾ ರೀತಿಯ ಸಂಪತ್ತು ಒಲಿಯುತ್ತದೆ. ಭಗವದ್ಗೀತೆ ಯೋಗದ ಮೂಲ. ಆಸನ ಪ್ರಾಣಾಯಾಮಗಳು ಮಾತ್ರ ಯೋಗಗಳಲ್ಲ. ನಮ್ಮ ಜೀವನದ ಎಲ್ಲಾ ಕರ್ಮಗಳು ಪರಿಪೂರ್ಣತೆಯಾದರೆ ಅದೆಲ್ಲವೂ ಯೋಗವೇ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನನ್ನ ದೇಶ ಶ್ರೇಷ್ಠ ಆಗಬೇಕು ಎಂಬುದು ಎಲ್ಲರ ಕನಸು. ಯೋಗದ ಮೂಲಕ ವಿಶ್ವದ ಗುರು ಎಂದು ಭಾರತ ಸಾಭೀತು ಮಾಡಿದೆ. ವಿಶ್ವದ 193 ದೇಶದಲ್ಲಿ ಯೋಗಕ್ಕೆ ಮನ್ನಣೆ ಸಿಕ್ಕಿದೆ. ಬದುಕಿನ ಪ್ರತಿದಿನ ಯೋಗಕ್ಕೆ ಅವಕಾಶ ಕೊಡಿ ಎಂದರು.