ಕಾರ್ಕಳ : ಇಲ್ಲಿನ ಸರಕಾರಿ ಆಸ್ಪತ್ರೆಯ ಎದುರು ಮಾ.23ರಂದು ಅಂದರ್-ಬಾಹರ್ ಇಸ್ಪೀಟು ಆಡುತ್ತಿದ್ದ 10 ಮಂದಿಯನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಚಂದ್ರಶೇಖರ, ಹನುಮಂತ, ಮಾರುತಿ, ಮಂಜುನಾಥ, ಸೋಮಣ್ಣ, ವೆಂಕಪ್ಪ, ಪ್ರವೀಣ, ಹನುಮೇಶ, ಪರ್ವತ ಹಾಗೂ ನೀರ್ಪಾದಿ ಎಂದು ಗುರುತಿಸಲಾಗಿದೆ.
ಇವರಿಂದ ಇಸ್ಪೀಟ್ ಆಟಕ್ಕೆ ಬಳಸಿದ್ದ 4,135 ರೂ. ಮತ್ತಿತರ ಪರಿಕರಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
			        


			        
                        
                        
                        
                        
                        
                        
                        