ಉಡುಪಿ : ಚಿನ್ನ ಖರೀದಿ ಸಂಸ್ಥೆಗೆ ಆರು ಲಕ್ಷ ರೂಪಾಯಿ ವಂಚಿಸಿದ ಕುರಿತು ಪ್ರಕರಣ ದಾಖಲಾಗಿದೆ.
ದೂರುದಾರ ಕಾರ್ತಿಕ (32), ಮಂಡ್ಯ ಜಿಲ್ಲೆಯ ಇವರು ಮೈಸೂರಿನಲ್ಲಿ ಧನ ಗಣಪತಿ ಗೋಲ್ಡ್ & ಡೈಮಂಡ್ ಫೈನಾನ್ಸ್‌ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.
ಕೆಲಸ ಮಾಡುವ ಸಂಸ್ಥೆಯು ಸಾರ್ವಜನಿಕರ ಚಿನ್ನದ ಸಾಲಗಳನ್ನು ಪಡೆದು ಚಿನ್ನ ಬಿಡಿಸಿಕೊಳ್ಳಲು ಸಾಧ್ಯವಾಗದ ಚಿನ್ನವನ್ನು ಗ್ರಾಹಕರ ಪರವಾಗಿ ಬಿಡಿಸಿಕೊಳ್ಳಲು ನೆರವಾಗಿ ಚಿನ್ನವನ್ನು ಖರೀದಿ ಮಾಡುವ ವ್ಯವಹಾರವನ್ನು ಮಾಡುತ್ತದೆ.
ಜನವರಿ 2ರಂದು ಕಂಪನಿಯ ಮ್ಯಾನೇಜರ್ ಅಭಿ ಮತ್ತು ಕಂಪನಿಯಲ್ಲಿ ಫೀಲ್ಡ್ ಆಫೀಸರ್ ಕೆಲಸ ಮಾಡಿ ಕೊಂಡಿರುವ ಕವನ್ ಎಂಬುವವರಲ್ಲಿ ಉಡುಪಿಯಿಂದ ಅಬ್ಬಾಸ್ ಎಂಬುವವರು ಕಛೇರಿಗೆ ಪೋನ್ ಮಾಡಿ ಉಡುಪಿಯ ಸೊಸೈಟಿಯಲ್ಲಿ ಚಿನ್ನವನ್ನು ಅಡವಿಟ್ಟಿದ್ದು, ಉಡುಪಿಗೆ ಹೋಗಿ ಚಿನ್ನವನ್ನು ಸೊಸೈಟಿಯಿಂದ ಬಿಡಿಸಿಕೊಂಡು ಬರುವಂತೆ ಕಳುಹಿಸಿರುತ್ತಾರೆ.
ಕಳುಹಿಸಿದ ನಂತರ ದೂರುದಾರರು ಅಬ್ಬಾಸ್ ಎಂಬುವವರನ್ನು 03/01/2025 ರಂದು ಕಾಪು ತಾಲೂಕು ಉಚ್ಚಿಲ ಬಳಿ ಮಧ್ಯಾಹ್ನ 02:00 ಗಂಟೆಗೆ ಭೇಟಿ ಮಾಡಿ ಚಿನ್ನವನ್ನು ಸೊಸೈಟಿಯಿಂದ ಬಿಡಿಸುವ ಬಗ್ಗೆ ಮಾತನಾಡಿ ಕೊಂಡು ಬೆಳಪು ವ್ಯವಸಾಯ ಸಹಕಾರಿ ಸಂಘ, ಉಡುಪಿಯ ಗುರುನಿತ್ಯಾನಂದ ಕೋ ಆಪರೇಟಿವ್ ಸೊಸೈಟಿ ಲಿಮಿಡೆಟ್ ಮತ್ತು ಕುಂದಾಪುರ ವ್ಯವಸಾಯ ಸಹಕಾರಿ ಸಂಘ ಹಾಗೂ ಮೂರ್ತೆದಾರರ ಸಹಕಾರಿ ಸಂಘ ಈ ಬ್ಯಾಂಕ್‌ಗಳಲ್ಲಿ ಚಿನ್ನ ಅಡವಿಟ್ಟಿರುವ ಬಗ್ಗೆ ಖಚಿತಪಡಿಸಿಕೊಂಡು ಅಬ್ಬಾಸ್‌ನ ಕುಂದಾಪುರ ಫೆಡರಲ್ ಬ್ಯಾಂಕ್‌ನ ಖಾತೆಗೆ RTGS ಮೂಲಕ ಮುಂಗಡ ಹಣವನ್ನು 6 ಲಕ್ಷ ರೂಪಾಯಿ ಹಣವನ್ನು ವರ್ಗಾಹಿಸಿರುವುದಾಗಿದೆ.
ನಂತರ ಜನವರಿ 4ರಂದು ದೂರುದಾರ ಕಾರ್ತಿಕ್ ಅವರು ಬೆಳಪು ವ್ಯವಸಾಯ ಸಹಕಾರಿ ಸಂಘದಲ್ಲಿ ಆರೋಪಿತರಾದ ಮೊಹಮ್ಮದ್ ಹನೀಫ್ ಮತ್ತು ಹೆಸರು ಗೊತ್ತಿಲ್ಲದ ವ್ಯಕ್ತಿ ಹಾಜರಾತಿಯಲ್ಲಿ 44 ಗ್ರಾಮ್ ಮತ್ತು ಉಡುಪಿಯ ಗುರುನಿತ್ಯಾನಂದ ಕೋ ಆಪರೇಟಿವ್ ಸೊಸೈಟಿ ಲಿಮಿಡೆಟ್ ನಲ್ಲಿ ಆರೋಪಿತರಾದ ಮೊಹಮ್ಮದ್ ಯಾಸೀನ್ ಹಾಜರಾತಿಯಲ್ಲಿ 16 ಗ್ರಾಮ್ ಹಾಗೂ ಮೂರ್ತೆದಾರರ ಸಹಕಾರಿ ಸಂಘ ಸಂತೆಕಟ್ಟೆಯಲ್ಲಿ ಆರೋಪಿತರಾದ ಮೊಹಮ್ಮದ್ ಯಾಸೀನ್ ಹಾಜರಾತಿಯಲ್ಲಿ 32 ಗ್ರಾಮ್ ಚಿನ್ನವನ್ನು ಬಿಡಿಸಿಕೊಂಡಿರುದ್ದಾರೆ.
ನಂತರ ಆರೋಪಿಯು ಕುಂದಾಪುರದಲ್ಲಿಯೂ ಚಿನ್ನ ಬಿಡಿಸಲು ಹೋಗುವ ಎಂದು ದೂರುದಾರರನ್ನು ಉಡುಪಿ ಬಸ್ ನಿಲ್ದಾಣಕ್ಕೆ ಬರಲು ಹೇಳಿ ದೂರುದಾರ ಕಾರ್ತಿಕ್ ಅವರನ್ನು ಕಾಯಿಸಿ ನಂತರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕಾರ್ತಿಕ್ ತಾನು ಬಿಡಿಸಿದ ಚಿನ್ನದ ಅಸಲಿಯತ್ತು ಬಗ್ಗೆ ಬ್ಯಾಂಕ್ ಸಿಬ್ಬಂದಿಯವರಲ್ಲಿ ವಿಚಾರಿಸಿರುತ್ತಾರೆ. ಆದರೂ ಈ ಬಗ್ಗೆ ಸಂಶಯಗೊಂಡು ತಾನು ಬಿಡಿಸಿದ ಚಿನ್ನದ ಅಸಲಿಯತ್ತು ಬಗ್ಗೆ ತಿಳಿದುಕೊಳ್ಳಲು ಉಡುಪಿಯ ಚಿನ್ನ ಟೇಸ್ಟಿಂಗ್‌ಗೆ ಮಧ್ಯಾಹ್ನ 01:15 ಗಂಟೆಗೆ ಅಂಗಡಿಗೆ ಹೋಗಿ ಪರೀಕ್ಷಿಸಿದ್ದಲ್ಲಿ ತಾನು ಬ್ಯಾಂಕ್‌ನಿಂದ ಬಿಡಿಸಿದ ಚಿನ್ನದ ಆಭರಣಗಳು ನಕಲಿ ಎಂದು ತಿಳಿದು ಬಂದಿರುತ್ತದೆ.
ಆರೋಪಿಗಳು ಸೊಸೈಟಿಯಲ್ಲಿ ಚಿನ್ನವನ್ನು ಅಡವಿರಿಸಿರುವುದಾಗಿ ಹೇಳಿ ಚಿನ್ನ ಬಿಡಿಸಲು ಹಣವಿಲ್ಲ ಎಂದು ಹೇಳಿ ದೂರುದಾರರಿಗೆ ನಕಲಿ ಚಿನ್ನ ನೀಡಿ ಪಿರ್ಯಾದಿದಾರರ ಸಂಸ್ಥೆಗೆ 6 ಲಕ್ಷ ರೂಪಾಯಿ ವಂಚನೆ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.