ಉಡುಪಿ : ಅಂಬಲಪಾಡಿಯ ಬುಲೆಟ್ ಶೋರೂಮ್ ಎದುರುಗಡೆಯ ಸರ್ವಿಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ಸವಾರನೊಬ್ಬ ತನ್ನ ವಾಹನದ ಮುಂದಿನ ಚಕ್ರವನ್ನು ಮೇಲೆಕ್ಕೆತ್ತಿ ವೀಲಿಂಗ್ ಮಾಡಿರುವ ಘಟನೆ ನಡೆದಿದ್ದು, ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ.
ಆರೋಪಿ ನಿರೀಕ್ಷಿತ್ ಎಂಬಾತ ಅಂಬಲಪಾಡಿಯ ಬುಲೆಟ್ ಶೋರೂಮ್ ಎದುರುಗಡೆಯ ಸರ್ವಿಸ್ ರಸ್ತೆಯಲ್ಲಿ ತನ್ನ ದ್ವಿಚಕ್ರ ವಾಹನದ ಮುಂದಿನ ಚಕ್ರವನ್ನು ಮೇಲೆಕ್ಕೆತ್ತಿ ವೀಲಿಂಗ್ ಮಾಡಿ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿ ಆಗುವ ರೀತಿಯಲ್ಲಿ ಚಾಲನೆಯನ್ನು ಮಾಡಿದ್ದು, ಆರೋಪಿ ನಿರೀಕ್ಷಿತ್ ವಿರುದ್ಧ ಉಡುಪಿ ನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.