ಉಡುಪಿ : ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ಯಕ್ಷರಂಗ ಕಲಾ ಸಂಸ್ಥೆ ವತಿಯಿಂದ ಮಿತ್ರ ಯಕ್ಷಗಾನ ಮಂಡಳಿ ಸರಳೇಬೆಟ್ಟು, ಮಿತ್ರ ಕಲಾನಿಕೇತನ ಟ್ರಸ್ಟ್, ಸರಳೇಬೆಟ್ಟು, ಯಕ್ಷಮಿತ್ರ ಯಕ್ಷಗಾನ ತರಬೇತಿ ಕೇಂದ್ರ ಸರಳೇಬೆಟ್ಟು, ರಸಿಕರತ್ನ ವಿಟ್ಲ ಜೋಶಿ ಪ್ರತಿಷ್ಠಾನ ಪರ್ಕಳ, ತಲ್ಲೂರು ಫ್ಯಾಮಿಲಿ ಟ್ರಸ್ಟ್ ಉಡುಪಿ ಇವುಗಳ ಸಹಯೋಗದೊಂದಿಗೆ ಕಲಾ ಸಾಧಕ ಪ್ರಶಸ್ತಿ ಪ್ರದಾನ ಹಾಗೂ 41ನೇ ವಾರ್ಷಿಕೋತ್ಸವ ಸಂಭ್ರಮವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾಗಿತ್ತು
ಯಕ್ಷಗಾನ ವಿಮರ್ಶಕ ಕೇಶವ ಪ್ರಭು ಗಾವಳಿ ಕಲಾಸಾಧಕ ಪುರಸ್ಕಾರ, ಮಹಿಳಾ ಭಾಗವತೆ ರಕ್ತಾ ಹೆಗಡೆ ಸಿದ್ದಾಪುರ ‘ಯಕ್ಷಶ್ರೀ’ ಯಕ್ಷಗಾನ ಕಲಾವಿದ ಯು.ಆನಂದ ‘ಯಕ್ಷಮಿತ್ರಶ್ರೀ, ನಿವೃತ್ತ ಮುಖ್ಯೋಪಾಧ್ಯಾಯ ಚೇರ್ಕಾಡಿ ಸದಾನಂದ ಪಾಟೀಲ್ ಸರ್ಪು ‘ಯಕ್ಷಕಲಾಶ್ರೀ, ಯಕ್ಷಗಾನ ಕಲಾವಿದ ಯಕ್ಷಾ ನಂದ ಕುತ್ಪಾಡಿ ‘ಮಿತ್ರಕಲಾಶ್ರೀ, ಮಾಯಾ ಕಾಮತ್ ‘ಮಿತ್ರಶ್ರೀ, ಯಕ್ಷಗಾನ ಕಲಾವಿದ ಸುಧಾಕರ ಶೆಟ್ಟಿ ‘ಕಲಾಶ್ರೀ, ಇಂದ್ರಾಳಿ ಪ್ರಭಾಕರ ಆಚಾರ್ಯ ‘ಮಿತ್ರಯಕ್ಷಶ್ರೀ’ ಪ್ರಸಂಗಕರ್ತೆ ಶಾಂತಾ ವಾಸುದೇವ ಪೂಜಾರಿ ‘ಶ್ರೀಮಿತ್ರ, ಸಂಗೀತ ನಿರ್ದೇಶಕಿ ಉಷಾ ಹೆಬ್ಬಾರ್ ‘ಶ್ರೀಮಿತ್ರವೈಭವ’ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪ್ರದಾನ ಮಾಡಿದ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜದಲ್ಲಿ ಗುಣ ಗಳನ್ನು ಗುರುತಿಸಿದರೆ ಸಾಮರಸ್ಯ ಸೌಹಾರ್ದತೆ ಬೆಳೆದರೆ, ದ್ವೇಷವನ್ನು ಗುರುತಿಸುವುದರಿಂದ ದ್ವೇಷ, ಅಶಾಂತಿ ಮೂಡುತ್ತದೆ. ಆದುದರಿಂದ ಸಮಾಜದಲ್ಲಿ ಗುಣಗಳನ್ನು ಗುರುತಿಸುವ ಕಾರ್ಯ ಹೆಚ್ಚು ಹೆಚ್ಚು ನಡೆಯಬೇಕು ಎಂದು ಅಭಿಪ್ರಾಯ ಪಟ್ಟರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ವಿ.ಉದಯ ಕುಮಾರ್ ಶೆಟ್ಟಿ, ವಿಟ್ಲ ಜೋಶಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಹರೀಶ್ ಜೋಶಿ, ಮೊದಲಾದವರು ಉಪಸ್ಥಿತರಿದ್ದರು.