ಕಾರ್ಕಳ : ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆಯ ತ್ವೈಬಾ ಗಾರ್ಡನ್ ಮುಖ್ಯಸ್ಥ ಸಅದಿ ಕಿಲ್ಲೂರು ಎಂಬಾತ ಬಾಲಕನ ಮೇಲೆ ಹಿಂಸೆ ನಡೆಸಿದ ಆರೋಪ ಕೇಳಿಬಂದಿದೆ.

ಬಾಲಕನ ಮೈ ಮೇಲೆ ಬರೆ ಬರುವ ರೀತಿಯಲ್ಲಿ ಏಟು ನೀಡಲಾಗಿದೆ ಎನ್ನಲಾಗಿದ್ದು, ಬಾಲಕನ ಸ್ಥಿತಿ ಗಂಭೀರವಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ಪೋಷಕರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡು ಅಳಲು ತೋಡಿಕೊಂಡಿದ್ದಾರೆ.
ಈ ಘಟನೆಯ ಬೆನ್ನಲ್ಲೇ ಧಾರ್ಮಿಕ ಶಿಕ್ಷಣ ಸಂಸ್ಥೆಯು ಸದ್ರಿ ಮುಖ್ಯಸ್ಥನನ್ನು ವಜಾ ಮಾಡಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಸಅದಿ ಕಿಲ್ಲೂರು ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.