ಮಂಗಳೂರು : ಪದವಿ ಪೂರ್ವ ಶಿಕ್ಷಣ ಮಂಡಳಿ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ 600ರಲ್ಲಿ 599 ಅಂಕ ಪಡೆದ ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಅಮೂಲ್ಯ ಕಾಮತ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅಮೂಲ್ಯ ಕಾಮತ್ ಅವರು ಐದು ವಿಷಯಗಳಲ್ಲಿ ತಲಾ 100 ಅಂಕ ಪಡೆದಿರುತ್ತಾರೆ. 600ರಲ್ಲಿ 597 ಅಂಕ ಪಡೆದ ಕಾಲೇಜಿನ ಶ್ರೇಯಸ್ ಎಸ್. ತೃತೀಯ ಸ್ಥಾನ, 596 ಅಂಕ ಪಡೆದ ಶಡ್ಜಯ್ ಎ.ಪಿ. ನಾಲ್ಕನೇ ಸ್ಥಾನ ಪಡೆದರೆ, 595 ಅಂಕ ಪಡೆದ ಧನ್ಯತಾ ಗೌಡ ಕೆ., ವಚನ ಅಲ್ಲಮಪ್ರಭು ಬಾಗೋಡಿ, ಚಿನ್ಮಯಿ ಆರ್., ಯು. ರೋಹನ್ ಎಚ್. ಶೆಣೈ ರಾಜ್ಯಕ್ಕೆ ಐದನೇ ಸ್ಥಾನ ಪಡೆದಿದ್ದಾರೆ. ಹೀಗೆ ಮೊದಲ ಹತ್ತು ಸ್ಥಾನವನ್ನು ಸಂಸ್ಥೆಯ 33 ವಿದ್ಯಾರ್ಥಿಗಳು ಪಡೆಯುವ ಮೂಲಕ ಐತಿಹಾಸಿಕ ದಾಖಲೆ ಮಾಡಿದ್ದಾರೆ.
ಒಟ್ಟು 1,634 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಶೇ. 99ಕ್ಕಿಂತ ಅಧಿಕ ಅಂಕಗಳನ್ನು 10 ವಿದ್ಯಾರ್ಥಿಗಳು ಪಡೆದ್ದಾರೆ. ಅದೇ ರೀತಿ ಶೇ. 98ಕ್ಕಿಂತ ಅಧಿಕ 55, ಶೇ. 97ಕ್ಕಿಂತ ಅಧಿಕ 138, ಶೇ. 96ಕ್ಕಿಂತ ಅಧಿಕ 264, ಶೇ. 95ಕ್ಕಿಂತ ಅಧಿಕ 379 ವಿದ್ಯಾರ್ಥಿಗಳು ಪಡೆದರೆ, ಶೇ.90ಕ್ಕಿಂತ ಅಧಿಕ 966, ಶೇ.85ಕ್ಕಿಂತ ಅಧಿಕ 1,265 ಹಾಗೂ ಶೇ.80ಕ್ಕಿಂತ ಅಧಿಕ 1,429 ವಿದ್ಯಾರ್ಥಿಗಳು ಪಡೆದಿದ್ದಾರೆ. ಪರೀಕ್ಷೆ ಬರೆದ 1,634 ವಿದ್ಯಾರ್ಥಿಗಳಲ್ಲಿ 1,627 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
7 ವಿದ್ಯಾರ್ಥಿಗಳು 4 ವಿಷಯಗಳಲ್ಲಿ, 37 ವಿದ್ಯಾರ್ಥಿಗಳು 3 ವಿಷಯಗಳಲ್ಲಿ, 158 ವಿದ್ಯಾರ್ಥಿಗಳು 2 ವಿಷಯಗಳಲ್ಲಿ ಹಾಗೂ 305 ವಿದ್ಯಾರ್ಥಿಗಳು ಒಂದು ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿರುತ್ತಾರೆ. ಇನ್ನು ಫಿಸಿಕ್ಸ್ನಲ್ಲಿ 42 ವಿದ್ಯಾರ್ಥಿಗಳು, ಕೆಮೆಸ್ಟಿçಯಲ್ಲಿ 62, ಬಯೋಲಾಜಿಯಲ್ಲಿ 212, ಮ್ಯಾಥಮೆಟಿಕ್ಸ್ನಲ್ಲಿ 192, ಕಂಪ್ಯೂಟರ್ ಸೈನ್ಸ್ನಲ್ಲಿ 5, ಇಲೆಕ್ಟಾçನಿಕ್ಸ್ನಲ್ಲಿ 4, ಸ್ಟಾö್ಯಟ್‌ನಲ್ಲಿ 6, ಹೋಮ್ ಸೈನ್ಸ್ನಲ್ಲಿ 2, ಸಂಸ್ಕೃತದಲ್ಲಿ 47 ಹಾಗೂ ಕನ್ನಡದಲ್ಲಿ 57 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.
ಮಲ್ಲಾಂಬಿಕಾ 594, ವಿಸ್ಮಯ ಹಿರೇಮಠ 594, ಪ್ರೇಕ್ಷಾ ಅವಭ್ರತ 594, ಲಿಖಿತಾ ಕೆ.ಎಸ್. 593, ಪ್ರಗತಿ ಎಂ.ಡಿ. 592, ಯಶಸ್ ಗೌಡ ಎಚ್.ಪಿ. 592, ಎನ್.ಬಿ. ಸಾನಿಕಾ 592, ಹನಿಷ್ಕಾ ಶೆಟ್ಟಿ 592, ಶಾರ್ವರಿ 592, ಶ್ರೇಯಾನ್ ಕೆ. 592, ಅವನೀಶ್ ಬಿ. 592, ಕಾರ್ತಿಕೇಯ ಆರ್. ಮಯ್ಯ 592, ನೂತನ್ ಲೋಕೇಶ್ 591, ಭುವನ 591, ಸಾನ್ವಿ ಎಸ್. ಗೌಡ 591, ಶ್ರೀ ಹರ್ಷ ಎಚ್. ವೈ. 591, ಭವಧರಣಿ ಜಿ. 591, ಹೀರ್ ರೆನೀಶ್ ದೇಡಾಕಿಯಾ 591, ಅಸ್ಮಿತಾ ಶೆಟ್ಟಿ 591, ಪ್ರಜ್ವಲ್ ಕುಮಾರ್ ವಿ. ಎಸ್. 590, ತನ್ವಿ ಹೇಮಂತ್ 590, ನಿಖಿಲ್ ಸೊನ್ನದ್ 590, ಎಂ. ಮಹಿತಾ 590, ವಿಕಾಸ್ ಎಸ್. ಪೊಲೀಸ್ ಪಾಟೀಲ್ 590, ಜಾನ್ಹವಿ ಶೆಣೈ 590, ನಿಧಿ ಕೆ.ಜಿ.590 ಅಂಕ ಪಡೆದಿದ್ದಾರೆ.
ಯು.ರೋಹನ್ ಎಚ್. ಶೆಣೈ, ಮಲ್ಲಾಂಬಿಕಾ, ಪ್ರಗತಿ ಎಂ.ಡಿ., ಹನಿಷ್ಕಾ ಶೆಟ್ಟಿ, ಕಾರ್ತಿಕೇಯ ಆರ್.ಮಯ್ಯ, ಹೀರ್ ರೆನೀಶ್ ದೇಡಾಕಿಯಾ ನಾಲ್ಕು ವಿಷಯದಲ್ಲಿ ತಲಾ 100 ಅಂಕ ಪಡೆದಿದ್ದಾರೆ.
ಅಮೂಲ್ಯ ಕಾಮತ್ ಅವರ ಸಾಧನೆಯು ಅಭೂತಪೂರ್ವವಾಗಿದೆ. ಆಕೆಯ ಸಾಧನೆಯು ನಮಗೆ ಹೆಮ್ಮೆಯ ವಿಚಾರವಾಗಿದೆ. ಇದು ಜಿಲ್ಲೆಗೆ ಹೆಮ್ಮೆಯ ವಿಚಾರವಾಗಿದೆ. ಮೊದಲ 10 ಸ್ಥಾನದಲ್ಲಿ ಸಂಸ್ಥೆಯ 33 ವಿದ್ಯಾರ್ಥಿಗಳು ಇರುವುದು ಹೆಮ್ಮೆಯ ವಿಚಾರವಾಗಿದೆ. ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಪ್ರೊ.ನರೇಂದ್ರ ಎಲ್. ನಾಯಕ್ ಅವರು, ಆಡಳಿತ ವರ್ಗ, ಪ್ರಾಂಶುಪಾಲರು, ಎಲ್ಲಾ ಭೋಧಕ ಹಾಗೂ ಭೋಧಕೇತರ ಸಿಬ್ಬಂದಿಗಳ ಪರವಾಗಿ ಅಭಿನಂದಿಸಿರುತ್ತಾರೆ.
ಪ್ರತೀ ವರ್ಷ ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲದೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅದ್ವಿತೀಯ ಸಾಧನೆ ಮಾಡುತ್ತಿರುವ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆ ಈ ವರ್ಷವೂ ಅದೇ ಸಾಧನೆಯ ಹಾದಿಯಲ್ಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷೆ ಡಾ.ಉಷಾಪ್ರಭಾ ಎನ್.ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
































