ಕಟಪಾಡಿ : ಕಟಪಾಡಿ – ಶಿರ್ವ ರಾಜ್ಯ ಹೆದ್ದಾರಿಯ ಸುಭಾಷ್ ನಗರದಲ್ಲಿ ಕಾರು ಚಾಲಕ ಡ್ರಿಂಕ್ ಅಂಡ್ ಡ್ರೈವ್ ಮಾಡಿ ಅಪಘಾತಕ್ಕೆ ಕಾರಣವಾಗಿದ್ದು ಬೈಕ್ ಸವಾರರಿಗೆ ಗಂಭೀರ ಗಾಯಗಳಾಗಿವೆ.
ಬೈಕ್‌ನಲ್ಲಿ ತಂದೆ ಮತ್ತು ಮಗಳು ಶಂಕರಪುರ ಕಡೆ ಹೋಗುತ್ತಿದ್ದ ಸಂದರ್ಭ, ಕಾರು ಚಾಲಕ ಕಂಠಪೂರ್ತಿ ಕುಡಿದು ಅಜಾಗರೂಕತೆಯಿಂದ ಕಾರನ್ನು ಚಲಾಯಿಸಿ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಬೈಕ್ ಜಖಂಗೊಂಡು ರಸ್ತೆಗೆ ಬಿದ್ದಿದ್ದು ತಂದೆ ಮಗಳಿಗೆ ಗಂಭೀರ ಗಾಯಗಳಾಗಿದೆ. ಈ ವೇಳೆ ಪೊಲೀಸರು ಮತ್ತು ಸಾರ್ವಜನಿಕರು ಸ್ಥಳದಲ್ಲಿ ಜಮಾಯಿಸಿದರು.
ಕಂಠಪೂರ್ತಿ ಕುಡಿದಿದ್ದ ಕಾರು ಚಾಲಕ ತೂರಾಡುತ್ತಾ ಇದ್ದುದನ್ನು ಗಮನಿಸಿದ ಸಾರ್ವಜನಿಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ತಾನು ಅದಾನಿ ಗ್ರೂಪ್‌ನ ಚಾಲಕ, ಕಾರು ನನ್ನದಲ್ಲ ಎಂದು ಚಾಲಕ ಉತ್ತರಿಸಿದ್ದಾನೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗಂಭೀರ ಗಾಯಗೊಂಡ ದ್ವಿಚಕ್ರ ಸವಾರರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.