ಕುಂದಾಪುರ : ಯುವತಿಯೋರ್ವಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ತಾಲೂಕಿನ ಕಾಳಾವರ ಗ್ರಾಮದ ಸಳ್ವಾಡಿಯಲ್ಲಿ ಸಂಭವಿಸಿದೆ. ಕಾಳಾವರ ಗ್ರಾಮದ ಸಳ್ವಾಡಿಯ ಉದಯ ಅವರ ಪುತ್ರಿ ಮುಗ್ಧ (25) ಮೃತರು.
ಇವರು ಮಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಡಿಸೆಂಬರ್ 25ರಂದು ಮನೆಗೆ ಬಂದಿದ್ದರು. ರಾತ್ರಿ 10.30ರ ಸುಮಾರಿಗೆ ಮನೆಯ ಬಾವಿ ಬಳಿಗೆ ಹೋಗಿದ್ದಾಗ ಆಕಸ್ಮಿಕವಾಗಿ ಬಿದ್ದರು.
ಬೆಳಗ್ಗೆ ಮೃತದೇಹವನ್ನು ನೆರೆಯವರು, ಅಗ್ನಿಶಾಮಕ ದಳದವರ ಸಹಾಯದಿಂದ ಮೇಲಕ್ಕೆತ್ತಲಾಯಿತು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.