ಮನೆಯ ಮೇಲೆ ಆಲದ ಮರ ಬಿದ್ದು ಮನೆಯೊಳಗಿದ್ದ ದಂಪತಿಗೆ ಗಾಯ- ಮನೆಗೆ ಸಂಪೂರ್ಣ ಹಾನಿ

ಉಡುಪಿ : ಸೋಮವಾರ ಸಂಜೆ ಬೀಸಿದ ವೇಗದ ಗಾಳಿಗೆ ಬೃಹ‌ತ್ ಆಲದ ಮರವೊಂದು ಮನೆಯ ಮೇಲೆ ಉರುಳಿಬಿದ್ದ ಘಟನೆ ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಸಂಭವಿಸಿದೆ.

ಈ ಸಂದರ್ಭ ಮನೆಯೊಳಗೆ‌‌ ಸಿಲುಕಿ‌ಕೊಂಡಿದ್ದ ದಂಪತಿಯನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಣಸಿಗ ರಾಘವೇಂದ್ರ‌ ಭಟ್ (60) ಮತ್ತು ಅವರ ಪತ್ನಿ ನೀರಜಾ ಭಟ್ (49) ಗಾಯಗೊಂಡ ದಂಪತಿ. ಘಟನೆಯಲ್ಲಿ ಅವರ ಮನೆ ಸಂಪೂರ್ಣ ಜಖಂಗೊಂಡಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು, ಮರ ಕಡಿದು ರಸ್ತೆ ಸಂಚಾರವನ್ನು ಸಂಗಮಗೊಳಿಸಿದರು.

Related posts

ಮಲ್ಪೆಯಲ್ಲಿ ನವಜಾತ ಶಿಶು ಶವಪತ್ತೆ ಪ್ರಕರಣ; ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕುಮಾರ್ ಮಾಹಿತಿ

ಸಾಮಾಜಿಕ ಸಮಾನತೆ ಮತ್ತು ಸಹಬಾಳ್ವೆ ಅಂಬೇಡ್ಕರ್‌ರವರ ಆಶಯವಾಗಿತ್ತು : ಜಯನ್ ಮಲ್ಪೆ

ಇಂದ್ರಾಳಿಯ ರೈಲ್ವೆ ನಿಲ್ದಾಣದ ಮೇಲ್ಸೇತುವೆಗೆ, ಮೇಲ್ಛಾವಣಿ ಅಳವಡಿಸುವಂತೆ ಆಗ್ರಹ