ಉಡುಪಿ : ಸೋಮವಾರ ಸಂಜೆ ಬೀಸಿದ ವೇಗದ ಗಾಳಿಗೆ ಬೃಹತ್ ಆಲದ ಮರವೊಂದು ಮನೆಯ ಮೇಲೆ ಉರುಳಿಬಿದ್ದ ಘಟನೆ ಕಡಿಯಾಳಿ ಕಟ್ಟೆ ಆಚಾರ್ಯ ಮಾರ್ಗದಲ್ಲಿ ಸಂಭವಿಸಿದೆ.
ಈ ಸಂದರ್ಭ ಮನೆಯೊಳಗೆ ಸಿಲುಕಿಕೊಂಡಿದ್ದ ದಂಪತಿಯನ್ನು ಸ್ಥಳೀಯರು ಹೊರ ತೆಗೆದಿದ್ದಾರೆ. ಘಟನೆಯಲ್ಲಿ ಇಬ್ಬರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಣಸಿಗ ರಾಘವೇಂದ್ರ ಭಟ್ (60) ಮತ್ತು ಅವರ ಪತ್ನಿ ನೀರಜಾ ಭಟ್ (49) ಗಾಯಗೊಂಡ ದಂಪತಿ. ಘಟನೆಯಲ್ಲಿ ಅವರ ಮನೆ ಸಂಪೂರ್ಣ ಜಖಂಗೊಂಡಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದವರು, ಮರ ಕಡಿದು ರಸ್ತೆ ಸಂಚಾರವನ್ನು ಸಂಗಮಗೊಳಿಸಿದರು.