ಉಡುಪಿ : ಉಡುಪಿಯ ಕಕ್ಕುಂಜೆಯಲ್ಲಿರುವ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ನೇಮೋತ್ಸವವು ಫೆಬ್ರುವರಿ 11ರಂದು ಪ್ರಾರಂಭಗೊಂಡು ಮೂರು ನಾಲ್ಕು ದಿನ ನಿರಂತರವಾಗಿ ನೇಮವೂ ಜರಗಿದ ನಂತರ ಗರಡಿಯ ಶೃಂಗಾರಕ್ಕೆ ಎಂದು ಬಳಸಿಕೊಂಡ ಬಾಳೆಯ ಗಿಡ ಎರಡನ್ನು ಬಳಸಿದ್ದು ನೇಮೋತ್ಸವ ಕಾರ್ಯಕ್ರಮ ಮುಗಿದ ನಂತರ ತಳಿಲು ತೋರಣದ ಜೊತೆಗೆ ಈ ಬಾಳೆ ಗಿಡವನ್ನು ಕೂಡ ತಲೆಬಾಗ ಮತ್ತು ಬೇರಿರುವ ಭಾಗವನ್ನು ಕೂಡ ಕತ್ತರಿಸಿ ಹೊರಗಡೆ ಬದಿಯಲ್ಲಿರುವ ಕಸದಗುಂಡಿ ಬಳಿ ಬಿಸಾಡಲಾಗಿತ್ತು.
ಅಂದಾಜು 44 ದಿವಸಗಳು ಕಳೆದರು ಮೂರ್ನಾಲ್ಕು ದಿನದಿಂದ ಬಿಸಾಡಿದ ಬಾಳೆದಿಂಡಿನಿಂದ ಮೇಲ್ಮುಖವಾಗಿ ಗೊನೆಯೊಂದು ಚಿಗುರಿದ್ದು ಕಂಡು ಬಂದಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಹರಿದಾಡುತ್ತಿದ್ದು ಸ್ಥಳಕ್ಕೆ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು ಹಾಗೂ ಜಯ ಶೆಟ್ಟಿ ಬನ್ನಂಜೆ ಭೇಟಿ ನೀಡಿ ಪರಿಶೀಲಿಸಿದರು.
ಈ ಹಿಂದೆ ಇದೇ ಕಕ್ಕುಂಜೆಯ ಗರಡಿಯಲ್ಲಿ ರುದ್ರಾಕ್ಷಿ ಮರ ವಿರುವ ಬಗ್ಗೆ ಮಾಹಿತಿ ಪಡೆದಾಗ ಅಲ್ಲಿಗೆ ಭೇಟಿ ನೀಡಿರುವುದನ್ನು ಅವರು ನೆನಪಿಸಿಕೊಂಡಿದ್ದಾರೆ.
ಗರಡಿಯ ಗರಡಿಯ ಅಧ್ಯಕ್ಷರಾದ, ಶಿಕ್ಷಕ ಭಾಸ್ಕರ್ ಸುವರ್ಣ ಮಾತನಾಡುತ್ತಾ ಗರ್ಭಾವಸ್ಥೆಯಲ್ಲಿ ಇರುವ ಬಾಳೆ ಗಿಡವನ್ನು ಶೃಂಗಾರಕ್ಕೆ ಬಳಸಿಕೊಂಡಿರಬಹುದು. ಆದರೆ ಸುಮಾರು ಅಂದಾಜು 44 ದಿವಸಗಳ ನಂತರ ಮೇಲ್ಮುಖ ಮತ್ತು ಬೇರಿನ ಎಲ್ಲಾ ಭಾಗ ಕಟ್ ಮಾಡುವುದರಿಂದ ಗೊನೆ ಹಾಕಿರುವುದು. ಸ್ವಲ್ಪ ಅಚ್ಚರಿ ಮೂಡಿಸಿದರು ಇದು ಸಹಜ ವಾಗಿರುತ್ತದೆ ಅಂದಿದ್ದಾರೆ. ಆದರೆ ಇಷ್ಟು ದಿನಗಳ ನಂತರ ತಿಪ್ಪೆಗೆ ಬಿಸಾಡಿದ ಬಾಳೆ ದಿಣ್ಣೆಯಲ್ಲಿ ಗೊನೆ ಹಾಕಿರುವುದು. ಸ್ವಲ್ಪ ಅಚ್ಚರಿಯ ಜೊತೆಗೆ ಸಹಜ ಪ್ರಕ್ರಿಯೆವಾಗಿ ಕಂಡರು ಸ್ಥಳದ ಮಹಿಮೆನು ಇರಬಹುದು ಎಂದು ತಿಳಿಸಿದ್ದಾರೆ.
ಸ್ಥಳೀಯರು ಮಾತನಾಡುತ್ತಾ. ಎರಡು ಬದಿ ಕಟ್ ಮಾಡಿದರೂ ಬಾಳೆ ಎಲೆ ಚಿಗುರದೆ ನೇರವಾಗಿ ಗೊನೆ ಕಂಡು ಬಂದಿರುವುದು ಅಚ್ಚರಿ ಮೂಡಿದೆ ಎಂದರು.
ಈ ಬಗ್ಗೆ ಪ್ರೊಫೆಸರ್ ಎಸ್.ಏ. ಕೃಷ್ಣಯ್ಯ ಅವರ ಬಳಿ ಮಾಹಿತಿ ಕೇಳಿದಾಗ ಗರ್ಭಾವಸ್ಥೆಯಲ್ಲಿ ಈ ರೀತಿ ಬಾಳೆ ಗಿಡವನ್ನು ತೆಗೆದಾಗ ಅಲ್ಲಲ್ಲಿ ಕೆಲವೊಮ್ಮೆ ಈ ರೀತಿಯ ಪ್ರಕೃತಿಯಲ್ಲಿ ಪ್ರಕ್ರಿಯೆಗಳು ನಡೆಯುತ್ತವೆ. ಕೆಲವೊಂದು ಗೊತ್ತಾಗುತ್ತದೆ. ಕೆಲವೊಮ್ಮೆ ಗಮನಿಸುವುದಿಲ್ಲ. ಆದರೆ ಇಷ್ಟೊಂದು ದಿನಗಳ ನಂತರ ಕಂಡುಬಂದಿರೋದು ವಿಶೇಷತೆಯಾಗಿದೆ ಎಂದರು.
ಒಟ್ಟಿನಲ್ಲಿ ಬಿಸಾಡಿದ ದಂಡಿನಲ್ಲಿಯೂ ಬಾಳೆ ಗೊನೆ ಕಂಡು ಬಂದಿರುವುದು ಬಾಳೆ ಹಣ್ಣಿನ ದರವು ಕೆಜಿಗೆ 80 ರೂ ಗಡಿದಾಟಿದರು ಇಲ್ಲಿ ತಿಪ್ಪೆಗೆ ಬಿಸಾಡಿದ ಬಾಳೆ ದಿಂಡಿನಲ್ಲಿ ಬಾಳೆಗೊನೆ ಬೆಳೆದಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.