ಉಡುಪಿ : ಕಾಶ್ಮೀರದ ಶ್ರೀನಗರದಲ್ಲಿ ಇತ್ತೀಚೆಗೆ ನಡೆದ ಅಂತರ ವಿಶ್ವವಿದ್ಯಾಲಯಗಳ ಅಖಿಲ ಭಾರತ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ 2024-25ರಲ್ಲಿ ಉಡುಪಿ ಜಿಲ್ಲೆಗೆ ಕೀರ್ತಿ ತರುವಂತಹ ಸಾಧನೆ ಮೂಡಿಬಂದಿದೆ. ಉಡುಪಿ ತಾಲೂಕಿನ ಗುಂಡ್ಮಿ (ಮಾಣಿಕಟ್ಟು) ಗ್ರಾಮದ ಮಿಲಾಗ್ರಿಸ್ ಕಾಲೇಜಿನ ವಿದ್ಯಾರ್ಥಿ ಸುಮಂತ್ ಪೂಜಾರಿ ಅವರು ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕಂಚಿನ ಪದಕ ಗೆದ್ದಿದ್ದಾರೆ.
ತೃತೀಯ ಸ್ಥಾನ ಪಡೆದ ಸುಮಂತ್ ಅವರು ರಾಷ್ಟ್ರಮಟ್ಟದ ಈ ಪ್ರತಿಷ್ಠಿತ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಅವರ ಈ ಸಾಧನೆಯು ಕೇವಲ ಅವರ ಕಾಲೇಜಿಗೆ ಮಾತ್ರವಲ್ಲದೆ, ಇಡೀ ಉಡುಪಿ ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ.
ಸುಮಂತ್ ಪೂಜಾರಿ ಅವರ ಈ ಯಶಸ್ಸಿಗೆ ಅವರ ಕುಟುಂಬಸ್ಥರು, ಕಾಲೇಜಿನ ಆಡಳಿತ ಮಂಡಳಿ ಮತ್ತು ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.