ಉಡುಪಿ : ದೇಶಾದ್ಯಂತ ಇಂದು ಹೋಳಿ ಹಬ್ಬದ ಆಚರಣೆ ನಡೆದಿದೆ. ಉಡುಪಿ ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಹಾಗೂ ಮಣಿಪಾಲ ವಿವಿಯ ವಿದ್ಯಾರ್ಥಿಗಳು ಎಂಐಟಿ ಕಾಲೇಜಿನ ಮೈದಾನದಲ್ಲಿ ಹೋಳಿ ಹಬ್ಬ ಆಚರಿಸಿದರು.

ಇಂದು ಕಾಲೇಜಿಗೆ ರಜೆ ನೀಡಲಾಗಿದ್ದು, ಸಾವಿರಾರು ಮಂದಿ ಹೋಳಿ ಸೆಲೆಬ್ರೇಷನ್‍ನಲ್ಲಿ ಪಾಲ್ಗೊಂಡರು. ಪರಸ್ಪರ ಒಬ್ಬರಿಗೊಬ್ಬರು ಬಣ್ಣ ಎರಚುತ್ತಾ ಯುವಕ ಯುವತಿಯರು ಸಂಭ್ರಮಿಸಿದರು. ಡಿಜೆ ಹಾಡಿಗೆ ವಿದ್ಯಾರ್ಥಿಗಳು ಸಖತ್ ಸ್ಟೆಪ್ ಹಾಕಿದ್ರು. ಬಣ್ಣದ ನೀರನ್ನು ಮೈಗೆ ಸುರಿದುಕೊಂಡು ಕುಣಿದು ಸಂಭ್ರಮಿಸಿದರು.