Friday, December 20, 2024
Banner
Banner
Banner
Home » ಹಣ ಡಬಲ್ ಮಾಡುವುದಾಗಿ ನಂಬಿಸಿ ರೂ 3.7 ಲಕ್ಷ ರೂ‌ ವಂಚನೆ

ಹಣ ಡಬಲ್ ಮಾಡುವುದಾಗಿ ನಂಬಿಸಿ ರೂ 3.7 ಲಕ್ಷ ರೂ‌ ವಂಚನೆ

by NewsDesk

ಮಂಗಳೂರು : ಹಣವನ್ನು ಡಬಲ್ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ರೂ 3.7 ಲಕ್ಷ ರೂ ವಂಚಿಸಲಾಗಿದ್ದು, ಈ ಬಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿ. 13 ರಂದು ಅಪರಿಚಿತ ವ್ಯಕ್ತಿಯು ವಾಟ್ಸಪ್ ಮೆಸೇಜ್ ಮಾಡಿ GLOBAL INVESTMENT ಬಗ್ಗೆ ತಿಳಿಸಿ GLOBAL INVESTMENT ನಲ್ಲಿ ರೂ 5000 ವನ್ನು ಹಣವನ್ನು ಹೂಡಿಕೆ ಮಾಡಿದರೆ 10,000/- ರೂ‌ಗಳನ್ನು ವಾಪಾಸು ಕೊಡುವುದಾಗಿ ನಂಬಿಸಿದ್ದರು. ಆರೋಪಿಯ ಮಾತನ್ನು ನಂಬಿದ ವ್ಯಕ್ತಿ 5,000/- ರೂ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಆ ವ್ಯಕ್ತಿಯ ಬ್ಯಾಂಕ್ ಖಾತೆಗೆ ಅದೇ ದಿನ ರೂ 10,000/- ಹಣವನ್ನು ಹಿಂದಿರುಗಿಸಿ ವರ್ಗಾಯಿಸಿರುತ್ತಾರೆ.

ಡಿ. 14 ರಂದು ಅಪರಿಚಿತ ವ್ಯಕ್ತಿಯು ರೂ 19,000/- ಹಣವನ್ನು INVESTMENT ಮಾಡುವಂತೆ ತಿಳಿಸಿದ್ದು, ಈ ವ್ಯಕ್ತಿ ರೂ 19,000/- ರೂ ಹಣವನ್ನು ಹೂಡಿಕೆ ಮಾಡಿದ್ದಾರೆ. ಆದರೆ ಆರೋಪಿಯು ಈ ವ್ಯಕ್ತಿಗೆ ನೀವು ಮಾಡಿದ ಹಣದ ವರ್ಗಾವಣೆ ತಪ್ಪಾಗಿದೆ ಎಂದು ನಂಬಿಸಿ ಅವರಿಂದ ಡಿ. 13 ರಿಂದ ಡಿ. 15 ರವರೆಗೆ ಒಟ್ಟು 3,70,000/- ರೂ ಹಣವನ್ನು ಆರೋಪಿಯು ತಿಳಿಸಿದಂತೆ ವರ್ಗಾವಣೆ ಮಾಡಿದ್ದಾರೆ. ಆದರೆ ಆರೋಪಿಯು ಮೊದಲೇ ನಂಬಿಸಿದಂತೆ ಹೂಡಿಕೆ ಮಾಡಿದ ಹಣವನ್ನು ಡಬಲ್ ಮಾಡಿಕೊಡದೇ, ಹೂಡಿಕೆ ಮಾಡಿದ ಹಣವನ್ನು ವಾಪಾಸು ಕೊಡದೇ ಮೋಸ ಹಾಗೂ ವಂಚನೆ ಮಾಡಿರುತ್ತಾರೆ ಎಂದು ಇದೀಗ ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb