Thursday, January 16, 2025
Banner
Banner
Banner
Home » ಇ‌ಎಸ್‌ಐ ಸೌಲಭ್ಯಕ್ಕೆ ವೇತನ ಮಿತಿ ಏರಿಕೆ ಮಾಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ

ಇ‌ಎಸ್‌ಐ ಸೌಲಭ್ಯಕ್ಕೆ ವೇತನ ಮಿತಿ ಏರಿಕೆ ಮಾಡುವಂತೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಶಾಸಕ ಯಶ್‌ಪಾಲ್ ಸುವರ್ಣ ಮನವಿ

by NewsDesk

ಉಡುಪಿ : ಕೇಂದ್ರ ಸರ್ಕಾರದ‌ ಸಾಮಾಜಿಕ ಬದ್ಧತೆಯ ಪ್ರಮುಖ ಯೋಜನೆಯಾದ ಖಾಸಗಿ ರಂಗದ ಕಾರ್ಮಿಕರಿಗೆ/ಉದ್ಯೋಗಿಗಳಿಗೆ ಇ‌ಎಸ್‌ಐ ಸೌಲಭ್ಯದ ವೇತನ ಮಿತಿಯನ್ನು 30,000ಕ್ಕೆ ಏರಿಕೆ ಮಾಡುವಂತೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ‌ರವರು ಕೇಂದ್ರ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆಯ ಸಚಿವರಾದ ಶೋಭಾ ಕರಂದ್ಲಾಜೆ‌ಯವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಮಾಡಿದರು.

ಈ ಹಿಂದೆ ಇದ್ದ 15 ಸಾವಿರ ವೇತನ ಮಿತಿಯನ್ನು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 22 ಡಿಸೆಂಬರ್ 2016 ರಂದು 21 ಸಾವಿರಕ್ಕೆ ಏರಿಕೆ ಮಾಡಿ ದೇಶದ ಕೋಟ್ಯಾಂತರ ಕಾರ್ಮಿಕರು/ಉದ್ಯೋಗಿಗಳು ಹಾಗೂ ಅವರ ಕುಟುಂಬಕ್ಕೆ ಯೋಜನೆಯ ಮೂಲಕ ಉಚಿತ ವೈದ್ಯಕೀಯ ಸೌಲಭ್ಯ ಒದಗಿಸಿತ್ತು.

ಕಳೆದ 8 ವರ್ಷಗಳಿಂದ ಇ‌ಎಸ್‌ಐ ಸೌಲಭ್ಯಕ್ಕೆ ಅರ್ಹ ವೇತನ ಮಿತಿ ಏರಿಕೆಯಾಗದ ಕಾರಣ 21 ಸಾವಿರ ಮೇಲ್ಪಟ್ಟ ವೇತನ ಶ್ರೇಣಿಯ ಕಾರ್ಮಿಕರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ.

ವರ್ಷದಿಂದ ವರ್ಷಕ್ಕೆ ಖಾಸಗಿ ಕ್ಷೇತ್ರದಲ್ಲಿ ನೀಡಲಾಗುವ ವಾರ್ಷಿಕ ಭಡ್ತಿ, ಬೆಲೆ ಏರಿಕೆ ಅನುಗುಣವಾಗಿ ವೇತನ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರ ಪ್ರಸ್ತುತ ಇರುವ 21 ಸಾವಿರ ವೇತನ ಮಿತಿಯನ್ನು 30 ಸಾವಿರಕ್ಕೆ ಏರಿಕೆ ಮಾಡಿದರೆ ಕಾರ್ಮಿಕ ವರ್ಗಕ್ಕೆ ಅನುಕೂಲ ಕಲ್ಪಿಸಿದಂತಾಗುತ್ತದೆ ಎಂದು ಸಚಿವರಿಗೆ ಮನವಿ ಮಾಡಿದರು.

ಮನವಿಗೆ ಪೂರಕವಾಗಿ ಸ್ಪಂದಿಸಿದ ಸಚಿವೆ ಶೋಭಾ ಕರಂದ್ಲಾಜೆ ದೇಶದ ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆಯ ವೇತನ ಮಿತಿ ಏರಿಕೆಗೆ ಕ್ರಮವಹಿಸುವ ಭರವಸೆ ನೀಡಿದರು.

You may also like

Leave a Comment

Maax-Media-Logo

Maax News covers major news and events of Udupi district. This channel provides detailed reports on the political, social, economic, and cultural life of Udupi district.

Maax News, equipped with the most sophisticated studio in Udupi, assures people comprehensive news coverage.

Copyrights © maaxmedia.in All Rights Reserved. Designed by Sabweb