ಪುತ್ತೂರು : ತಮಿಳುನಾಡಿನ ಯುವತಿ ಕಾವ್ಯ, ತನ್ನವರ ಆಸರೆಯಿಲ್ಲದೇ ಬಡತನದಲ್ಲಿ ಜೀವನ ನಡೆಸುತ್ತಿದ್ದಳು. ಸುಳ್ಯದಲ್ಲಿ ಅನ್ಯಮತೀಯರ ಮನೆಯಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಳು ಎಂಬ ಮಾಹಿತಿ ವಿಶ್ವ ಹಿಂದೂ ಪರಿಷತ್ ಮುಖಂಡರಿಗೆ ದೊರೆತಿತ್ತು. ಇದರ ಪ್ರಕಾರ ಸುಳ್ಯದಲ್ಲಿ ಹಲವು ವರ್ಷಗಳಿಂದ ಇರುವ ವಿಹಿಂಪ ಕಾರ್ಯಕರ್ತ ವಿಕ್ರಂ ಆಕೆಗೆ ಸಹಾಯ ಮಾಡಲು ಮುಂದಾದರು.
ವಿಕ್ರಂ ಆಕೆಯನ್ನು ವಿವಾಹವಾಗಿ ಬಾಳು ನೀಡಲು ಮುಂದಾದರು. ಮನೆಯವರು ಹಾಗೂ ಹಿರಿಯರು ಈ ವಿವಾಹಕ್ಕೆ ಒಪ್ಪಿಗೆ ನೀಡಿದರು. ಕುಂಜೂರು ಪಂಜ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ವಿಹಿಂಪ ಮತ್ತು ಬಜರಂಗದಳ ಪುತ್ತೂರು ಜಿಲ್ಲೆಯ ನೇತೃತ್ವದಲ್ಲಿ ವಿವಾಹ ನೆರವೇರಿತು.
ವಿಹಿಂಪ ಮುಖಂಡರಾದ ಶ್ರೀಧರ್ ತೆಂಕಿಲ, ಜಯಂತ ಕುಂಜೂರು ಪಂಜ, ಲತೇಶ್ ಗುಂಡ್ಯ, ನವೀನ್ ಎಲಿಮಲೆ, ಸನತ್ ಮತ್ತು ಸಂಧ್ಯಾ ವಿವಾಹದಲ್ಲಿ ಭಾಗವಹಿಸಿ, ನವದಂಪತಿಗಳಿಗೆ ಶುಭ ಹಾರೈಸಿದರು.