ಉಡುಪಿ : ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಮೂರು ದಿನಗಳ ಕಾಲ ಭಾರತೀಯ ಜ್ಞಾನಪರಂಪರೆ ಕುರಿತು ಚಿಂತನ ಮಂಥನ ನಡೆಯಲಿದೆ. ಅಖಿಲ ಭಾರತ ಪ್ರಾಚ್ಯ ವಿದ್ಯಾ ಸಮ್ಮೇಳನದಲ್ಲಿ ಸುಮಾರು 2000 ವಿದ್ವಾಂಸರು ಭಾಗಿಯಾಗಲಿದ್ದಾರೆ. ಜ್ಞಾನದ ಹಬ್ಬ ಎಂದು ಕರೆಯಲಾಗುವ ಈ ಸಮ್ಮೇಳನವನ್ನು ಯೋಗ ಗುರು ಬಾಬಾ ರಾಮದೇವ್ ಉದ್ಘಾಟಿಸಲಿದ್ದಾರೆ.
ವಿಶೇಷ ಶೋಭಾಯಾತ್ರೆಯೊಂದಿಗೆ ಸಮಾವೇಶ ಆರಂಭವಾಗಲಿದ್ದು ಪೇಜಾವರ ಭಂಡಾರ ಕೇರಿ ಸುಬ್ರಮಣ್ಯ ಮಠಾಧೀಶರು ಭಾಗವಹಿಸುತ್ತಾರೆ. ಪ್ರತಿದಿನ ಬೆಳಿಗ್ಗೆ 6:00 ಯಿಂದ 7:00 ವರೆಗೆ ಬಾಬಾ ರಾಮ್‌ದೇವ್ ಅವರಿಂದ ಯೋಗ ತರಗತಿಗಳು ನಡೆಯಲಿವೆ.
ಇತ್ತೀಚಿಗೆ ದಕ್ಷಿಣ ಭಾರತದಲ್ಲಿ ನಡೆಯುತ್ತಿರುವ ಮೊದಲ ಸಮ್ಮೇಳನ ಇದಾಗಿದ್ದು 35 ವರ್ಷಗಳ ಹಿಂದೆ ಮೈಸೂರಿನಲ್ಲಿ ಸಮ್ಮೇಳನ ನಡೆದಿತ್ತು. ಭಾರತೀಯ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಭಾಷೆಗಳ ಬೆಳವಣಿಗೆ ಮತ್ತು ಸಂರಕ್ಷಣೆ ಕುರಿತು ಈ ಸಮ್ಮೇಳನದಲ್ಲಿ ಚರ್ಚೆಯಾಗಲಿದೆ. ಇಪ್ಪತ್ತಕ್ಕೂ ಹೆಚ್ಚು ವಿಷಯಗಳ ಬಗ್ಗೆ ಚರ್ಚೆಯಾಗಲಿದ್ದು 16 ಸಂಸ್ಕೃತ ವಿವಿಯ ಕುಲಪತಿಗಳು ಹಾಗೂ 300ಕ್ಕೂ ಅಧಿಕ ಹಿರಿಯ ವಿದ್ವಾಂಸರು ಸಮ್ಮೇಳನದಲ್ಲಿ ಇರಲಿದ್ದಾರೆ ಸಮ್ಮೇಳನ ಆಯೋಜಿಸಿರುವ ಎ ಐ ಓ ಸಿ ಸಂಸ್ಥೆಗೆ ಇದು 104ನೇ ವರ್ಷ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ 51ನೇ ಸಮ್ಮೇಳನ ಆಯೋಜನೆಯಾಗಿದೆ.