ಕಾಪು ಬೀಚ್‌ನಲ್ಲಿ ನಾಪತ್ತೆಯಾದ ಯುವಕ; ಮುಂದುವರೆದ ಶೋಧ ಕಾರ್ಯ

ಕಾಪು : ಕಾಪು ಬೀಚ್‌ನಲ್ಲಿ ಯುವಕನೋರ್ವ ದ್ವಿಚಕ್ರ ವಾಹನ, ಮೊಬೈಲ್‌ ಜೊತೆಗೆ ಬೆಲೆಬಾಳುವ ವಸ್ತುಗಳನ್ನು ಬಿಟ್ಟು ನಾಪತ್ತೆಯಾಗಿದ್ದು, ನಿನ್ನೆಯಿಂದ ಅವನಿಗಾಗಿ ಬೀಚ್‌ನುದ್ದಕ್ಕೂ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.

ನಾಪತ್ತೆಯಾಗಿರುವ ಯುವಕನನ್ನು ಕಾಪು ಪಡುಗ್ರಾಮ ನಿವಾಸಿ ತುಳಸಿ ಸಾಲ್ಯಾನ್‌ ಎಂಬವರ ಪುತ್ರ 20ರ ಹರೆಯದ ಕರಣ್‌ ಸಾಲ್ಯಾನ್‌ ಎಂದು ಗುರುತಿಸಲಾಗಿದೆ.

ಗುರುವಾರ ರಾತ್ರಿಯಿಂದ ಕರಣ್ ನಾಪತ್ತೆಯಾಗಿದ್ದು, ಶುಕ್ರವಾರ ಬೆಳಗ್ಗೆ ಹುಡುಕಿದಾಗ ಕಾಪು ಬೀಚ್‌ನಲ್ಲಿ ಅವನ ಮೊಬೈಲ್‌ ಮತ್ತು ಮೊಬೈಲ್‌, ಪರ್ಸ್‌ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕರಣ್ ಸಾಲ್ಯಾನ್‌ರವರ ತಾಯಿ ತುಳಸಿ ಸಾಲ್ಯಾನ್‌ ನೀಡಿದ ದೂರಿನ ಪ್ರಕಾರ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ನಡೆಸುತ್ತಿದ್ದಾರೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಶಾಸ್ತ್ರೀಪಾರ್ಕ್‌ ಫ್ಲೈಓವರ್‌ ತಳಭಾಗಕ್ಕೆ ಪೊಲೀಸ್‌ ನಿಯೋಜನೆ