ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಯುವ ಯಕ್ಷಗಾನ ಕಲಾವಿದ ಮೃತ್ಯು

ಕೋಟ : ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವಿದ್ಯುತ್ ತಂತಿ ಮೈ ಮೇಲೆ ಬಿದ್ದು ಯುವ ಯಕ್ಷಗಾನ ಕಲಾವಿದ ಮೃತಪಟ್ಟ ಘಟನೆ ಆಗುಂಬೆ ಸಮೀಪದ ಕೊಪ್ಪ ಬಳಿ ಸಂಭವಿಸಿದ್ದು, ಹಿಂಬದಿ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತ ವ್ಯಕ್ತಿಯನ್ನು ಯಕ್ಷಗಾನ ಕಲಾವಿದ ರಂಜಿತ್ ಬನ್ನಾಡಿ ಎಂದು ಗುರುತಿಸಲಾಗಿದೆ.

ಕೊಪ್ಪ ಸಮೀಪದಲ್ಲಿದ್ದ ಸೂರಾಲು ಮೇಳದ ಯಕ್ಷಗಾನ ಪ್ರದರ್ಶನ ಮಳೆಯಿಂದ ರದ್ದಾಗಿದ್ದು, ಸ್ಕೂಟರ್‌ನಲ್ಲಿ ವಾಪಾಸಾಗುತ್ತಿದ್ದ ವೇಳೆ ಆಗುಂಬೆ ಕೊಪ್ಪ ಸಮೀಪ ವಿದ್ಯುತ್ ತಂತಿ ಮೈಮೇಲೆ ಬಿದ್ದಿದೆ. ದ್ವಿಚಕ್ರ ವಾಹನ ಬಿಡುತ್ತಿದ್ದ ರಂಜಿತ್ ಗಂಭೀರವಾಗಿ ಗಾಯಗೊಂಡಿದ್ದು ಕೂಡಲೇ ಸ್ಥಳೀಯರ ಸಹಕಾರದಿಂದ ಮಣಿಪಾಲ ಖಾಸಗಿ ಆಸ್ಪತ್ರೆಗೆ ಕೊಂಡೊಯ್ದಿದ್ದು, ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸಹ ಸವಾರ ವಿನೋದ್ ರಾಜ್ ಘಟನೆಯಲ್ಲಿ ಪಾರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಮಲ್ಪೆ ಆದಿ ಉಡುಪಿ ಹೆದ್ದಾರಿ ಕಾಮಗಾರಿ ಅಧಿಕಾರಿಗಳೊಂದಿಗೆ ಶಾಸಕ ಯಶ್‌ಪಾಲ್ ಸುವರ್ಣ ಸಭೆ

ಕೇರಳದಿಂದ ಕೊಲ್ಲೂರಿಗೆ ಹೊರಟಿದ್ದ ಟಿಟಿ ವಾಹನ ಪಲ್ಟಿ – ಹಲವರಿಗೆ ಗಾಯ

ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಜಿಲ್ಲಾ ಮಟ್ಟದ ಜಾನಪದ ನೃತ್ಯ ಸ್ಪರ್ಧೆ, ಉದ್ಯಮ ಮತ್ತು ಆಹಾರ ಮೇಳ