ಬಸ್‌ನಲ್ಲಿ ಅಸ್ವಸ್ಥ ಗೊಂಡ ಯುವತಿ : ಮತ್ತೊಮ್ಮೆ ಬಸ್ ಚಾಲಕರಿಂದ ಮಾನವೀಯ ಕಾರ್ಯ

ಉಡುಪಿ : ಕರಾವಳಿಯ ಖಾಸಗಿ ಬಸ್‌ನ ಚಾಲಕ ಹಾಗೂ ನಿರ್ವಾಹಕರು ಮತ್ತೊಮ್ಮೆ ಮಾನವೀಯತೆ ಮೆರೆದ ಘಟನೆ ಉಡುಪಿಯಲ್ಲಿ ನಡೆದಿದ್ದು, ‘ನವೀನ್’ ಬಸ್ ಸಿಬಂದಿಗಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಅಸ್ವಸ್ಥ‌ಗೊಂಡ ಯುವತಿಗಾಗಿ ಬಸ್‌ಅನ್ನೇ ಆಸ್ಪತ್ರೆಗೆ ಕೊಂಡೊಯ್ದ ಚಾಲಕ ಹಾಗೂ ನಿರ್ವಾಹಕ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.

ಆಗಸ್ಟ್ 5ರ ಸೋಮವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು ಶಿರ್ವ‌ದಿಂದ ಉಡುಪಿಗೆ ‘ನವೀನ್’ ಬಸ್ಸಿನಲ್ಲಿ ಉಡುಪಿಗೆ ಬರುತ್ತಿದ್ದ ಯುವತಿ ಉಡುಪಿಯ ಹಳೆ ತಾಲ್ಲೂಕು ಕಚೇರಿಗೆ ಬರುತ್ತಿದ್ದಂತೆ ಬಸ್ಸಿನಲ್ಲೇ ವಾಂತಿ ಮಾಡಿ ಅಸ್ವಸ್ಥಗೊಂಡಿದ್ದಾಳೆ. ಕೂಡಲೇ ಎಚ್ಚೆತ್ತ ನವೀನ್ ಬಸ್‌ನ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂ ಬಸ್ಸನ್ನು ತಕ್ಷಣವೇ ಟಿಎಂಎ ಪೈ ಆಸ್ಪತ್ರೆಗೆ ‌ಕೊಂಡೊಯ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಜೊತೆಗೆ ಬಾಲಕಿಯ ಮನೆಯವರಿಗೆ ಮಾಹಿತಿ, ಮನೆಯವರು ಬರುವ ತನಕ ಯುವತಿಗೆ ಚಿಕಿತ್ಸೆಗೆ ಬಸ್ ಸಿಬಂದಿ ಸಹಕಾರ ನೀಡಿದ್ದಾರೆ.

ಕೆಲವು ದಿನಗಳ ಹಿಂದೆ ಮಂಗಳೂರಿನಲ್ಲಿ ಇದೇ ರೀತಿಯ ಮಾನವೀಯ ಕಾರ್ಯ ನಡೆದಿದ್ದು ಇದೀಗ ಉಡುಪಿಯಲ್ಲೂ ಅಂತಹುದೇ ಮಾನವೀಯ ನಡೆದಿದ್ದು ನವೀನ್ ಬಸ್ ಸಿಬಂದಿಗಳ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಅಲೈನ್ಸ್ ಕ್ಲಬ್ ಉಡುಪಿಯಿಂದ ವೈದ್ಯರ ದಿನಾಚರಣೆ : ಪ್ರಸಿದ್ಧ ವೈದ್ಯ ಡಾ.ಆರ್.ಎನ್.ಭಟ್ ಅವರಿಗೆ ಸನ್ಮಾನ

ಶತಾವಧಾನಿ ಡಾ. ಆರ್. ಗಣೇಶ್ ಅವರಿಗೆ ತಲ್ಲೂರು ಕನಕ ಅಣ್ಣಯ್ಯ ಶೆಟ್ಟಿ ಪ್ರಶಸ್ತಿ ಪ್ರದಾನ

ರಂಗೋಲಿ ಕಲಾ ಸಾಧಕಿ, ಭಾರತಿ ಮರವಂತೆಗೆ ‘ಮಧುರಚೆನ್ನ ರಾಜ್ಯ ಪ್ರಶಸ್ತಿ’ ಪ್ರದಾನ