ಹೃದಯಾಘಾತದಿಂದ ಯುವತಿ ಮೃತ್ಯು

ಸುರತ್ಕಲ್ : ಹೃದಯಾಘಾತಕ್ಕೆ 23 ವರ್ಷದ ಯುವತಿಯೋರ್ವಳು ಬಲಿಯಾದ ಘಟನೆ ಸೆ.18 ಬುಧವಾರ ಸಂಜೆ ನಡೆದಿದೆ.

ಮೃತ ಯುವತಿಯನ್ನು ಸಸಿಹಿತ್ಲು ಅಗ್ಗಿದ ಕಳಿಯ ನಿವಾಸಿ ದಿ.ರಾಜೇಶ್ ಎಂಬವರ ಪುತ್ರಿ ರೋಶನಿ ಎಂದು ಗುರುತಿಸಲಾಗಿದೆ.

ಯುವತಿ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದು, ಇತ್ತೀಚೆಗೆ ಮನೆಗೆ ಬಂದಿದ್ದಳು ಎಂದು ಹೇಳಲಾಗಿದೆ. ಜ್ವರ ಉಲ್ಬಣಗೊಂಡಿದ್ದರಿಂದ ಮನೆಯವರು ಆಕೆಯನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಳು.

ಬುಧವಾರ ಸಂಜೆಯ ವೇಳೆ ಯುವತಿಗೆ ಹೃದಯಾಘಾತ ಸಂಭವಿಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Related posts

ನೆಕ್ಲಾಜೆ ಶ್ರೀ ಕಾಳಿಕಾಂಬೆಗೆ ಸ್ವರ್ಣ ಪಾದುಕೆ ಸಮರ್ಪಣೆ

ಮೂಡುಬಿದಿರೆಯಲ್ಲಿ ಲ್ಯಾಪ್‌ ಟಾಪ್‌ ಕಳ್ಳತನ: ಅಂತರ್ ಜಿಲ್ಲಾ ಕಳ್ಳ ಅರೆಸ್ಟ್

ಕನ್ನಡ ಚಿತ್ರನಟರಿಂದ ಶ್ರೀಕೃಷ್ಣ ದರ್ಶನ – ಕೋಟಿಗೀತಾಲೇಖನ ಯಜ್ಞ ದೀಕ್ಷೆ