ಷೇರು ವಹಿವಾಟಿನ ಬಗ್ಗೆ ಸಲಹೆ ನೀಡುವುದಾಗಿ ಯುವಕನಿಗೆ ವಂಚನೆ

ಕುಂದಾಪುರ : ಷೇರು ಮಾರುಕಟ್ಟೆಯಲ್ಲಿ ಷೇರು ಕುರಿತು ಸಲಹೆ ನೀಡುವುದಾಗಿ ಹೇಳಿ Skironn Technologies ಕಂಪನಿಯು 74,000 ರೂಪಾಯಿ ಹಣವನ್ನು ವಂಚಿಸಿರುವುದಾಗಿ ಆರೋಪಿಸಿ ವಿಘ್ನೇಶ್‌ ಎಂಬವರು ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಷೇರು ವಹಿವಾಟು ಕುರಿತು ಮಾಹಿತಿ ನೀಡುವುದಾಗಿ ಇನ್ಸ್ಟಾಗ್ರಾಮ್‌‌ನಲ್ಲಿ ತಿಳಿಸಿದಂತೆ ವಿಘ್ನೇಶ್‌ ಸ್ಕಿರೋನ್‌ ಟೆಕ್ನಾಲಜೀಸ್‌ ನೀಡಿದ ದೂರವಾಣಿ ನಂಬ್ರಕ್ಕೆ ಕರೆ ಮಾಡಿದಾಗ, 6 ತಿಂಗಳವರೆಗೆ ಷೇರು ಮಾರುಕಟ್ಟೆ ಕುರಿತು ಸಲಹೆ ನೀಡಲು 74,300 ರೂಪಾಯಿ ಮುಂಗಡ ಹಣ ಪಾವತಿಸಬೇಕೆಂದು ತಿಳಿಸಲಾಗಿತ್ತು.

ಅದರಂತೆ ವಿಘ್ನೇಶ್‌ ಕಂಪನಿಯ ಕೋಟಕ್‌ ಮಹೇಂದ್ರ ಬ್ಯಾಂಕ್‌ ಖಾತೆಗೆ 38,900 ರೂಪಾಯಿ ಹಾಗೂ ಆಕ್ಸಿಸ್‌ ಬ್ಯಾಂಕ್‌ ಖಾತೆಗೆ 35,400 ರೂ. ಹಣವನ್ನು ಫೋನ್‌ ಪೇ ಮೂಲಕ ವರ್ಗಾವಣೆ ಮಾಡಿದ್ದರು.

ಆದರೆ ಹಣ ಪಡೆದ ನಂತರ ಸ್ಕಿರೋನ್‌ ಟೆಕ್ನಾಲಜೀಸ್‌ ಕಂಪನಿ ಷೇರು ಮಾರುಕಟ್ಟೆ ಬಗ್ಗೆ ಯಾವುದೇ ಸಲಹೆ ನೀಡದೆ, ನಂಬಿಸಿ 74,300 ರೂ. ಹಣವನ್ನು ವಂಚಿಸಿದ್ದು, ಬಳಿಕ ಸೈಬರ್‌ ಕ್ರೈಮ್‌‌ಗೆ ದೂರು ಸಲ್ಲಿಸಿದ್ದು, ಕಂಪನಿಯ ಬ್ಯಾಂಕ್‌ ಖಾತೆಯನ್ನು ಪ್ರೀಝ್‌ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಉಡುಪಿ ಜಿಲ್ಲೆಯಲ್ಲಿ ಉಪವಾಸ, ಧ್ಯಾನದೊಂದಿಗೆ ಗುಡ್ ಫ್ರೈಡೆ ಆಚರಣೆ

ಬಿಎಸ್‌ಎನ್‌ಎಲ್ ಸಂಪರ್ಕದ ಕುಂದು ಕೊರತೆ, ಗುಣಮಟ್ಟ ಉತ್ತಮಗೊಳಿಸುವಿಕೆ ಸಭೆಯಲ್ಲಿ ಸಂಸದ ಕೋಟ ಭಾಗಿ

ನೇತ್ರಾವತಿ ಹೋರಾಟಕ್ಕೆ ಸಜ್ಜು – ತೋನ್ಸೆ ಜಯಕೃಷ್ಣ ಶೆಟ್ಟಿ