ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಪುತ್ತಿಗೆ ಮಠ ಹಾಗೂ ಪತಂಜಲಿ ಯೋಗ ಪೀಠದಿಂದ ಯೋಗ ದಿನಾಚರಣೆ

ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ಪುತ್ತಿಗೆ ಮಠ, ಉಡುಪಿ ಹಾಗೂ ಪತಂಜಲಿ ಯೋಗ ಪೀಠ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ 10ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ನಡೆಯಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಯೋಗ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಯೋಗದ ಮಹತ್ವದ ಬಗ್ಗೆ ಸಂದೇಶ ನೀಡಿದರು. ಪತಂಜಲಿ ಯೋಗ ಪೀಠ, ಉಡುಪಿ ಇದರ ಸದಸ್ಯರಿಂದ ಯೋಗಾಸನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪುತ್ತಿಗೆ ಶ್ರೀಗಳು, ಇವತ್ತು ಸಮಾಜದಲ್ಲಿ ಸಮತ್ವ ಸಮಾನತೆ ಇತ್ಯಾದಿಗಳ ವಿಚಾರದಲ್ಲಿ ಅನಗತ್ಯ ಗೊಂದಲಕ್ಕೊಳಗಾಗಿದ್ದೇವೆ. ಆದರೆ ಗೀತೆಯಲ್ಲಿ ಶ್ರೀ ಕೃಷ್ಣ ಹೇಳಿದ ಸಮತ್ವದ ಸೂತ್ರ ಅತ್ಯಂತ ಅರ್ಥಪೂರ್ಣ ಮತ್ತು ಪ್ರಾಯೋಗಿಕವಾಗಿದೆ.

ಸಮತ್ವ ಎಂದರೆ ಪ್ರಮಾಣತ್ವೇನ ಸಮತೆ ಎಂದರ್ಥವಲ್ಲ; ಸಾಮರ್ಥ್ಯತ್ವೇನ ಸಮತೆಯೇ ಆಗಿದೆ. ತಾಯಿಯಾದವಳು ತಾನು ಮಾಡಿದ ಅಡುಗೆಯನ್ನು ಮನೆಯಲ್ಲಿರುವ ಪುಟ್ಟ ಮಗು, ಬಾಲಕ, ಯುವಕ, ವೃದ್ಧರಿಗೆಲ್ಲ ಬಡಿಸುವಾಗ ಸಮಪ್ರಮಾಣದಲ್ಲಿ ಬಡಿಸಿದರೆ ಸಮರ್ಪಕವಾಗಲ್ಲ. ಕೆಲವರಿಗೆ ಅರ್ಧಹೊಟ್ಟೆ ಕೆಲವರಿಗೆ ಅಜೀರ್ಣವಾಗುಷ್ಟು ಬಡಿಸಿದಂತಾಗುತ್ತದೆ. ಅದೇ ಆಕೆ ಎಲ್ಲರಿಗೂ ಅವರವರ ಜೀರ್ಣ ಸಾಮರ್ಥ್ಯಕ್ಕನುಸಾರವಾಗಿ ಬಡಿಸಿದರೆ ಎಲ್ಲರ ಹೊಟ್ಟೆಯೂ ತುಂಬುತ್ತದೆ ಮತ್ತು ಇದೇ ನಿಜವಾದ ಸಮಾನತೆ ಅಥವಾ ಸಮತ್ವವಾಗಿದೆ. ಆದ್ದರಿಂದ ಯೋಗಾಚಾರ್ಯ ಕೃಷ್ಣನ ಯೋಗ ಸಂದೇಶಗಳು ಪ್ರತಿಯೊಬ್ಬ ವ್ಯಕ್ತಿಯ ಶಾರೀರಿಕ ಮತ್ತು ಮಾನಸಿಕ ಸಮಸ್ಯೆಗಳಿಗೆ ಮತ್ತು ಸಾಮಾಜಿಕ ಪ್ರತಿಕೂಲತೆಗಳಿಗೆ ಅತ್ಯಂತ ಸರಿಯಾದ ಔಷಧಿಯಾಗಿದೆ. ಇದನ್ನು ಅರ್ಥಮಾಡಿಕೊಳ್ಳಬಲ್ಲವರೇ ಪಂಡಿತರು. ಇದು ಶ್ರೀ ಕೃಷ್ಣನ ಯೋಗಸಂದೇಶ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸಂದೇಶ ನೀಡಿದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ