ದೂರದರ್ಶನ ಕೇಂದ್ರದ ‘ಬಿ’ ಗ್ರೇಡ್ ಕಲಾವಿದೆಯಾಗಿ ಯಶಸ್ವಿ ಆಯ್ಕೆ

ಉಡುಪಿ : ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿರುವ ಯಶಸ್ವಿ ಇವರು ಬೆಂಗಳೂರು ದೂರದರ್ಶನ ಕೇಂದ್ರದ ‘ಬಿ’ ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾಗಿರುತ್ತಾರೆ.

ಇವರು ಉಡುಪಿಯ ಪ್ರತಿಷ್ಠಿತ ನೃತ್ಯ ಸಂಸ್ಥೆ ಶ್ರೀ ಭ್ರಾಮರೀ ನಾಟ್ಯಾಲಯ (ರಿ.) ಅಮ್ಮುಂಜೆ ಇಲ್ಲಿನ ಗುರು ವಿದ್ವಾನ್ ಕೆ. ಭವಾನಿಶಂಕರ್ ಇವರ ಶಿಷ್ಯೆಯಾಗಿದ್ದು, ಪುತ್ತೂರು ಸುಬ್ರಹ್ಮಣ್ಯ ನಗರದ ವಿಜಯ್ ಸನಿಲ್ ಹಾಗೂ ಸುಮ ಸನಿಲ್ ಇವರ ಸುಪುತ್ರಿ.

ಪ್ರಸ್ತುತ ಇವರು ಡಾ ಜಿ ಶಂಕರ್ ಕಾಲೇಜು ಸ್ನಾತಕೋತ್ತರ ಹಾಗೂ ಸಂಶೋಧನ ಕೇಂದ್ರ, ಉಡುಪಿ ಇಲ್ಲಿ ಪ್ರಥಮ ವರ್ಷದ ಎಂಕಾಂ ವ್ಯಾಸಂಗ ಮಾಡುತ್ತಿದ್ದಾರೆ.

Related posts

ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ನೂತನ ಪದಾಧಿಕಾರಿಗಳ ಆಯ್ಕೆ

ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿದ ಸಂಸದ ಕೋಟ; ಎನ್ಐಎ ತನಿಖೆಗೆ ಒತ್ತಾಯ

ಆಟವಾಡುತ್ತಿದ್ದಾಗ ಹೃದಯಾಘಾತ; ಬಾಲಕ ಸಾವು