ಬೆಂಗಳೂರಿನಲ್ಲಿ ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ) ವತಿಯಿಂದ “ಯಕ್ಷ ಪಕ್ಷ””

ಬೆಂಗಳೂರು : ಫಾಟಕ್ ಯಕ್ಷ ಸಂಸ್ಕೃತಿ ಟ್ರಸ್ಟ್ (ರಿ) ಬೆಂಗಳೂರಿನ ಇಂಡಿಯನ್‌ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್, ಬಿ. ಪಿ. ವಾಡಿಯಾ ರಸ್ತೆ, ಬಸವನಗುಡಿಯಲ್ಲಿ ತಾಳಮದ್ದಲೆ ಕೂಟ ಆಯೋಜಿಸಿದೆ.

“ಯಕ್ಷ ಪಕ್ಷ” ಹೆಸರಿನಲ್ಲಿ ಸಂಸ್ಥೆಯು ವಿವಿಧ ಕಡೆಗಳಲ್ಲಿ 15 ತಾಳಮದ್ದಳೆ ಕೂಟವನ್ನು ನಡೆಸುತ್ತಿದ್ದು, ಇದರ 8ನೇ ಕೂಟವಾಗಿ ದಿನಾಂಕ 28 ಜೂನ್ 2024ರಂದು ಕವಿ ಮೂಲಿಕೆ ರಾಮಕೃಷ್ಣನವರ “ಸುಧನ್ವ ಮೋಕ್ಷ” ಜರುಗಲಿದೆ.

ಹಿಮ್ಮೇಳದಲ್ಲಿ ಶ್ರೀ ಅನಂತ ಹೆಗಡೆ, ದಂತಳಿಗೆ ಹಾಗೂ ಶ್ರೀ ಎ.ಪಿ ಫಾಟಕ್, ಕಾರ್ಕಳ ಮತ್ತು ಅರ್ಥಧಾರಿಗಳಾಗಿ ಶ್ರೀ ರಾಧಾಕೃಷ್ಣ ಕಲ್ಟಾರ್, ಶ್ರೀ ಹರೀಶ್ ಬೊಳಂತಿಮೊಗರು, ಶ್ರೀ ಅಜಿತ ಕಾರಂತ, ಶ್ರೀಮತಿ ಅಶ್ವಿನಿ ಆಚಾರ್ಯ ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕ ಸಂಖ್ಯೆಗಳು: 9448696624, 9940469916.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ