ನಾಗರ ಪಂಚಮಿಯಂದು ಜೀವಂತ ನಾಗನಿಗೆ ಪೂಜೆ

ಉಡುಪಿಯ ಕಾಪು ಮಜೂರಿನಲ್ಲಿರುವ ಗೋವರ್ಧನ್ ರಾವ್ ಅವರ ಮನೆಯಲ್ಲಿ ನಾಗರ ಪಂಚಮಿಯನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜೀವಂತ ನಾಗರ ಹಾವಿಗೆ ಪೂಜೆ ಸಲ್ಲಿಸಲಾಯಿತು, ಹಾವುಗಳಿಗೆ ಜಲಾಭೀಷೇಕ ಮತ್ತು ಸೀಯಾಳ ಅಭಿಷೇಕ ಮಾಡಿ ಪೂಜೆ ಸಲ್ಲಿಸಲಾಯಿತು.

ಗೋವರ್ಧನ್ ರಾವ್ ಹಾವುಗಳನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿರುವ ವ್ಯಕ್ತಿ. ಗಾಯಗೊಂಡ ಹಾವುಗಳನ್ನು ಚಿಕಿತ್ಸೆ ನೀಡಿ, ಅವುಗಳ ಆರೈಕೆಯಲ್ಲಿ ತೊಡಗಿರುವ ಅವರು, ಈಗಾಗಲೇ ಆರು ಹಾವುಗಳನ್ನು ಆರೈಕೆ ಮಾಡುತ್ತಿದ್ದಾರೆ.

ವಾಹನಗಳ ಅಡಿಗೆ ಸಿಲುಕಿದ, ನಾಯಿ ಕಡಿತಕ್ಕೆ ತುತ್ತಾದ, ಅಥವಾ ಇತರ ಪ್ರಾಣಿಗಳಿಂದ ಗಾಯಗೊಂಡ ಹಾವುಗಳಿಗೆ ಗೋವರ್ಧನ್ ರಾವ್ ಚಿಕಿತ್ಸೆ ನೀಡುತ್ತಿದ್ದು, ನಾಗರ ಪಂಚಮಿಯಂದು ಹಾವು ಇದ್ದರೆ ಅದಕ್ಕೆ ಪೂಜೆ ಸಲ್ಲಿಸುವ ಸಂಪ್ರದಾಯವನ್ನು ಅವರು ಮುಂದುವರಿಸಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ