ವಿಶ್ವ ಯೋಗ ದಿನಾಚರಣೆ – “ಯೋಗೀಶ್ವರನೆಡೆಗೆ ಯೋಗ ನಡಿಗೆ” ಎಂಬ ವಿಶಿಷ್ಟ ಕಾರ್ಯಕ್ರಮ

ಉಡುಪಿ : ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠ, ಶ್ರೀ ಕ್ಷೇತ್ರ ಧರ್ಮಸ್ಥಳದ ಸೌಖ್ಯವನ ವಿಶಿಷ್ಟವಾಗಿ ವಿಶ್ವ ಯೋಗ ದಿನವನ್ನು ಆಚರಿಸಿತು. ಉಡುಪಿ ಕ್ಲಾಕ್‌ಟವರ್ ನಿಂದ ಶ್ರೀ ಕೃಷ್ಣ ಮಠದವರೆಗೆ ನೂರಾರು ಜನ ಯೋಗ ನಡಿಗೆಯನ್ನು ಮಾಡಿದರು. ಯೋಗೀಶ್ವರನೆಡೆಗೆ ಯೋಗ ನಡಿಗೆ ಎಂಬ ಶೀರ್ಷಿಕೆ ಅಡಿ ಈ ಕಾರ್ಯಕ್ರಮ ನಡೆಯಿತು. ಯೋಗದ ಮಹತ್ವ ಸಾರಲು ಈ ಕಾರ್ಯಕ್ರಮ ನಡೆಸಲಾಯ್ತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿದರು. ಶ್ರೀಕೃಷ್ಣ‌ನಿಗೆ ಇರುವ ಇನ್ನೊಂದು ಹೆಸರು ಯೋಗೇಶ್ವರ. ಯಾರು ಯೋಗ ಅನುಸರಿಸ್ತಾರೆ ಅವರಿಗೆ ಆರೋಗ್ಯ ಎಲ್ಲಾ ರೀತಿಯ ಸಂಪತ್ತು ಒಲಿಯುತ್ತದೆ. ಭಗವದ್ಗೀತೆ ಯೋಗದ ಮೂಲ. ಆಸನ ಪ್ರಾಣಾಯಾಮಗಳು ಮಾತ್ರ ಯೋಗಗಳಲ್ಲ. ನಮ್ಮ ಜೀವನದ ಎಲ್ಲಾ ಕರ್ಮಗಳು ಪರಿಪೂರ್ಣತೆಯಾದರೆ ಅದೆಲ್ಲವೂ ಯೋಗವೇ ಎಂದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ನನ್ನ ದೇಶ ಶ್ರೇಷ್ಠ ಆಗಬೇಕು ಎಂಬುದು ಎಲ್ಲರ ಕನಸು. ಯೋಗದ ಮೂಲಕ ವಿಶ್ವದ ಗುರು ಎಂದು ಭಾರತ ಸಾಭೀತು ಮಾಡಿದೆ. ವಿಶ್ವದ 193 ದೇಶದಲ್ಲಿ ಯೋಗಕ್ಕೆ ಮನ್ನಣೆ ಸಿಕ್ಕಿದೆ. ಬದುಕಿನ ಪ್ರತಿದಿನ ಯೋಗಕ್ಕೆ ಅವಕಾಶ ಕೊಡಿ ಎಂದರು.

Related posts

ಕರ್ನಾಟಕ ಕ್ರೀಡಾಕೂಟದಲ್ಲಿ ಸಮರಾಗೆ ಚಿನ್ನದ ಪದಕ

ಪ್ರಥಮ ಬಾರಿಗೆ ಯಕ್ಷ ರಂಗದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ

ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ – ಬ್ರಿಟಿಷ್ ಆಡಳಿತವನ್ನೂ ಮೀರಿಸಿದ ಸಿದ್ಧರಾಮಯ್ಯ ಸರ್ಕಾರ : ಯಶ್‌ಪಾಲ್ ಸುವರ್ಣ