ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು…

ಉಡುಪಿ : ಕಟ್ಟಡವೊಂದರ ಮೇಲೆ ಸೋಲಾರ್ ಪ್ಯಾನೆಲ್ ಸ್ವಚ್ಛಗೊಳಿಸುವಾಗ ಕಾರ್ಮಿಕರೊಬ್ಬರು ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಾ.4ರಂದು ಬೆಳಗ್ಗೆ ನಿಟ್ಟೂರು ಎಂಬಲ್ಲಿ ನಡೆದಿದೆ.

ಮೃತರನ್ನು ಬಾಗಲಕೋಟೆ ಮೂಲದ ಹನುಮಂತ ಪುಂಡಲಿಕ ರುಗಿ ಎಂದು ಗುರುತಿಸಲಾಗಿದೆ. ಇವರು ಉಡುಪಿ ಬಾಳಿಗಾ ಫಿಶ್‌ನೆಟ್‌ನ ಪ್ರೊಸೆಸಿಂಗ್ ಯುನಿಟ್‌ನ ಮಾಡಿನ ಮೇಲೆ ಸೋಲಾರ್ ಪ್ಯಾನಲ್ ಸ್ವಚ್ಚಗೊಳಿಸುವಾಗ ಅಕಸ್ಮಿಕವಾಗಿ ಮಾಡಿನ ಮೇಲಿನಿಂದ ಕೆಳಗೆ ಬಿದ್ದರೆನ್ನಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗುವ ದಾರಿ ಮಧ್ಯೆ ಮೃತಪಟ್ಟರೆಂದು ತಿಳಿದುಬಂದಿದೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

60 ಲಕ್ಷ ವೆಚ್ಚದಲ್ಲಿ ಹೆರ್ಗ ಮಾರುತಿ ನಗರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಯಶ್‌ಪಾಲ್ ಸುವರ್ಣ ಚಾಲನೆ

ಎ.6 ಬಿಜೆಪಿ ಸ್ಥಾಪನಾ ದಿನಾಚರಣೆ, ಎ.10 ಉಡುಪಿಯಲ್ಲಿ ಜನಾಕ್ರೋಶ ಯಾತ್ರೆ

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರೊಂದಿಗೆ ರಂಗಾಸಕ್ತರ ಸಂವಾದ