ಕೃಷ್ಣಮಠದಲ್ಲಿ ಸುವರ್ಣಮಯ ಸರ್ವಜ್ಞ ಪೀಠಕ್ಕೆ ಚಾಲನೆ

ಉಡುಪಿ : ಪೊಡವಿಗೊಡೆಯ ಶ್ರೀಕೃಷ್ಣನನ್ನು ಪ್ರತಿಷ್ಠಾಪನೆಗೈದ ಮಧ್ವಾಚಾರ್ಯರ ಸನ್ನಿಧಾನವಿರುವ ಸರ್ವಜ್ಞ ಪೀಠಕ್ಕೆ ಸುವರ್ಣವನ್ನು ಹೊದೆಸಿ ಅರ್ಪಣೆ ಮಾಡುವ ಕಾರ್ಯಕ್ಕೆ ಪರ್ಯಾಯ ಶ್ರೀಪಾದರು ಕಿರಿಯ ಶ್ರೀಪಾದರೊಂದಿಗೆ ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಿದರು.

ಮಠದ ಶಿಷ್ಯರಾದ ದೇಶದ ಪ್ರತಿಷ್ಟೆಯ ಕಾಳಿದಾಸ ಸಮ್ಮಾನ್ ಪ್ರಶಸ್ತಿ ವಿಜೇತರಾದ ಖ್ಯಾತ ಕಲಾವಿದ ಗಂಜೀಫಾ ರಘುಪತಿ ಭಟ್ಟರು ತಮ್ಮ ತಂಡದವರೊಡನೆ ಕಾರ್ಯವನ್ನು ಮಾಡಿ ಮುಗಿಸಲಿದ್ದಾರೆ.

ಹಿರಿಯ ಶ್ರೀಪಾದರ ಆಶ್ರಮ ಸ್ವೀಕಾರ ನಡೆದು ಐವತ್ತು ವರ್ಷಕ್ಕೆ, ಸುವರ್ಣ ಮಹೋತ್ಸವ ಸಂಭ್ರಮಕ್ಕೆ ಅರ್ಪಣೆಗೊಳ್ಳುವ ಈ ಸುವರ್ಣ ಪೀಠ ಸಮರ್ಪಣೆ ಯೋಜನೆಗೆ ಭಕ್ತಾದಿಗಳು ಕೂಡ ಪಾಲ್ಗೊಳ್ಳಬಹುದೆಂದು ತನ್ಮೂಲಕ ಈ ಅಪೂರ್ವ ಅವಕಾಶದಲ್ಲಿ ಭಾಗಿಗಳಾಗಬಹುದೆಂದು ಪರ್ಯಾಯ ಮಠದ ದಿವಾನರು ತಿಳಿಸಿದ್ದಾರೆ.

Related posts

ಮಣ್ಣಪಳ್ಳ ಕೆರೆ ಸಮಗ್ರ ಅಭಿವೃದ್ಧಿ ಹಾಗೂ ನಿರ್ವಹಣೆ ನಗರಸಭೆಗೆ ಹಸ್ತಾಂತರಿಸಿ : ಶಾಸಕ ಯಶ್‌ಪಾಲ್ ಸುವರ್ಣ ಆಗ್ರಹ

ವೈದ್ಯಕೀಯ ಶಿಕ್ಷಣದಲ್ಲಿ ಆಧುನಿಕ VR-ಆಧಾರಿತ ಕೌಶಲ ತರಬೇತಿಗೆ ಮೆಡಿಸಿಮ್ ವಿಆರ್‌ನೊಂದಿಗೆ ಮಾಹೆ ಒಪ್ಪಂದ

ಇಡಿ, ಐಟಿ, ಸಿಬಿಐ ದುರುಪಯೋಗ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ