ಉಡುಪಿಯಲ್ಲಿ ವರ್ಡ್‌ಪ್ರೆಸ್ ಸಮುದಾಯ ಪ್ರಾರಂಭ

ಉಡುಪಿ : ಜಾಗತಿಕ ವರ್ಡ್‌ಪ್ರೆಸ್ ವ್ಯವಸ್ಥೆ ಬೆಳೆಯುತ್ತಿದ್ದು, ಉಡುಪಿಯು ಇದೀಗ ಈ ಕೂಟಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳುತ್ತಿದೆ. ಉಡುಪಿಯಲ್ಲಿ ವೆಬ್ ಡೆವಲಪರ್‌ಗಳು, ಡಿಸೈನರ್‌ಗಳು, ರಚನೆಕಾರರು ಮತ್ತು ವರ್ಡ್‌ಪ್ರೆಸ್ ಅಭಿಮಾನಿಗಳನ್ನು ಒಗ್ಗೂಡಿಸಿ ಕಲಿಕೆ, ಸಹಕಾರ ಮತ್ತು ನಾವೀನ್ಯತೆ ಬೆಳೆಸುವುದು ವರ್ಡ್‌ಪ್ರೆಸ್ ಸಮುದಾಯ ಉದ್ದೇಶವಾಗಿದೆ.

ಅಂತರ್ಜಾಲದಲ್ಲಿ ಕಾಣಸಿಗುವ ಶೇಕಡಾ 43‌ಕ್ಕಿಂತ ಹೆಚ್ಚು ವೆಬ್‌ಸೈಟ್‌ಗಳನ್ನು ವರ್ಡ್‌ಪ್ರೆಸ್ ತಂತ್ರಜ್ಞಾದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದು ವಿಶ್ವದಲ್ಲಿ ಅತ್ಯಂತ ಜನಪ್ರಿಯ ಕಾಂಟೆಂಟ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (CMS) ಆಗಿ ಬೆಳೆದಿದ್ದು, ಇದರ ಮುಕ್ತ ಮೂಲ ಸ್ವರೂಪ, ನೈಪುಣ್ಯ ಮತ್ತು ಬಳಕೆದಾರ ಸ್ನೇಹಿ ಸ್ವರೂಪವು ವರ್ಡ್‌ಪ್ರೆಸ್ ಅನ್ನು ಜನಸ್ನೇಹಿಯನ್ನಾಗಿಸಿದೆ.

“ವರ್ಡ್‌ಪ್ರೆಸ್ ಉಡುಪಿ ಸಮುದಾಯವು ಸ್ಥಳೀಯ ತಂತ್ರಜ್ಞಾನ ಪರಿಸರವನ್ನು ಬಲಪಡಿಸುವ ಮೊದಲ ಹೆಜ್ಜೆ” ಎಂದು ಉಡುಪಿ ವರ್ಡ್‌ಪ್ರೆಸ್ ಸಮುದಾಯದ ಸಹ-ಸಂಘಟಕ ಶಶಿಕಾಂತ್ ಶೆಟ್ಟಿ ಹೇಳಿದರು. “ವರ್ಡ್‌ಪ್ರೆಸ್ ಜಾಗತಿಕ ಮಾರುಕಟ್ಟೆಯನ್ನು ಆಳುತ್ತಿರುವಂತೆ, ಸ್ಥಳೀಯ ಸಮುದಾಯವನ್ನು ನಿರ್ಮಿಸುವುದು ಉಡುಪಿಯ ವೆಬ್ ಡೆವಲಪರ್‌ಗಳು ಮತ್ತು ರಚನೆಕಾರರಿಗೆ ವರ್ಡ್‌ಪ್ರೆಸ್ ಕೈಗೊಳ್ಳುವ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.”

“ಸ್ಥಳೀಯ ವರ್ಡ್‌ಪ್ರೆಸ್ ಸಮುದಾಯವು ಸ್ಥಳೀಯ ಪ್ರತಿಭೆಯನ್ನು ಶಕ್ತಗೊಳಿಸಲು ಮತ್ತು ವೆಬ್ ಡೆವಲಪರ್‌ಗಳು, ಡಿಸೈನರ್‌ಗಳು ಮತ್ತು ಉದ್ಯಮಿಗಳು ಪರಸ್ಪರ ಕಲಿಯಲು ಮತ್ತು ಬೆಳೆಯಲು ವೇದಿಕೆಯನ್ನು ರಚಿಸವ ಅಗತ್ಯವಿದೆ,” ಎಂದು ಉಡುಪಿ ವರ್ಡ್‌ಪ್ರೆಸ್ ಸಮುದಾಯದ ಸಹ-ಸಂಘಟಕ ವಿ. ಗೌತಮ್ ನಾವಡ ಅವರು ಹೇಳಿದರು. “ಇದು ಕೇವಲ ತಾಂತ್ರಿಕ ಕೌಶಲ್ಯಗಳನ್ನು ಉತ್ತಮಗೊಳಿಸುವ ಬಗ್ಗೆ ಮಾತ್ರವಲ್ಲ – ಇದು ಪರಸ್ಪರ ಸಹಕಾರ, ಹಂಚಿಕೆಯ ಮತ್ತು ಯಶಸ್ಸು ಸಾಧಿಸಲು ಇದು ಸಹಕಾರಿಯಾಗಲಿದೆ.”

ಕಾರ್ಯಕ್ರಮ ವಿವರಗಳು:
📅 ದಿನಾಂಕ: ಶನಿವಾರ, ಮಾರ್ಚ್ 22, 2025
🕒 ಸಮಯ: ಸಂಜೆ 5:00 ರಿಂದ 6:00 ಗಂಟೆಯವರೆಗೆ
📍 ಸ್ಥಳ: ಆನ್‌ಲೈನ್ (Google Meet)

ಈ ಕಾರ್ಯಕ್ರಮವು ವರ್ಡ್‌ಪ್ರೆಸ್ ಗೆ ಆಸಕ್ತಿಯುಳ್ಳ ಎಲ್ಲರಿಗೂ ತೆರೆದಿರುತ್ತದೆ — ಪ್ರಾರಂಭಿಕರಿಂದ ಅನುಭವೀ ವೃತ್ತಿಪರರಿಗೆ.

ಭಾಗವಹಿಸುವವರು ಪರಸ್ಪರ ಸಂಪರ್ಕ ಸಾಧಿಸಲು, ಜ್ಞಾನ ಹಂಚಿಕೊಳ್ಳಲು ಮತ್ತು ವರ್ಡ್‌ಪ್ರೆಸ್ ಯೋಜನೆಗೆ ಹೊಸ ರೀತಿಯಲ್ಲಿನ ಕೊಡುಗೆಗಳನ್ನು ಅನ್ವೇಷಿಸಲು ಅವಕಾಶವನ್ನು ಪಡೆಯುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಅಥವಾ ಕಾರ್ಯಕ್ರಮಕ್ಕೆ ನೋಂದಣಿ ಮಾಡಲು: https://www.meetup.com/wpudupi/events/306773623/ ಗೆ ಭೇಟಿ ನೀಡಿ.

ವರ್ಡ್‌ಪ್ರೆಸ್ ಉಡುಪಿ ಸಮುದಾಯದ ಬಗ್ಗೆ:

ವರ್ಡ್‌ಪ್ರೆಸ್ ಉಡುಪಿ ಸಮುದಾಯವು ಜಾಗತಿಕ ವರ್ಡ್‌ಪ್ರೆಸ್ ಪರಿಸರದ ಅಂಗವಾಗಿದ್ದು, ಸ್ಥಳೀಯ ಪ್ರತಿಭೆಗಳನ್ನು ಒಗ್ಗೂಡಿಸಿ ಕಲಿಯಲು, ಬೆಳೆಯಲು ಮತ್ತು ಮುಕ್ತ ಮೂಲ ವರ್ಡ್‌ಪ್ರೆಸ್ ಯೋಜನೆಗೆ ಕೊಡುಗೆ ನೀಡಲು ನೆರವಾಗುತ್ತದೆ. ಈ ಸಮುದಾಯವು ನಿಯಮಿತವಾಗಿ ಸಭೆಗಳನ್ನು, ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ವರ್ಡ್‌ಪ್ರೆಸ್ ನೆಟ್‌ವರ್ಕ್‌ನಲ್ಲಿ ಸಹಕಾರ ಮತ್ತು ನಾವೀನ್ಯತೆಯನ್ನು ಬೆಳೆಸಲು ಉದ್ದೇಶಿಸಿದೆ.

ಸಂಪರ್ಕದಲ್ಲಿರಿ

Related posts

ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ನಿವೃತ್ತ ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗ್ಡೆ ಭೇಟಿ

ತಮ್ಮ “ಅಭಿಮಾನಿ” ಸುನೀತಾ ವಿಲಿಯಮ್ಸ್‌ಗೆ ಶುಭವಾಗಲಿ ಎಂದು ಹಾರೈಸಿದ ಪರ್ಯಾಯ ಶ್ರೀಗಳು

ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿ ಬಂಧನ, ನಗದು ವಶ