ಉಡುಪಿ-ಚಿಕ್ಕಮಗಳೂರು ಮತ ಎಣಿಕೆ ಕೇಂದ್ರದ ಸುತ್ತ ವ್ಯಾಪಕ ಬಂದೋಬಸ್ತ್ – ಎಸ್ಪಿ ಡಾ.ಅರುಣ್

ಉಡುಪಿ : ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮತ ಎಣಿಕೆ ನಾಳೆ ಬೆಳಿಗ್ಗೆ ಉಡುಪಿ ನಗರದ ಸೈಂಟ್ ಸಿಸಿಲೀಸ್ ಶಾಲೆಯಲ್ಲಿ ನಡೆಯಲಿದ್ದು ಈ ಸಂಬಂಧ ವ್ಯಾಪಕ ಬಂದೋಬಸ್ತ್ ಕೈಗೊಂಡಿರುವುದಾಗಿ ಉಡುಪಿ ಎಸ್ಪಿ ಡಾ.ಅರುಣ್ ಕೆ.ಹೇಳಿದ್ದಾರೆ.

ಕೌಂಟಿಂಗ್ ಸೆಂಟರ್ ಸುತ್ತ ಭದ್ರತೆಗಾಗಿ ಸುಮಾರು 350 ಪೊಲೀಸರನ್ನು ನಿಯೋಜಿಸಲಾಗಿದೆ. 1 ಕೆಎಸ್‌ಆರ್‌ಪಿ ಮತ್ತು 1 ಡಿಎಆರ್ ಜೊತೆಗೆ ಒಂದು ಅಗ್ನಿಶಾಮಕ ವಾಹನವು ಸ್ಥಳದಲ್ಲಿ ಕಾರ್ಯಾಚರಿಸಲಿವೆ.

ಬಂದೋಬಸ್ತ್ ಉದ್ದೇಶದಿಂದ ಜಿಲ್ಲೆಯಾದ್ಯಂತ ಸೂಕ್ಷ್ಮ ಮತ್ತು ಆಯಕಟ್ಟಿನ ಪ್ರದೇಶಗಳಲ್ಲಿ ಸುಮಾರು 400 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ ಜಿಲ್ಲೆಯ ವಿವಿಧೆಡೆ 3 ಕೆಎಸ್‌ಆರ್‌ಪಿ ಮತ್ತು 3 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ 112 ಸಹಾಯವಾಣಿ ಸಂಪರ್ಕಿಸುವಂತೆ ಎಸ್ಪಿ ಡಾ. ಅರುಣ್ ಕೆ.ಮನವಿ ಮಾಡಿದ್ದಾರೆ.

Related posts

ಯುವನಿಧಿಯ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ನೀಡಿ : ರಮೇಶ್ ಕಾಂಚನ್

ದೆಹಲಿಗೆ ಮಹಿಳಾ ಮುಖ್ಯಮಂತ್ರಿ : ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಸಂಭ್ರಮಾಚರಣೆ

ನಿಲ್ಲಿಸಿದ್ದ ಮೀನುಗಾರಿಕಾ ಬೋಟ್‌ನಲ್ಲಿ ಅಗ್ನಿ ಅವಘಡ – 15 ಲಕ್ಷ ರೂ.ನಷ್ಟ