ಕಾನ್‌ಸ್ಟೇಬಲ್‌ನಿಂದಲೇ ಲಂಚ ಪಡೆಯುತ್ತಿದ್ದಾಗ ಕೆಎಸ್ಆರ್‌ಪಿ ಇನ್‌ಸ್ಪೆಕ್ಟರ್ ಲೋಕಾಯುಕ್ತ ಬಲೆಗೆ

ಮಂಗಳೂರು : ನಗರದ ಕೊಣಾಜೆಯ ಕೆಎಸ್ಆರ್‌ಪಿ 7ನೇ ಬೆಟಾಲಿಯನ್‌ ಇನ್‌ಸ್ಪೆಕ್ಟರ್ ಮಹಮ್ಮದ್ ಹ್ಯಾರೀಸ್ ಎಂಬಾತ 18ಸಾವಿರ ರೂ. ಲಂಚ ಪಡೆಯುತ್ತಿದ್ದಾಗಲೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾನೆ.

ಕೆಎಸ್ಆರ್‌ಪಿ 7ನೇ ಬೆಟಾಲಿಯನ್‌‌ನ ಪೊಲೀಸ್ ಅತಿಥಿಗೃಹದಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಲು ಮೀಸಲು ಪೊಲೀಸ್ ಕಾನ್ಸ್‌ಸ್ಟೇಬಲ್‌ರಿಂದ ಮಹಮ್ಮದ್ ಹ್ಯಾರೀಸ್ 20,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಜೊತೆಗೆ ಪ್ರತೀ ತಿಂಗಳು 6,000 ರೂ.ನಂತೆ ಹಣ ನೀಡಬೇಕೆಂದು ಲಂಚ ಕೇಳಿದ್ದ. ಅದರಂತೆ ಮೊದಲಿಗೆ 20000 ಹಣನೀಡಿ, ಬಳಿಕ ಪ್ರತಿ ತಿಂಗಳು 6,000ದಂತೆ ಲಂಚ ನೀಡುತ್ತಾ ಬಂದಿದ್ದಾರೆ. ಈ ಮೂಲಕ ಈವರೆಗೆ ಒಟ್ಟು 50,000 ರೂ. ಲಂಚ ನೀಡಲಾಗಿತ್ತು.

ಆದರೆ ಪೊಲೀಸ್ ಕಾನ್ಸ್‌ಸ್ಟೇಬಲ್‌ ತಂದೆಯ ಅನಾರೋಗ್ಯದ ಹಿನ್ನೆಲೆಯಲ್ಲಿ 3ತಿಂಗಳಿನಿಂದ ಲಂಚ ನೀಡಲು ಸಾಧ್ಯವಾಗಿರಲಿಲ್ಲ. ಆದ್ದರಿಂದ ಮಹಮ್ಮದ್ ಹ್ಯಾರೀಸ್ ಪ್ರತಿದಿನ ಕರೆಮಾಡಿ 18,000 ರೂ. ಹಣ ಲಂಚವಾಗಿ ನೀಡಬೇಕೆಂದು ಇಲ್ಲವಾದರೆ ಡ್ಯೂಟಿ ಬದಲಾಯಿಸುತ್ತೇನೆ ಎಂದು ಫಿರ್ಯಾದಿದಾರರಿಗೆ ಬೆದರಿಸುತ್ತಿದ್ದ.

ಇದರಿಂದ ಬೇಸತ್ತ ಪೊಲೀಸ್ ಕಾನ್ಸ್‌ಸ್ಟೇಬಲ್‌ ಮಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅದರಂತೆ 18,000 ಲಂಚ ಪಡೆಯುತ್ತಿದ್ದಾಗಲೇ ಮಹಮ್ಮದ್ ಹ್ಯಾರೀಸ್‌ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.

Related posts

ಮಂಗಳೂರು ವಿವಿಯಿಂದ ಯಕ್ಷ ಮಂಗಳ ಪ್ರಶಸ್ತಿ ಪ್ರದಾನ

National Fame Award of India Books of Award – Sushanth Brahmavar

ಯಕ್ಷಗಾನ ಹಾಸ್ಯಗಾರ ಮುಖ್ಯಪ್ರಾಣ ಕಿನ್ನಿಗೋಳಿ ನಿಧನಕ್ಕೆ ಅಕಾಡೆಮಿ ಅಧ್ಯಕ್ಷ ಡಾ. ತಲ್ಲೂರು ಸಂತಾಪ