ಪ್ರಾರ್ಥನಾ ಮಂದಿರಕ್ಕೆ ಬಂದವರಲ್ಲಿ ಶಸ್ತ್ರಾಸ್ತ್ರಗಳು ಎಲ್ಲಿಂದ ಬಂತು ಎಂದು ತನಿಖೆಯಾಗಲಿ – ನಳಿನ್

ಮಂಗಳೂರು : ಬೋಳಿಯಾರುವಿನ ಪ್ರಾರ್ಥನಾ ಮಂದಿರಕ್ಕೆ ಪ್ರಾರ್ಥನೆಗೆ ಬಂದವರ ಕೈಯಲ್ಲಿ ಶಸ್ತ್ರಾಸ್ತ್ರಗಳು ಹೇಗೆ ಬಂದಿದೆ. ಹಾಗಾದರೆ ಇಲ್ಲಿರುವ ಪ್ರಾರ್ಥನಾ ಮಂದಿರಗಳಲ್ಲಿ ಇದೇ ವಸ್ತುಗಳು ಇರೋದಾ? ಇವರು ದೇವರ ಪ್ರಾರ್ಥನೆಗೆ ಬರುತ್ತಾರೆಯೋ ಅಥವಾ ಗಲಭೆಗಳಿಗೆ ಪ್ರಚೋದನೆ ನೀಡಲು ಬರುತ್ತಾರೋ? ಆದ್ದರಿಂದ ಈ ಪ್ರಾರ್ಥನಾ ಮಂದಿರಗಳ ಬಗ್ಗೆಯೂ ತನಿಖೆಯಾಗಲಿ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಆಗ್ರಹಿಸಿದರು.

ಭಾರತ್ ಮಾತಾಕಿ ಜೈ ಅನ್ನೋದು ತಪ್ಪಾ? ಹಾಗಾದರೆ ಬೋಳಿಯಾರು ಎಲ್ಲಿ ಪಾಕಿಸ್ತಾನದಲ್ಲಿದೆಯೇ? ಇದೊಂದು ರೀತಿಯ ಭಯೋತ್ಪಾದನೆಯಾಗಿದ್ದು, ಪ್ರಕರಣವನ್ನು ಸಿಎಂ ಹಾಗೂ ಗೃಹಸಚಿವರು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಬೇಕು. ಚೂರಿ ಇರಿತಕ್ಕೊಳಗಾದ ಹರೀಶ್ ಹಾಗೂ ನಂದ ಕುಮಾರ್‌ಗೆ ಸರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ಭಾರತ್ ಮಾತಾಕೀ ಜೈ ಘೋಷಣೆ ಕೂಗಿದವರ ಮೇಲೆ ಎಫ್ಐಆರ್ ಹಾಕಲಾಗಿದೆ. ಹಾಗಾದರೆ ರಾಜ್ಯದಲ್ಲಿರೋದು ತುಘಲಕ್ ಸರಕಾರವೇ? ಈ ದೇಶದಲ್ಲಿ, ರಾಜ್ಯದಲ್ಲಿ ಭಾರತ್ ಮಾತಾಕೀ ಜೈ ಘೋಷಣೆ ಕೂಗೋದು ಕಾನೂನು ವಿರುದ್ಧವೇ? ಅಪರಾಧವೇ? ಸರಕಾರಿ ಕಾರ್ಯಕ್ರಮಗಳಲ್ಲಿ ಈ ರೀತಿ ಘೋಷಣೆ ಕೂಗಿದವರ ಮೇಲೆ ಕೇಸ್ ಹಾಕಲಾಗುತ್ತದೆಯೇ? ಕಾಂಗ್ರೆಸ್‌ನ ಮೂರು ಮೆರವಣಿಗೆಗಳಲ್ಲಿ ಪಾಕ್ ಪರ ಘೋಷಣೆ ಕೇಳಿ ಬಂದಿದೆ. ಪಾಕ್ ಧ್ವಜ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಅವರ ಮೇಲೆ ಯಾಕೆ ಕೇಸ್ ಆಗಿಲ್ಲ? ಏನು ಕ್ರಮ ಕೈಗೊಂಡಿದ್ದೀರಿ? ಗೃಹಸಚಿವರು ಹೊಟ್ಟೆಗೇನು ಅನ್ನ ತಿನ್ನುತ್ತಾರಾ? ಏನು ತಿನ್ನುತ್ತಾರೆ? ಸರಕಾರ ರಾಜ್ಯದ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ತಕ್ಷಣ ಭಾರತ್ ಮಾತಾಕೀ ಘೋಷಣೆ ಕೂಗಿದವರ ಮೇಲೆ ಪ್ರಕರಣ ವಾಪಸ್ ತೆಗೆದುಕೊಳ್ಳಬೇಕು.

ಕೇಸ್ ಹಾಕುವುದಿದ್ದರೆ ಸಿಎಂ ಸಿದ್ದರಾಮಯ್ಯರ ಮೇಲೆ ಕೇಸ್ ಹಾಕಬೇಕು. ಈ ದೇಶದ ಮಹಿಳಾ ರಾಷ್ಟ್ರಪತಿಯನ್ನೇ ಅವರು ಏಕವಚನದಲ್ಲಿ ಕರೆದಿದ್ದಾರೆ. ಅದಕ್ಕಿಂತ ಘೋರ ಅಪರಾಧ ಇನ್ನೊಂದಿಲ್ಲ. ಮಹಿಳೆಗೆ ಅಪಮಾನ, ರಾಷ್ಟ್ರಪತಿ ಸ್ಥಾನಕ್ಕೆ ಅಪಮಾನ, ಎಸ್ಟಿ ಮಹಿಳೆಗೆ ಅಪಮಾನ ಸೇರಿದಂತೆ ಮೂರು ಕೇಸ್ ಅವರ ಮೇಲೆ ಹಾಕಬೇಕು ಎಂದು ನಳಿನ್ ಹೇಳಿದರು.

Related posts

ಸಿಬ್ಬಂದಿಗಳಿಗೆ ಝೂನೋಟಿಕ್ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕುರಿತ ತರಬೇತಿ ಸಾಧನಗಳನ್ನು ಪ್ರಾರಂಭಿಸಿದ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್

ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿ ದೀಪೇಶ್ ದೀಪಕ್ ಶೆಣೈ ದ್ವಿತೀಯ

ನೇಜಾರಿನ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣ – ತಮ್ಮ ವಕಾಲತ್ತನ್ನು ವಾಪಾಸು ಪಡೆದ ಆರೋಪಿ ಪ್ರವೀಣ್ ಚೌಗುಲೆ ಪರ ವಕೀಲರು