ಹೂವಿನ ವ್ಯಾಪಾರಿಗಳ ಸಂಘದಿಂದ ವೀಲ್‌‌ಚೇರ್‌ ಕೊಡುಗೆ

ಕುಂದಾಪುರ : ನಗರದ ಮುಖ್ಯ ರಸ್ತೆಯಲ್ಲಿರುವ ಕುಂದಾಪುರ ಹೂವಿನ ವ್ಯಾಪಾರಿಗಳ ಸಂಘ ಇವರ 34ನೇ ವರ್ಷದ ವಾರ್ಷಿಕೋತ್ಸವ ಹಾಗೂ ಕುಂದೇಶ್ವರ ದೀಪೋತ್ಸವದ ಪ್ರಯುಕ್ತ ಕುಂದಾಪುರದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಎರಡು ವೀಲ್‌ಚೇರ್ ಹಸ್ತಾಂತರ ಹಾಗೂ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.

ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಜರುಗಿದ ಸರಳ ಸಮಾರಂಭದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿಗಳಾದ ಡಾ.ಚಂದ್ರ ಮರಕಾಲರವರಿಗೆ ವೀಲ್‌‌ಚೇರ್‌ಗಳನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಹೂವಿನ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಸುಧೀರ್‌ ಪೂಜಾರಿ, ಉಪಾಧ್ಯಕ್ಷರಾದ ಪ್ರಕಾಶ್‌ ಆರ್‌ ಖಾರ್ವಿ, ಸಂಘದ ಮಾಜಿ ಅಧ್ಯಕ್ಷರಾದ ಸತೀಶ್‌ ಪೂಜಾರಿ ಹಾಗೂ ಸದಸ್ಯರಾದ ಚಂದ್ರ ಪೂಜಾರಿ, ದಿನೇಶ್‌ ಮೇಸ್ತ, ಚಂದ್ರ ಮೊಗವೀರ ಹಾಗೂ ಸಂಘದ ಸದಸ್ಯರು ಮತ್ತು ಡಾ.ಮಹೇಂದ್ರ ಶೆಟ್ಟಿ, ಡಾ.ಸುಜಾತ ಮತ್ತು ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಮಹಿಳೆಗೆ ಕಟ್ಟಿ ಥಳಿಸಿದ ಪ್ರಕರಣ; ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಜಾಮೀನು

ನವೀಕರಿಸಿದ ಡಯಾಲಿಸಿಸ್ ಘಟಕದ ಉದ್ಘಾಟನೆ

ವಿಶ್ವದ ವೇಗದ ಭಗವದ್ಗೀತಾ ಲೇಖಕ : ಕೇವಲ 5.30 ಗಂಟೆಗಳಲ್ಲಿ 18 ಅಧ್ಯಾಯ ಮತ್ತು 700 ಶ್ಲೋಕಗಳ ಬರಹ ಪೂರ್ಣಗೊಳಿಸಿದ ಅದ್ಭುತ ಸಾಧನೆ!