‘ಅನಾಥಾಶ್ರಮಗಳೊಂದಿಗೆ ನಾವು ನೀವು’ ಎಂಬ ಸೇವಾ ಕಾರ್ಯ

ಉಡುಪಿ : ‘ಅನಾಥಾಶ್ರಮಗಳೊಂದಿಗೆ ನಾವು ನೀವು’ ಎನ್ನುವ ಶೀರ್ಷಿಕೆ ಅಡಿಯಲ್ಲಿ ಸುಧೀರ್ ಶೆಟ್ಟಿ ಮಲ್ಯಾಡಿ, ಮಂಜು ಸೈಬರ್ ಕಟ್ಟೆ, ಗಣೇಶ ಶೆಟ್ಟಿ ಉಳ್ತೂರು ಇವರ ನೇತೃತ್ವದ ತಂಡದಿಂದ ನೆರವಿನ ಹೊರೆ ಕಾಣಿಕೆ ಶನಿವಾರ ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ, ವಿಟ್ಟಲ್ ಶೆಟ್ಟಿ ಕೊರ್ಗಿ ಇವರಿಂದ ಉದ್ಘಾಟನೆ‌ಗೊಂಡಿತು. ನಾಲ್ಕು ಆಶ್ರಮಗಳಿಗೆ ನಾಲ್ಕು ಲಕ್ಷಕ್ಕೂ ಮಿಕ್ಕಿದ ವಸ್ತುಗಳನ್ನು ದಾನಿಗಳ ಸಹಕಾರದಿಂದ ಅನಾಥಾಶ್ರಮಗಳಿಗೆ ಕೊಟ್ಟು ಬರಲಾಯಿತು.

ಈ ಸಂದರ್ಭದಲ್ಲಿ ಪ್ರಶಾಂತ್ ಶೆಟ್ಟಿ ಉಳ್ತೂರು, ಗಣೇಶ ಶೆಟ್ಟಿ ಮಲ್ಯಾಡಿ, ಪ್ರತಾಪ್ ಶೆಟ್ಟಿ ಉಳ್ತೂರು, ದಿನೇಶ್ ಪೂಜಾರಿ ಕೆದೂರು, ನಾಗರಾಜ ಹೊಸಮಠ, ಕೃಷ್ಣಶೆಟ್ಟಿ ಶಾನಾಡಿ, ದಿನೇಶ್ ಶೆಟ್ಟಿ ಕೆದೂರು, ಚಂದ್ರಶೇಖರ್ ಕೊಟ್ಟಾರಿ ಊಳ್ತೂರು, ನವೀನ್ ಚಂದ್ರ ಶೆಟ್ಟಿ ಬೇಳೂರು ಉಪಸ್ಥಿತರಿದ್ದರು.

ವಿಶು ಶೆಟ್ಟಿ ಅಂಬಲಪಾಡಿ ಮಾತನಾಡಿ ರಾಜ್ಯದಲ್ಲೇ ಪ್ರಥಮ ಎನ್ನುವಂತೆ ನೆರವಿನ ಹೊರೆ ಕಾಣಿಕೆ ಅನಾಥಾಶ್ರಮಗಳಿಗೆ ಇವತ್ತು ಹೋಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಅನಾಥಾಶ್ರಮಗಳಿಗೂ ಈ ಹೊರೆ ಕಾಣಿಕೆ ಅಭಿಯಾನ ಆರಂಭಿಸುವ ಯುವಕರು ಊರು ಊರುಗಳಲ್ಲಿ ಹುಟ್ಟಿಕೊಳ್ಳಲಿ ಎಂದು ಆಶಿಸಿದರು.

Related posts

ಮಣಿಪಾಲದಲ್ಲಿ ಸಂಚಾರ ನಿಯಮ ಉಲ್ಲಂಘನೆ: ಐವರು ವಿದ್ಯಾರ್ಥಿಗಳು ಒಂದೇ ದ್ವಿಚಕ್ರ ವಾಹನದಲ್ಲಿ!

ಗ್ಯಾಸ್ ಹಚ್ಚುವಾಗ ಬೆಂಕಿ ತಗುಲಿ ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಜನಿವಾರ ತೆಗೆಸಿದ ಪ್ರಕರಣ – ಒಂದು ಸಮಾಜದ ಮೇಲೆ ದಬ್ಬಾಳಿಕೆ ಸರಿಯಲ್ಲ : ಕೋಟ