ಮಳೆ ನಿಂತರೂ ನಿಲ್ಲದ ನೆರೆಹಾವಳಿ; ಮನೆ, ವಸತಿಗೃಹ, ಗರಡಿಗೆ ನುಗ್ಗಿದ ನೀರು – ಉಡುಪಿಯ ಹಲವೆಡೆ ಕೃತಕ ನೆರೆ

ಉಡುಪಿ : ಕಳೆದ 24 ಗಂಟೆ ಸುರಿದ ಭಾರೀ ಮಳೆಗೆ ಉಡುಪಿಯ ಹಲವೆಡೆ ಕೃತಕ ನೆರೆ ಉಂಟಾಗಿದೆ. ನಗರದ ಹಲವೆಡೆ ಕೃತಕ ನೆರೆಯ ಪರಿಣಾಮ ಮನೆಗಳು, ವಸತಿಗೃಹ ಮತ್ತು ಗರಡಿಗೆ ನೀರು ನುಗ್ಗಿದೆ.

ನಗರದ ಮೂಡನಿಡಂಬೂರು ಪರಿಸರದಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮನೆ, ದೇವಾಲಯಗಳಿಗೆ ನೀರು ನುಗ್ಗಿದೆ. ದೈವಾರಾದನೆ ನಡೆಯುವ ಮೂಡನಿಡಂಬೂರು ಗರಡಿಗೆ ನೀರು ನುಗ್ಗಿದ್ದು ಗರಡಿ ಪರಿಸರದಲ್ಲಿ ಜನ, ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಇಂದು ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ನೆಲೆಸಿದ್ದು ಮಳೆ ಮುಂದುವರೆಯುವ ಸಾಧ್ಯತೆಯಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ವಿದ್ಯುತ್ ಸಂಪರ್ಕ ರಾತ್ರಿಯಿಂದಲೇ ಕಡಿತಗೊಂಡಿದೆ.

Related posts

ಅಣ್ಣನಿಂದ ಲಕ್ಷಾಂತರ ರೂ. ಚಿನ್ನ ಪಡೆದು ತಂಗಿಯಿಂದಲೇ ವಂಚನೆ

ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ – ಉಲ್ಲಂಘಿಸಿದರೆ ಕಠಿಣ ಕ್ರಮ

ಮಾ.31ರಂದು ಬಜೆಟ್‌ನಲ್ಲಿ ಉಡುಪಿ ಜಿಲ್ಲೆಗೆ ಮಲತಾಯಿ ಧೋರಣೆ ತೋರಿದ ರಾಜ್ಯ ಕಾಂಗ್ರೆಸ್ ಸರಕಾರದ ವಿರುದ್ಧ ಪ್ರತಿಭಟನೆ